Site icon TUNGATARANGA

ಅಜೀಂ ಪ್ರೇಮ್‌ಜಿ ವಿ.ವಿ.ಯಿಂದ ಶಿಕ್ಷಣ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಾತಿ


ಶಿವಮೊಗ್ಗ,ಅ.೮: ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಶಿಕ್ಷಣ ಶೈಕ್ಷಣಿಕ ಮೌಲ್ಯಮಾಪನ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಾತಿ ಆರಂಭಿಸಿದೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಇಂದುಪ್ರಸಾದ್ ತಿಳಿಸಿದ್ದಾರೆ.


ಒಂದು ವರ್ಷದ ಈ ಅರೆಕಾಲಿಕ ಕಾರ್ಯಕ್ರಮವು ಮೌಲ್ಯಮಾಪನಗಳ ವಿಷಯದಲ್ಲಿ ತಾತ್ವಿಕ ಮತ್ತು ಪ್ರಾಯೋಗಿಕ ವಿಷಯಗಳ ಸಂತುಲಿತ ಸಂಯೋಜನೆಯಾಗಿದೆ. ಇದನ್ನು ಆನ್‌ಲೈನ್ ಮತ್ತು ಕ್ಯಾಂಪಸ್ ತರಗತಿಗಳನ್ನು ಒಳಗೊಂಡಂತೆ ಸಂಯೋಜಿತ ವಿಧಾನದಲ್ಲಿ ನೀಡಲಾಗುವುದು

. ಈ ಕಾರ್ಯಕ್ರಮವು ಮೌಲ್ಯಮಾಪನದ ಸಂಸ್ಕೃತಿಯಲ್ಲಿ ಸಕಾರತ್ಮಕ ಬದಲಾವಣೆಯನ್ನು ತರುವುದಕ್ಕಾಗಿ ಶಿಕ್ಷಕರು, ಶಿಕ್ಷಕ ಪ್ರಶಿಕ್ಷಕರು, ಶೈಕ್ಷಣಿಕ ಅಧಿಕಾರಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರ ವೃತ್ತಿಪರರು ಸೇರಿದಂತೆ ಪ್ರಮುಖ ಸಹಭಾಗಿಗಳಲ್ಲಿ

ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಮನೋಧರ್ಮವನ್ನು ಒದಗಿಸುವ ಮೂಲಕ ಅವರಲ್ಲಿ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶವನ್ನು ಹೊಂದಿದೆ.


ಕನಿಷ್ಠ ಎರಡು ವರ್ಷಗಳಿಂದ ಅಗತ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರಿಗಾಗಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಇವರಲ್ಲಿ ಶಿಕ್ಷಕರು, ಶೈಕ್ಷಣಿಕ ಸಂಯೋಜಕರು, ಶಿಕ್ಷಕ ಬೋಧಕರು, ಪಠ್ಯಕ್ರಮ ವಿನ್ಯಾಸಕರು, ಪ್ರಶ್ನೆ ಪತ್ರಿಕೆಯನ್ನು ಅಭಿವೃದ್ಧಿಪಡಿಸುವವರು, ಪಠ್ಯಪುಸ್ತಕದ ಲೇಖಕರು, ಶೈಕ್ಷಣಿಕ ಸಮಾಲೋಚಕರು, ಮೌಲ್ಯಮಾಪನ ವೃತ್ತಿಯವರು ಮತ್ತು ಇತರ ಯಾವುದೇ ಎನ್.ಜಿ.ಒ ವೃತ್ತಿಪರರು ಸೇರ್ಪಡೆಯಾಗಬಹುದು.


ಮೌಲ್ಯಮಾಪನದ ಪರಿಕಲ್ಪನೆಗಳು, ತತ್ವಗಳು, ವಿಧಾನಗಳು ಮತ್ತು ಶಿಕ್ಷಣದ ಗುಣಮಟ್ಟದ ಸುಧಾರಣೆಯಲ್ಲಿ ಅವರು ಹೊಂದಿರುವ ಪಾತ್ರದ ಕುರಿತು ಸಮಗ್ರ ಗ್ರಹಿಕೆಯನ್ನು ಬೆಳೆಸಿಕೊಳ್ಳಲು ಇದು ಅನುಕೂಲವಾಗುತ್ತದೆ. ಸಾಮರ್ಥ್ಯ ಆಧರಿತ ಪ್ರಶ್ನಾಪತ್ರಿಕೆಗಳು, ಪ್ರಾಜೆಕ್ಟ್‌ಗಳು,

ಪೋರ್ಟ್‌ಫೋಲಿಯೋಗಳು, ಅಧ್ಯಾಯ ಶೀರ್ಷಿಕೆಗಳು, ಪರಿಶೀಲನಾ ಪಟ್ಟಿಗಳು, ಗುಂಪಿನ ಮೌಲ್ಯಮಾಪನಗಳು ಮತ್ತು ಸ್ವಯಂ

ಮೌಲ್ಯಮಾಪನಗಳ ಸರಿಯಾದ ಮತ್ತು ವಿಶ್ವಾಸಾರ್ಹ ಮೌಲ್ಯಮಾಪನ ಸಾಧನಗಳನ್ನು ಹೆಚ್ಚಿಸಿಕೊಂಡು ವಿದ್ಯಾರ್ಥಿಗಳ ಕಲಿಕೆ ಮತ್ತು ತರಗತಿ ಕೋಣೆಯ ಒಟ್ಟಾರೆ ಪ್ರಕ್ರಿಯೆಗಳಲ್ಲಿ ಮೌಲ್ಯಮಾಪನದ ದತ್ತಾಂಶವನ್ನು ಬಳಸಿಕೊಳ್ಳಲು ಈ ಶಿಕ್ಷಣ ಸಹಕಾರಿಯಾಗುತ್ತದೆ.


ಅವರು ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ೨೦-೧೧-೨೦೨೪. ಮಾಹಿತಿಗಾಗಿ ವೆಬ್ ಸೈಟ್ Postgraduate Diploma in Education Educational Assessment Azim Premji Universityಇದಕ್ಕೆ ಬೇಟಿ ನೀಡಬಹುದು ಎಂದು ಇಂದುಪ್ರಸಾದ್ ತಿಳಿಸಿರುತ್ತಾರೆ.


ಹೆಚ್ಚಿನ ಮಾಹಿತಿಗಾಗಿ: ರಶ್ಮೀ ಪ್ರಭಾಕರ್: ೮೯೫೧೯೭೮೦೯೧ ಇವರನ್ನು ಸಂಪರ್ಕಿಸಬಹುದು.

Exit mobile version