ಶಿವಮೊಗ್ಗ : ಅಕ್ಟೋಬರ್ ೦೪ (ಮುಂದುವರೆದ ಭಾಗ)
ಅಂದಿನ ಜನಪ್ರತಿನಿಧಿಗಳ ಮಾರ್ಗದರ್ಶನದಂತೆ ನಿಗಧಿಪಡಿಸಿದ ಕಾಲಮಿತಿಯಲ್ಲಿ ಅನೇಕ ಸಮಸ್ಯೆ-ಸವಾಲುಗಳನ್ನು ಇತ್ಯರ್ಥಗೊಳಿಸಿಕೊಂಡು ಅರಣ್ಯ ಗ್ರಾಮಗಳ ಸ್ಥಳಾಂತರಕ್ಕೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರು ಹೇಳಿದರು.
ಅಂದು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗಿತ್ತು. ರೈತರು ಬೆಳೆದ ಬೆಳೆ ಇನ್ನಿಲ್ಲದಂತೆ ವನ್ಯಪ್ರಾಣಿಗಳು ನಾಶಪಡಿಸುತ್ತಿದ್ದವು. ಸಂತ್ರಸ್ಥ ರೈತರಿಗೆ ಸರ್ಕಾರದಿಂದ ದೊರೆಯುತ್ತಿದ್ದ ಆರ್ಥಿಕ ಪರಿಹಾರ ಅತ್ಯಲ್ಪವಾಗಿತ್ತು.
ಅಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ತ್ರಾಸದಾಯಕ ಹಾಗೂ ವೆಚ್ಚದಾಯಕವಾಗಿತ್ತು ಎಂದ ಅವರು, ಸುಮಾರು ಗ್ರಾಮಗಳ ಅನೇಕ ಕುಟುಂಬಗಳ ಸದಸ್ಯರ ಮನವೊಲಿಸಿ, ಅವರಿಗೆ ವಾಸ್ತವ ಸ್ಥಿತಿಯ ಮನವರಿಕೆ ಮಾಡಿಕೊಟ್ಟು ಸ್ಥಳಾಂತರಗೊಳಿಸಲಾಗಿದೆ ಎಂದರು.
ಈಲ್ಲೆಯ ಕೆಲವು ಸ್ಥಳಗಳಲ್ಲಿ ರೈತರ ಸ್ವಾದೀನದಲ್ಲಿರುವ ಜಮೀನಿಗೂ ೪-೧ ಅಡಿ ದಾಖಲು ಮಾಡಿರುವುದು ನೋವಿನ ಸಂಗತಿ. ಅರಣ್ಯ ಒತ್ತುವರಿ ತೆರವು ಕಾಯಕ್ಕೆ ಅರಣ್ಯ ಇಲಾಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ. ಅರಣ್ಯಾಧಿಕಾರಿಗಳು ಸಾರ್ವಜನಿಕರೊಂದಿಗೆ ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸಿ ಎಂದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಂತಹ ವೈವಿದ್ಯಮಯ ಕಾಡನ್ನು ಉಳಿಸಬೇಕು. ಅದಕ್ಕಾಗಿ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಅದಕ್ಕೂ ಮುನ್ನ ಅರಣ್ಯಾಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಬೇಕೆಂದವರು ನುಡಿದರು.
೧೬ಹಳ್ಳಗಳ ಸ್ಥಳಾಂತರಗೊಂಡ ನಂತರ ವನ್ಯಜೀವಿಗಳ ಸಂತತಿ ವಿಸ್ತರಿಸಿರುವುದು ಹರ್ಷದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತರೀಕೆರೆ ಶಾಸಕ ಎಂ.ಶ್ರೀನಿವಾಸ್ ಅವರು ಮಾತನಾಡಿ, ಸ್ಥಳಾಂತರಗೊಂಡ ೦೯ಕುಟುಂಬಗಳಿಗೆ
ನ್ಯಾಯಾಲಯದ ಆದೇಶದಂತೆ ಭೂಮಿಯ ಹಾಗೂ ನಿವೇಶನದ ಹಕ್ಕುಪತ್ರ ನೀಡಬೇಕು. ಅರಣ್ಯಾಧಿಕಾರಿಗಳು ಕೂಡಲೇ ಗಮನಹರಿಸಬೇಕು. ಸ್ಥಳಾಂತರಗೊಂಡ ಸ್ಥಳದಲ್ಲಿದ್ದ ಮೂಲ ದೇವಸ್ಥಾನದ ವಿಗ್ರಹವನ್ನು ಮೊದಲಿನಂತೆಯೇ ನಿರ್ಮಿಸಲು ೧೦೦*೧೦೦ಅಳತೆಯ ನಿವೇಶನವನ್ನು ನೀಡಬೇಕು ಎಂದರು.
