Site icon TUNGATARANGA

ಜನರ ಆಶೋತ್ತರಗಳಿಗೆ ಅಧಿಕಾರಿಗಳು ಸ್ಪಂದಿಸಿ ಜನಸ್ಪಂದನಾ ಕಾರ್ಯಕ್ರಮದಲ್ಲಿ :ಸಚಿವ ಮಧು ಎಸ್ ಬಂಗಾರಪ್ಪ

ಸಾಗರ(ಶಿವಮೊಗ್ಗ),ಅ.೦೩ :ತಾಳಗುಪ್ಪ ಹೋಬಳಿಯ ಜನತೆಗೆ ಅಗತ್ಯ ಮೂಲಭೂತ ಸೌಕರ್ಯಗಳ ಕಲ್ಪಿಸಲು ಹೆಚ್ಚಿನ ಅನುದಾನ ನೀಡುತ್ತೇನೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾ ರಪ್ಪ ಅವರು ಹೇಳಿದರು
ಅವರು ಸಾಗರ ತಾಲ್ಲೂಕಿನ ಸೊರಬ ವಿಧಾನ ಸಭಾ ಕ್ಷೇತ್ರದ ತಾಳಗುಪ್ಪದಲ್ಲಿ ಏರ್ಪಡಿಸಲಾಗಿದ್ದ ಜನಸ್ಪಂದನಾ ಕಾರ್ಯ ಕ್ರಮ ವನ್ನು ಉದ್ಘಾಟಿಸಿ ಮಾತ ನಾಡಿ ತಾಳಗುಪ್ಪ ಹೋಬ ಳಿಯ ಜನರು ಅನಾಥಭಾವನೆ ಬೇಡ, ಸೊರಬ ತಾಲ್ಲೂಕಿಗಿಂತ ಹೆಚ್ಚಿನ ಆದ್ಯತೆ ನೀಡುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.


ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸಮಾನ ದೃಷ್ಟಿಕೋನದಿಂದ ಗಮನಿಸು ವುದಾಗಿ ತಿಳಿಸಿದ ಅವರು ತಾಳಗುಪ್ಪ ,ಸೈದೂರು, ಹಿರೆನೆಲ್ಲೂರು, ಕಾನಲೆ,ಖ ಂಡಿಕಾ,ಮರತೂರು,ತಲವಾಟ ,ಶಿರಿವಂತೆ,ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳ ಜನರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವು ದಾಗಿ ತಿಳಿಸಿದರು.


ಜನರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ಬದ್ದವಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಜನಸ್ಪಂದನ ಕಾರ್ಯಕ್ರಮದಲ್ಲಿ ನೀವು ನೀಡಿರುವ ಅರ್ಜಿಗ ಳನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಗಮನಿಸಿ ಪರಿಶೀಲಿಸಿ ಜನರ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮವಹಿಸುವ ನಿಯಮ ಜಾರಿಯಾಗಿದೆ ಎಂಬ ಕುರಿತು ಜನರಿಗೆ ಮನವರಿಕೆ ಮಾಡಿದರು.


ಜನಸಾಮಾನ್ಯರಿಗೆ ಸರ್ಕಾರದ ವಿವಿಧ ಇಲಾಖೆ ಗಳ ಸೌಲಭ್ಯ ನೀಡುವ ಸಂದರ್ಭಗಳಿದ್ದಲ್ಲಿ ಜನಪ್ರತಿ ನಿದಿಗಳ ಸೂಚನೆಗಾಗಿ ಕಾಯದೆ ತ್ವರಿತಗತಿಯಲ್ಲಿ ಸೌಲಭ್ಯ ಗಳನ್ನು ವಿತರಿಸಿವಂತೆ ಹಾಗೂ ಅಭಿವೃದ್ಧಿ ಕಾರ್ಯ ಗಳಲ್ಲಿ ಇನ್ನಷ್ಟು ವೇಗ ಹೆಚ್ಚಿಸುವಂತೆ ಅವರು ಸೂಚಿಸಿದರು.
೯೪ಸಿ ಯೋಜನೆ ಗ್ರಾಮೀಣ ಬಡ ಜನರಿಗೆ ಹಕ್ಕು ಪತ್ರ ನೀಡಿ ಅವರ ನೆಮ್ಮದಿಯ ಬದುಕಿಗೆ ಆಸರೆಯಾಗುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಯಾಗಿದ್ದು, ಈ ಯೋಜನೆಯ ಅನುಸ್ತಾನಕ್ಕಾಗಿ ಅಂದು ಹಗಲಿರುಳು ಶ್ರಮಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಅಭಿನಂದ ನಾರ್ಹರು ಎಂದರು.


