Site icon TUNGATARANGA

ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಸ್ಮಶಾನಕ್ಕೆ ಜಾಗ ನೀಡಿಲ್ಲ, ಈಗಲಾದರೂ ಖಬರಸ್ಥಾನಕ್ಕೆ ಜಾಗ ನೀಡಿ :ಜಿಲ್ಲಾಧಿಕಾರಿಗಳಿಗೆ ಮನವಿ

ಶಿವಮೊಗ್ಗ,ಅ.೧೪: ಖಬರಸ್ಥಾನಕ್ಕಾಗಿ ಜಮೀನು ನೀಡಬೇಕು ಎಂದು ಚೋರಡಿಯ ಜಾಮೀಯಾ ಮಸ್ಜಿದ್ ಕಮೀಟಿಯ ಮುಖಂಡರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.


ಶಿವಮೊಗ್ಗ ತಾಲ್ಲೂಕಿನ ಚೋರಡಿ ಗ್ರಾಮದಲ್ಲಿ ೧೫೦ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿವೆ. ಆದರೆ ಮುಸ್ಲಿಂರು ಮರಣ ಹೊಂದಿರೆ ಅವರ ಅಂತ್ಯ ಸಂಸ್ಕಾರ ಮಾಡಲು ಜಾಗವೇ ಇಲ್ಲವಾಗಿದೆ. ಇದುವರೆಗೂ ಕುಮದ್ವತಿ ನದಿಯ ದಡದಲ್ಲಿಯೇ ದಫನ್ ಮಾಡಿಕೊಂಡು ಬರುತ್ತಿದ್ದರು. ಆದರೆ ಇದಕ್ಕೆ ಯಾವುದೇ ದಾಖಲಾತಿ ಇಲ್ಲ, ಮತ್ತು ಅತಿವೃಷ್ಠಿಯಯಿಂದಾಗಿ ಗೋರಿ ಸಮೇತ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿವೆ ಎಂದು ಮನವಿದಾರರು ತಿಳಿಸಿದರು.


ಈ ಬಗ್ಗೆ ಕಳೆದ ೨೫ ವರ್ಷಗಳಿಂದಲೂ ಬೇಡಿಕೆ ಇಡುತ್ತಾ ಬಂದಿದ್ದೆವು ಆದರೂ ಕೂಡ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಸ್ಮಶಾನಕ್ಕೆ ಜಾಗ ನೀಡಿಲ್ಲ, ಆದ್ದರಿಂದ ಈಗಲಾದರೂ ಖಬರಸ್ಥಾನಕ್ಕೆ ಜಾಗ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ಚೋರಡಿ ಜಾಮೀಯಾ ಮಸ್ಜಿದ್‌ಯ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಅನ್ಸರ್, ಅತಾವುಲ್ಲಾ, ಸನಾವುಲ್ಲಾ, ಬಾಷಾ, ನಯಾಬ್ ಅಹಮ್ಮದ್, ಕಲೀವುಲ್ಲಾ, ರಿಜ್ವಾನ್, ನಜೀರ್ ಅಹಮ್ಮದ್, ಮೊಹಮ್ಮದ್ ಮೊದಾಸಿರ್, ಸಮೀವುಲ್ಲಾ, ಖಾಸೀಂ ಸೇರಿದಂತೆ ಇನ್ನಿತರರಿದ್ದರು.

Exit mobile version