Site icon TUNGATARANGA

ಆಕ್ರಮ ಮರಳು ದಂಧೆಕೊರರಿಗೆ ಕಾದಿದೆ ಬಾರೀ ದಂಡ? ಹೊರ ರಾಜ್ಯದವರನ್ನು ತಕ್ಷಣ ಗಡಿಪಾರು ಮಾಡಲು ಸೂಚನೆ? ಅಕ್ರಮ ಮರಳು ದಂಧೆಕೋರರಿಗೆ ತಹಶೀಲ್ದಾರ್ ರಶ್ಮೀ ಹಾಲೇಶ್ ಎಚ್ಚರಿಕೆ

ಹೊಸನಗರ: ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಹೊಸನಗರ ತಾಲ್ಲೂಕು ಮಟ್ಟದ ಮರಳು ಉಸ್ತುವಾರಿ ಸಮಿತಿಯ ಸಭೆಯನ್ನು ಕರೆಯಲಾಗಿದ್ದು ಈ ಸಭೆಯಲ್ಲಿ ಹೊಸನಗರ ತಾಲ್ಲೂಕು ತಹಶೀಲ್ದಾರ್ ರಶ್ಮೀ ಹಾಲೇಶ್, ಕಾರ್ಯನಿರ್ವಹಣಾಧಿಕಾರಿ ನರೆಂದ್ರಕುಮಾರ್ ಇಂಜೀನೀಯರ್

ಸುನೀಲ್ ವಲಯ ಅರಣ್ಯಾಧಿಕಾರಿಗಳು ಭೂವಿಜ್ಞಾನಿ ಇಲಾಖೆಯ ಪ್ರೀಯಾ, ಪಿಡ್ಯೋಡಿ ಇಂಜೀನೀಯರ್‌ಗಳು ರಾಜಸ್ವ ನಿರೀಕ್ಷಕರು ಭಾಗವಹಿಸಿದರು.


ಆಕ್ರಮ ಮರಳುಗಾರಿಕೆ ಬ್ರೇಕ್ ಹಾಕಿ ಹೊರ ರಾಜ್ಯದ ಕಾರ್ಮಿಕರನ್ನು ಮನೆಗೆ ಕಳುಹಿಸಿ
ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ರಾತ್ರಿ ಹಗಲು ಎನ್ನದೇ ಅಕ್ರಮ ಮರಳು ಸಾಗಟ ನಡೆಯುತ್ತಿದೆ ಎಂದು ಪ್ರತಿದಿನ ದೂರು ಬರುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದ್ದು ತಕ್ಷಣದಿಂದಲೇ

ಅಕ್ರಮವಾಗಿ ಮರಳು ಲಾರಿಗಳನ್ನು ವಶ ಪಡಿಸಿಕೊಂಡು ಹೆಚ್ಚಿನ ದಂಡ ಹಾಕಬೇಕು ಹೊರ ರಾಜ್ಯದ ಕೂಲಿ ಕಾರ್ಮಿಕರು ಹೊಳೆಯ ಸೈಡಿನಲ್ಲಿ ಗುಡಿಸಲು ಹಾಕಿಕೊಂಡಿರುವ ಬಗ್ಗೆ ದೂರುಗಳು ಬರುತ್ತಿದ್ದು ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ಗಮನಕ್ಕೆ ತರುವುದರ

ಜೊತೆಗೆ ಹೊರ ರಾಜ್ಯಕ್ಕೆ ಕಳುಹಿಸಬೇಕೆಂದು ಕಟ್ಟು ನಿಟ್ಟಿನ ಅದೇಶವನ್ನು ಮಾನ್ಯ ವಿಭಾಗಾಧಿಕಾರಿ ಯಾತೀಶರವರು ಆದೇಶಿದ್ದಾರೆ ಎಂದು ಹೇಳಲಾಗಿದೆ.


ಹೊಸನಗರ ತಾಲ್ಲೂಕಿನ ಅಕ್ರಮ ಮರಳು ದಂಧೆಕೋರರಿಗೆ ತಹಶೀಲ್ದಾರ್ ರಶ್ಮೀ ಹಾಲೇಶ್ ಎಚ್ಚರಿಕೆ:
ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಹಾಗೂ ಹೊರ ರಾಜ್ಯದ ಕೂಲಿ ಕಾರ್ಮಿಕರು ಅಕ್ರಮ ಮರಳುಗಾರಿಕೆ

ಬೆಂಬಸುತ್ತಿದ್ದಾರೆ ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಹೊಳೆಯಿಂದ ಮರಳು ಎತ್ತಲು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಆಗಾಗ ಬರುತ್ತಿದ್ದು ತಕ್ಷಣದಿಂದಲೇ ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕಾಗಿದ್ದು ಮರಳು ಉಸ್ತುವಾರಿ ಸಬೆಯನ್ನು ಕರೆದು ಎಲ್ಲ ಅಧಿಕಾರಿಗಳಿಗೆ ಅಕ್ರಮವಾಗಿ ಮರಳು ದಂಧೆ ಹಾಗೂ ಸಾಗಿಸಲು ಉಪಯೋಗಿಸುವ ವಾಹನವನ್ನು ಜಪ್ತಿ

ಮಾಡಲಾಗುವುದು ಇದರ ಜೊತೆಗೆ ಹೆಚ್ಚುವರಿ ದಂಡ ಹಾಗೂ ಕೇಸು ಹಾಕಲಾಗುವುದು ಎಂದು ತಿಳಿಸಿದ್ದು ಮುಂದಿನ ದಿನದಲ್ಲಿ ಅಕ್ರಮ ಮರಳು ದಂಧೆಗೆ ಸಂಪೂರ್ಣ ಬ್ರೇಕ್ ಬಿಳಲಿದೆ ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಬಡಿಪಾರು ಮಾಲಾಗುವುದು ಎಂದು ತಿಳಿಸಿದ್ದಾರೆ.
ಉಪವಿಭಾಗಾಧಿಕಾರಿ ಯಾತೀಶ್‌ರವರ ನೇತೃತ್ವದಲ್ಲಿ ಹೊಸನಗರ ತಾಲ್ಲೂಕಿನಲ್ಲಿ ಮರಳು ಕಡಿವಾಣ ಕ್ರಮಕ್ಕೆ ಅಧಿಕಾರಿಗಳ ಸಭೆ ನಡೆಸುತ್ತಿರುವುದು.
ಹೆಚ್.ಎಸ್

Exit mobile version