Site icon TUNGATARANGA

ಸೊರಬ | ಫೆ.01 ರಿಂದ ಕರಾಟೆ ತರಬೇತಿ


ಸೊರಬ: ಮೌಲೆ ಶೋಟೊಕೋನ್ ಕರಾಟೆ ಡು ಅಸೋಸಿಯೇಶನ್ ಇಂಡಿಯಾ ಮತ್ತು ಸಾಗರ ಕರಾಟೆ ಇನ್ಸ್‌ಟಿಟ್ಯೂಟ್ ವತಿಯಿಂದ ತಾಲ್ಲೂಕಿನಲ್ಲಿಯೇ ಮೊದಲ ಬಾರಿಗೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪದ ದಾನಮ್ಮ ಕಾಂಪ್ಲೆಕ್ಸ್‌ನಲ್ಲಿ ಫೆ. 1ರಿಂದ ಕರಾಟೆ ತರಬೇತಿ ಆಯೋಜಿಸಲಾಗಿದೆ.


ಸಾಗರ ತಾಲ್ಲೂಕು ಸ್ಪೋಟ್ಸ್ ಕರಾಟೆ ಅಸೋಶಿಯೇಷನ್ ಅಧ್ಯಕ್ಷ ಹಾಗೂ ೫ನೇ ಡಾನ್ ಬ್ಲಾಕ್ ಬೆಲ್ಟ್‌ನ ಸನ್ ಸೈ ಪಂಚಪ್ಪ ತರಬೇತಿ ನೀಡಲಿದ್ದಾರೆ. ೨೦೦೧ರಿಂದ ಇವರು ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿದ್ದು, ಶ್ರೀಲಂಕಾ, ನೇಪಾಳ ಸೇರಿದಂತೆ ವಿವಿಧ ದೇಶಗಳಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ರಾಷ್ಟ್ರೀಯ ಫೆಡರೇಷನ್‌ನಿಂದ ಕರಾಟೆ ಪದವಿ ಪುರಸ್ಕೃತರಾಗಿರುವ ಇವರು ಅಂತರಾಷ್ಟ್ರೀಯ ಪದಕ ವಿಜೇತರಾಗಿದ್ದಾರೆ.
ಎಲ್ಲಾ ವಯೋಮಾನದವರು ಕಲಿಯಬಹುದಾಗಿದ್ದು, ಏಕಾಗ್ರತೆ ಮಟ್ಟ ಹೆಚ್ಚುವುದು. ದೈಹಿಕ ಮತ್ತು ಮಾನಸಿಕ ಸದೃಡತೆ, ಕ್ರೀಡಾ ಭವಿಷ್ಯಕ್ಕೆ, ಆತ್ಮ ರಕ್ಷಣೆಗಾಗಿ ಹಾಗೂ ಉತ್ತಮ ಆರೋಗ್ಯ ಮತ್ತು ಶಿಸ್ತಿನ ಜೀವನವನ್ನು ಕರಾಟೆಯಿಂದ ಕಲಿಯಬಹುದಾಗಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: : 94491 00414
ಅಥವಾ 99162 73140 ಗೆ ಸಂಪರ್ಕಿಸಬಹುದಾಗಿದೆ ಎಂದು ಕರಾಟೆ ತರಬೇತುದಾರ ಸನ್ ಸೈ ಪಂಚಪ್ಪ ತಿಳಿಸಿದ್ದಾರೆ.

Exit mobile version