ಹೊಸನಗರ ಪಟ್ಟಣದ ಹೊರ ವಲಯದಲ್ಲಿ ದನವನ್ನು ಬಾವಿಯೊಳಗೆ ನೇಣಿಗೆ ಹಾಕಿದ ಸ್ಥಿತಿಯಲ್ಲಿ ದನದ ಕಳೆಬರಹ ಪತ್ತೆ: ಪೋಲೀಸ್ ತನಿಖೆ ಚುರುಕು.
ಹೊಸನಗರ ಹೊರ ವಲಯದ ಕುವೆಂಪು ಶಾಲೆಯ ಹತ್ತಿರ ನೇಣು ಬಿಗಿದ ಸ್ಥಿತಿಯಲ್ಲಿ ದನದ ಕಳೆಬರಹ ಪತ್ತೆಯಾದ ಘಟನೆ ನಡೆದಿದೆ
ಹೊಸನಗರ ಪಟ್ಟಣದಿಂದ ಸುಮಾರು ೧\೨ಕಿ.ಮೀಟರ್ ದೂರದಲ್ಲಿ ಹೊಸನಗರದ ಕೆಲವು ಯುವಕರು ರಮೀತ್ರವರ ನೇತೃತ್ವದಲ್ಲಿ ಗೋ
ಶಾಲೆಯನ್ನು ಆರಂಭಿಸಿದ್ದು ಆ ಗೋಶಾಲೆಯಲ್ಲಿ ಹತ್ತಿಪ್ಪತ್ತು ಬೀದಿ ಹಸುಗಳು ಇದರ ಜೊತೆಗೆ ಅಪಘಾತದಲ್ಲಿ ಕಾಲು ಮುರಿದುಕೊಂಡ ಹಸುಗಳು-ಕರುಗಳನ್ನು ಬೀದಿ ದನಗಳನ್ನು ಸಾಕುತ್ತಿದ್ದರು ಭಾನುವಾರ ರಾತ್ರಿ ೧೨ಗಂಟೆಯವರೆವಿಗೆ ಗೋ ಶಾಲೆಯ ಗೊ ಸೇವಕರು ದನ-ಕರುಗಳಿಗೆ ಆಹಾರ ಹಾಕಿ ಮನೆಗೆ ಹೋದ ಸಂದರ್ಭದಲ್ಲಿ ಕೀಡಿಗೇಡಿಗಳು ದನದ ಕೊಟ್ಟಿಗೆಗೆ ಹೋಗಿ ಒಂದು ದನವನ್ನು ಎಳೆದುಕೊಂಡು ಹೋಗಿ ಅಲ್ಲೇ ಸಮೀಪವಿದ್ದ ದನಗಳಿಗೆ ನೀರುಣಿಸುವ ಬಾವಿಗೆ ನೇಣು ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಬ್ ಇನ್ಸ್ಪೇಕ್ಟರ್ ಶಂಕರಗೌಡ ಪಾಟೇಲ್ ಹಾಗೂ ಆಗ್ನಿ ಶಾಮಕ ದಳದ ಸಿಬ್ಬಂದಿಗಳು ಬೇಟಿ ಪರೀಶೀಲನೆ;
ಹೊಸನಗರದ ಸರ್ಕಲ್ ಇನ್ಸ್ಪೇಕ್ಟರ್ ಗುರಣ್ಣ ಎಸ್ ಹೆಬ್ಬಾಳ್ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೇಕ್ಟರ್ ಶಂಕರಗೌಡ ಪಾಟೇಲ್ ನೇತೃತ್ದ ಪೋಲೀಸ್ ತಂಡ ನೇಣು ಬಿಗಿದ ಸ್ಥಿತಿಯಲ್ಲಿರುವ ದನದ ಕಳೆಬರಹ ವಿರುವ ಸ್ಥಳಕ್ಕೆ ಬೇಟಿ ನೀಡಿ ಪರೀಶೀಲಿಸಿದರು
ಅಗ್ನಿ ಶಾಮಕ ಸಿಬ್ಬಂದಿಯಾದ ಕೆ.ಟಿ ರಾಜಪ್ಪ, ರಾಜೇಶ್, ಸುರೇಶ, ಶಿವರಾಜ್ ಬಿ.ಜೆ, ಕೃಷ್ಣಚಾರಿ ಹೇಮಾಂತ್ಕುಮಾರ್ರವರ ಸಹಾಯದಿಂದ ನೇಣು ಹಾಕಿರುವ ಕುಣಿಕೆ ತಪ್ಪಿಸಿ ಬಾವಿಯಿಂದ ದನವನ್ನು ಮೆಲ್ಲೆತ್ತಲಾಯಿತ್ತು
ಈ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಸಿಬ್ಬಂದಿಗಳಾದ ಮಂಜುನಾಥ್, ಮಧುಸೂದನ್ ಎ.ಹೆಚ್.ಸಿ, ಸುನೀಲ್, ಜಗದೀಶ್ ಇನ್ನೂ ಮುಂತಾದವರು ಸ್ಥಳ ಪರೀಶೀಲಿಸಿದರು.
ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ: ಮಂಜುನಾಥ್ ಸಂಜೀವ
ಘಟನ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸಂಜೀವರವರು ಯಾರೇ ತಪ್ಪು ಮಾಡಿದರೂ
ಅವರಿಗೆ ಉಗ್ರವಾದ ಶಿಕ್ಷೆ ನೀಡಬೇಕು ತಪ್ಪಿತಸ್ಥರನ್ನು ಅದಷ್ಟು ಬೇಗ ಹುಡುಕುವ ಕಾರ್ಯ ಪೋಲೀಸ್ ಇಲಾಖೆ ಕೈಗೊಳ್ಳಲಿ ಮುಂದೆ ಇಂಥಹ ಘಟನೆ ನಡೆಯದಂತೆ ಪೋಲಿಸ್ ಇಲಾಖೆ ಜಾಗೃತಿವಹಿಸಲೀ ಎಂದರು.