Site icon TUNGATARANGA

ಬನ್ನಿ ಮುಡಿಯುವ ಮಂಟಪದಲ್ಲಿ ರಾಜಕಾರಣಿಗಳ ಶೋಗೆ ಬ್ರೇಕ್ ಹಾಕಿ/ ನಾಗರೀಕರ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ

ಶಿವಮೊಗ್ಗ,ಅ.8: ನಾಡಹಬ್ಬ ದಸರಾದಲ್ಲಿ ಬನ್ನಿ ಮುಡಿಯುವ ಸಂದರ್ಭದಲ್ಲಿ ರಾಜಕಾರಣ ಗಳ ಶಕ್ತಿಪ್ರದರ್ಶನಕ್ಕೆ ಕಡಿವಾಣ ಹಾಕಬೇಕು ಎಂದು ಸಾಮಾನ್ಯ ನಾಗರೀಕರ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

ನಾಡಹಬ್ಬ ದಸರಾವು ಅತ್ಯಂತ ವಿಜೃಂಭಣೆಯಿAದ ನಡೆಯುತ್ತದೆ. ಬನ್ನಿ ಕಡಿಯುವ ಸಂದರ್ಭದಲ್ಲಿ ಫ್ರೀಡಂ ಪಾರ್ಕ್ನಲ್ಲಿ ಲಕ್ಷಾಂತರ ಜನರು ಜಮಾವಣ ಆಗಿರುತ್ತಾರೆ. ದೇವತೆಗಳ ದರ್ಶನ ಮತ್ತು ಬನ್ನಿ ಕಡಿಯುವ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾರೆ.

ಆದರೆ ಇಂತಹ ಜನಜಂಗುಳಿಯನ್ನು ಕಡೆಗಾಣ ಸಿ ರಾಜಕಾರಣ ಗಳು ಮತ್ತು ಮುಖ್ಯವಾಗಿ ಅವರ ಹಿಂಬಾಲಕರು ವೇದಿಕೆಯ ಮೇಲೆ ನುಗ್ಗಿನುಗ್ಗಿ ಸೇರುತ್ತಾರೆ. ಕೈ ಬೀಸುವುದು, ಘೋಷಣೆ ಕೂಗುವುದು, ಶಕ್ತಿ ಪ್ರದರ್ಶನ ಮಾಡುವುದು ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ಮನವಿದಾರರು ತಿಳಿಸಿದರು.

ಶಿವಮೊಗ್ಗ ದಸರಾ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ತನ್ನದೇ ಆದ ವಿಶೇಷತೆಯಿದೆ. ಇದರಲ್ಲಿ ಭಾಗವಹಿಸುತ್ತಾರೆ.ಲಕ್ಷಾಂತರ ಭಕ್ತರು ಇರುತ್ತಾರೆ. ಆದರೆ ರಾಜಕೀಯ ಮುಖಂಡರುಗಳು ಮತ್ತು ಅವರ ಹಿಂಬಾಲಕರು ಜನಗಳ ನಡುವೆ ಘೋಷಣೆ ಕೂಗುತ್ತ ಮುಜುಗರ ಉಂಟುಮಾಡುತ್ತಾರೆ ಎಂದು ದೂರಿದರು.

ಸಂಸದರು, ಸಚಿವರು, ಶಾಸಕರು, ಅಧಿಕಾರಿಗಳು, ಪುರೋಹಿತರನ್ನು ಬಿಟ್ಟು ಇತರೆ ಯಾವ ಹಿಂಬಾಲಕರಿಗೂ ಇಲ್ಲಿ ಕೂಗುವುದಕ್ಕಾಗಲಿ ವೇದಿಕೆಯನ್ನು ಬಲವಂತವಾಗಿ ಹತ್ತುವುದಕ್ಕಾಗಲಿ ಅವಕಾಶ ಕೊಡಕೂಡದು, ಅದು ಅಲ್ಲದೇ ಕೆಲವು ಹಿಂಬಾಲಕರು ಸಾರ್ವಜನಿಕರನ್ನು ಬೆದರಿಸುವುದಕ್ಕೂ ಹಿಂದೆಮುAದೆ ನೋಡುವುದಿಲ್ಲ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ನೀಡುವ ಸಂದರ್ಭದಲ್ಲಿ ವಕೀಲರಾದ ಸುರೇಶ್ ಬಾಬು, ನಿರಂಜನ್, ಹಾಗೂ ಸಾಮಾನ್ಯ ನಾಗರೀಕರ ಒಕ್ಕೂಟದ ಪ್ರಮುಖರಾದ ಮೋಹನ್, ಯಶ್ವಂತ್ ಶೆಟ್ಟಿ, ಕಾರ್ತಿಕ್ ವಿಶ್ವನಾಥ್, ರಾಜು, ಸಿದ್ದು, ಗುರು ಸೇರಿದಂತೆ ಹಲವರಿದ್ದರು.

Exit mobile version