ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೇ 24ರಿಂದ ಜೂನ್ 10ರವರೆಗ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮೇ 24ರಂದು ಭೌತ ವಿಜ್ಞಾನ, ಇತಿಹಾಸ, 25ರಂದು ಅಲ್ಪಸಂಖ್ಯಾತರ ಭಾಷೆ ಪರೀಕ್ಷೆ (ತೆಲುಗು, ಮರಾಠಿ, ಮಲಯಾಎಂದು ಮೇ 26ರಂದು ಭೂಗರ್ಭ ವಿಜ್ಞಾನ, ಲಾಜಿಕ್, ಹೋಮ್ ಸೈನ್ಸ್, ಮೂಲ ಗಣಿತ, ಮೇ 27ರಂದು ಆಫ್ಸನಲ್ ಕನ್ನಡ, ಅಕೌಂಟೆನ್ಸಿ, ಗಣಿತ, ಮೇ 28ರಂದು ಉರ್ದು, ಸಂಸ್ಕೃತ, ಮೇ 29, ರಾಜ್ಯ ಶಾಸ್ತ್ರ, ಮೇ 31ರಂದು
ರಸಾಯನ ಶಾಸ್ರ್ಯ ಬ್ಯುಜಿನೆಸ್ ಸ್ಟಡಿಸ್, ಎಜುಕೇಶನ್ ಪರೀಕ್ಷೆಗಳು ನಡೆಯಲಿವೆ.
ಜೂನ್ 1ರಂದು ಕರ್ನಾಟಕ ಸಂಗೀತ ಪರೀಕ್ಷೆ, ಹಿಂದೂಸ್ತಾನಿ ಸಂಗೀತ, ಜೂನ್ 2ರಂದು ಸೈಕಾಲಜಿ, ಜೀವವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಜೂನ್ 3ರಂದು ಹಿಂದಿ, ಜೂನ್ 4ರಂದು ಎಕಾನಮಿಕ್ಸ್, ಜೂನ್ 5ರಂದು ಕನ್ನಡ, ಜೂನ್ 7ರಂದು ಇಂಗ್ಲಿಷ್, ಜೂನ್ 8ರಂದು ಬ್ಯೂಟಿ ಆ್ಯಂಡ್ ವೆಲ್‌ನೆಸ್, ಹೆಲ್ತ್ ಕೇರ್, ಆಟೋಮೊಬೈಲ್, ಇನ್ಫೋರ್ಮೇಷನ್ ಟೆಕ್ನಾಲಜಿ, ಜೂನ್ 9ರಂದು ಸಮಾಜ ವಿಜ್ಞಾನ, ಸ್ಟಾಟಿಸ್ಟಿಕ್ಸ್, ಜೂನ್ 10ರಂದು ಜಿಯೋಗ್ರಫಿ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.