ಈ ಜನಸ್ಪಂದನ ಕಾರ್ಯಕ್ರಮದಿಂದಾಗಿ ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗೆ ಪರಿಹಾರ ನೀಡು ತ್ತಿದೆ. ವಯಸ್ಕರು, ವಿಕಲಾಂಗರು, ಮಹಿಳೆಯರು ನಂತರ ಸಾರ್ವಜನಿಕರು ಸಹನೆಯಿಂದ ತಮ್ಮ ಅಹ ವಾಲುಗಳನ್ನು ಸಲ್ಲಿಸ ಬಹುದಾಗಿದೆ ಎಂದರು.
ಜನಸ್ಪಂದನದಲ್ಲಿ ಖಂಡಿಕಾ ಗ್ರಾಮಪಂಚಾಯಿತಿ ಸದಸ್ಯರು,ನಾಗರಿಕರು ಮನವಿ ಸಲ್ಲಿಸಿ ಗ್ರಾಮೀಣ ರಸ್ತೆ ಸಂಪರ್ಕ ಅಬಿವೃದ್ಧಿಗೆ ಸಚಿ ವರ ಗಮನಸೆಳೆದರು.ಖಡಿಕಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಲಸಿನಘಟ್ಟದ ಛಾಯಾ ಎಂಬ ಮಹಿಳೆ ಸಚಿವರಿಗೆ ಮನವಿ ಸಲ್ಲಿಸಿ ನನ್ನ ಅತ್ತೆಗೆ ಗೃಹಲಕ್ಷ್ಮಿ ಹಣ ಬರುತ್ತದೆ. ಆದರೇ ನಾವು ಬೇರೆಯಾಗಿ ದ್ದರೂ ನಮಗೆ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲ ಎಂದು ಕಣ್ಣೀರು ಹಾಕಿದರು. ತಕ್ಷಣ ಸ್ಪಂದಿಸಿದ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿ ಪ್ರತ್ಯೇಖ ವಾಸವಿರುವ ಇವರಿಗೆ ನಿಯಮಾನುಸಾರ ಗೃಹಲಕ್ಷ್ಮಿ ಸೌಲಭ್ಯಕ್ಕೆ ಕ್ರಮ ವಹಿಸುವಂತೆ ಸೂಚಿಸಿದರು.


ತಾಂತ್ರಿಕಾ ಅಡಚಣೆ ಮತ್ತು ಲೋಕಾಯುಕ್ತದಲ್ಲಿ ಪ್ರಕರಣ ವಿರುವ ಕಾರಣ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ಪೂರಕ ನಿಯ ಮಾವಳಿಗಳಂತೆ ಪ್ರಯತ್ನ ನಡೆಸಿ ಅಗತ್ಯವಿರುವ ಪ್ರಾಧಿಕಾರಕ್ಕೆ ಮನವರಿಕೆ ಮಾಡಿ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.


ತಾಳಗುಪ್ಪದ ನೇತ್ರಾವತಿ ಸಚಿವರಿಗೆ ಮನವಿ ಸಲ್ಲಿಸಿ ಇ-ಸ್ವತ್ತು ಕೊಡಿಸಿ ಎಂದು ಮನವಿ ಮಾಡಿದರು.ತಕ್ಷಣ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ಗಳಿಗೆ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುವಂತೆ ತಿಳಿಸಿದರು.
ಕಾಗೋಡು ಗ್ರಾಮದ ಮಹಾಲಕ್ಷ್ಮಿ ಅವರು ನಿವೇಶನ ಹಕ್ಕುಪತ್ರ ಕೊಡಿಸುವಂತೆ ಮನವಿ ಸಲ್ಲಿಸಿದರು. ಚೂರಿ ಕಟ್ಟೆಯ ತಾಜುನ್ನಿಸಾ ಅವರು ತಮಗೆ ಹಕ್ಕು ಪತ್ರ ಕೊಡಿ ಸುವಂತೆ ಮನವಿ ಮಾಡಿದರು.


ಕೆಳದಿ ದೊಡ್ಡ ಕೆರೆ ಮೀನಿನ ಟೆಂಡರ್ ನೀಡು ವುದನ್ನು ಮುಂದೂಡುವಂತೆ ಕೆಳದಿ ವ್ಯಾಪ್ತಿಯ ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿ ಕೆರೆಯ ಸ್ವಚ್ಚತಾ ಕಾರ್ಯ ಪೂರ್ಣಗೊಂಡ ನಂತರ ಟೆಂಡರ್ ನೀಡುವಂತೆ ಗಮನಸೆಳೆದರು.
ಶಿರವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಜನ್ನೆ ಹಕ್ಕಲು ಗ್ರಾಮದ ವಾಸದ ಮನೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ಮಾರ್ಗವನ್ನು ಜಿಗ್‌ಜಾಗ್ ಮಾಡುವ ಮೂಲಕ ಬದ ಲಾಯಿಸಿಕೊಡಬೇಕು ಎಂದು ಮಂಜಪ್ಪ,ಗಣಪತಿ, ಈಶ್ವರ, ರಾಮಪ್ಪ,ಪರಮೇಶ್ವರ, ನಾರಾ ಯಣ, ಕಿರಣ, ಕೆರಿಯಮ್ಮ ಮೊದಲಾದವರು ಸಚಿವರಲ್ಲಿ ಮನವಿ ಮಾಡಿದರು.