ತುಂಗಾ, ಭದ್ರಾ ಮುಳುಗಡೆ ಸಂತ್ರಸ್ಥರಿಗೆ ಪೂರ್ಣ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಇನ್ನೂ ಒದಗಿಸದಿರುವುದು ಬೇಸರದ ಸಂಗತಿ. ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ, ಸೌಲಭ್ಯವನ್ನು ಒದಗಿಸುವಂತೆ ಸೂಚಿಸಿದರು.
ವನ್ಯಜೀವಿಗಳಿಗೆ ಪೂರಕ ಆಹಾರ ಒದಗಿಸುವ ಹಣ್ಣಿನ ಗಿಡಗಳನ್ನು ಅರಣ್ಯದಲ್ಲಿ ಬೆಳೆಸಲು ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
- ಅರಣ್ಯಾಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ನನ್ನೊಂದಿಗೆ ನಡೆದುಕೊಂಡ ರೀತಿ ನನಗೆ ಅತೀವ ನೋವನ್ನುಂಟು ಮಾಡಿದೆ. ವೈಯಕ್ತಿಕವಾಗಿ ಅನೇಕ ಸಮಸ್ಯೆ-ಸವಾಲುಗಳನ್ನು ಎದುರಿಸಬೇಕಾಯಿತು. ಆತ್ಮವಂಚನೆ ಮಾಡಿಕೊಳ್ಳದಂತೆ ಕಾರ್ಯನಿರ್ವಹಿಸಿದ ತೃಪ್ತಿ ಇದೆ.
-ಯತೀಶ್ಕುಮಾರ್, ನಿವೃತ್ತ ಅರಣ್ಯಾಧಿಕಾರಿ. - ನನ್ನ ನೇತೃತ್ವದಲ್ಲಿ ವನವಾಸಿಗಳ ಸ್ಥಳಾಂತರಕ್ಕೆ ಸಮಿತಿಯನ್ನು ರಚಿಸಲಾಗಿತ್ತು. ಇದನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿತ್ತು. ಕಾಲಮಿತಿಯಲ್ಲಿ ಕಾರ್ಯವನ್ನು ಪೂರ್ಣಗೊಳಿಸುವ ಹೊಣೆಗಾರಿಕೆ ಇತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಿ.ಬಿ.ಚಂದ್ರೇಗೌಡ ಅವರು ನನ್ನ ಮೇಲೆ ವಿಶ್ವಾಸವಿರಿಸಿ, ವಹಿಸಿದ ಜವಾಬ್ದಾರಿಯನ್ನು ಇತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಗ್ರಾಮಗಳ ಸ್ಥಳಾಂತರ ಕಾರ್ಯವನ್ನು ಯಶಸ್ವಿಯಾಗಿ ಮಾಡಿರುವ ಹೆಮ್ಮೆ ನನ್ನದು.
- ಗೋಪಾಲಕೃಷ್ಣ, ಮಾಜಿ ಜಿಲ್ಲಾಧಿಕಾರಿ, ಚಿಕ್ಕಮಗಳೂರು. ಕಾರ್ಯಕ್ರಮದಲ್ಲಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ಶಿವಮೊಗ್ಗ ಗ್ರಾಮಾಂತರ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಷ್ಬಾನು, ಬೋವಿನಿಗಮದ ಅಧ್ಯಕ್ಷ ರವಿಕುಮಾರ್, ಕಾಡಾ ಅಧ್ಯಕ್ಷ ಅಂಶುಮಂತ್,
- ಅರಣ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥಪ್ರಸಾದ್, ಹಿರಿಯ ಅರಣ್ಯಾಧಿಕಾರಿಗಳಾದ ಬ್ರಿಜೇಶ್ಕುಮಾರ್ ದೀಕ್ಷಿತ್, ಸುಭಾಸ್ ಕೆ.ಮಲ್ಕೆಡೆ, ಕುಮಾರ್ ಪುಷ್ಕರ್, ಕೆ.ಟಿ.ಹನುಮಂತಪ್ಪ, ಶ್ರೀಮತಿ ಸೀಮಾಗಾರ್ಗ್, ಡಿ.ಸಿ. ಶ್ರೀಮತಿ
- ಮೀನಾನಾಗರಾಜ್, ಕು.ವಿ.ವಿ.ಉಪಕುಲಪತಿ ಪ್ರೊ.ಶರತ್ ಅನಂತಮೂರ್ತಿ, ರಿಜಿಸ್ಟ್ರಾರ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಚಿವರು ಹಾಗೂ ಗಣ್ಯರು ನಾಲ್ಕು ಕಿರುಹೊತ್ತಿಗೆಗಳ ಬಿಡುಗಡೆ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಮಡಿಕೆಪತ್ರ ಬಿಡುಗಡೆ, ಭದ್ರಾ ಅಂತರ್ಜಾಲತಾಣ ಲೋಕಾರ್ಪಣೆಗೊಳಿಸಿದರು.