ತಾಳಗುಪ್ಪ ಗ್ರಾಮಪಂಚಾ ಯಿತಿ ವ್ಯಾಪ್ತಿಯ ಘನ ತ್ಯಾಜ್ಯ ವಿಲೇವಾರಿಗೆ ಜಾಗದ ಸಮಸ್ಯೆಯಾಗಿದೆ.ತಾಳಗುಪ್ಪ ಗ್ರಾಮದ ಸ.ನಂ.೧೬೩ ರಲ್ಲಿ ೨ ಎಕರೆ ಜಾಗ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾ ಣಕ್ಕೆ ಭೂ ಮಂಜೂರಿ ಯಾಗಿದೆ.ಅದರೇ ಪಕ್ಕದ ಭೂಮಿ ಮಾಲೀಕರು ನ್ಯಾಯಾ ಲಯದಿಂದ ತಡೆಯಾಜ್ಞೆ ತಂದಿರುವು ದರಿಂದ ಘನತ್ಯಾಜ್ಯ ಘಟಕದ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ತಾಳಗುಪ್ಪದ ಪಾರ್ವತಿ,ರೇಣುಕಮ್ಮ,ಗೀತಾ, ಮಹಾಲಕ್ಷ್ಮಿ,ಅನುಸೂ ಯಾ,ನಾಗರತ್ನ,ರುಕ್ಮಿಣಿ,ಸರಸ್ವತಿ ಮೊದಲಾದವರು ಸಚಿವರ ಗಮನಸೆಳೆದರು.
ನಿವೇಶನ ಹಕ್ಕುಪತ್ರ, ಆಶ್ರಯ ಮನೆ,ವಿಧವೇ ವೇತನ,ಬಿಸಿಯೂಟದ ಅಡುಗೆ ಕೆಲಸದಿಂದ ತೆಗೆದಿರುವ ಕುರಿತು,ರಸ್ತೆ ಅಭಿವೃದ್ಧಿ, ನಿವೃತ್ತಿ ವೇತನ,ಶಾಲಾ ಕಾಪೌಂಡ್, ನೂತನ ಕಟ್ಟಡ ಮುಂತಾದ ೧೨೦ಕ್ಕೂ ಹೆಚ್ಚಿನ ಅಹ ವಾಲುಗಳು ಸಲ್ಲಿಕೆಯಾದವು.


ಇದೆ ಸಂದರ್ಭದಲ್ಲಿ ಸಾಮಾಜಿಕ ಭದ್ರಾತಾ ಯೋಜನೆಯಡಿಯಲ್ಲಿ ಸೌಲ ಭ್ಯಕ್ಕೆ ಅರ್ಹರಾದ ಪಲಾನು ಭವಿಗಳಿಗೆ, ನಿವೇಶನ ರಹಿತ ರಿಗೆ ಹಕ್ಕುಪತ್ರಗಳನ್ನು ಹಾಗೂ ಅತಿವೃಷ್ಟಿಯಿಂದ ಮನೆ ಹಾನಿಗೋಳಗಾದ ಸಂತ್ರಸ್ತೆ ತಡಗಳಲೆ ಮಹಾಲಕ್ಷ್ಮಿಯ ವರಿಗೆ ೧ಲಕ್ಷದ ೨೦ ಸಾವಿರ ರೂಗಳ ಚೆಕ್ಕನ್ನು ಸಚಿವರು ವಿತರಿಸಿದರು.


ಸಭೆಯಲ್ಲಿ ಉಪ ವಿಭಾಗಾಧಿಕಾರಿ ಯತೀಶ್ ಐಎಎಸ್,ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶ್ರೀಮತಿ ಸುಜಾತ, ತಹಶೀಲ್ದಾರ್ ಚಂದ್ರಶೇಖರನಾಯ್ಕ್, ಕಾರ್ಯ ನಿರ್ವಹಕ ಅಧಿಕಾರಿ ಗುರುಕೃಷ್ಣ ಶೆಣೈ, ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಬ್ಯಾಕೋಡು,ಶಾಂತಕುಮಾರ್, ಪ್ರಸನ್ನಕುಮಾರ್ ,ಅನಿಲ್ ಕುಮಾರ್ ಪ್ರಮುಖರಾದ ಮಹಾಬಲೇಶ್ವರ ಕುಗ್ವೆ,ಹುಚ್ಚಪ್ಪ ಮಂಡಗಳಲೆ ಮತ್ತಿತರರು ಉಪಸ್ಥಿತರಿದ್ದರು.

Exit mobile version