Site icon TUNGATARANGA

ಅ.12 ರ ವರೆಗೆ ಬೊಮ್ಮನಕಟ್ಟೆಯ ಶ್ರೀಅನ್ನಪೂರ್ಣೆಶ್ವರಿ ದೇವಸ್ಥಾನದಲ್ಲಿ ದಸರಾ ಉತ್ಸವ /ಹಾಗೂ ನೂತನ ರಾಜಗೋಪುರ ಲೋಕರ್ಪಣೆ ಕಾರ್ಯಕ್ರಮ

ಶಿವಮೊಗ್ಗ,ಅ.೩: ಬೊಮ್ಮನಕಟ್ಟೆಯ ಶ್ರೀಅನ್ನಪೂರ್ಣೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ೧೨ನೇ ವರ್ಷದ ದಸರಾ ಉತ್ಸವ ಹಾಗೂ ನೂತನ ರಾಜಗೋಪುರದ

ಲೋಕಾರ್ಪಣೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಅ.೩ರಿಂದ ಅ.೧೨ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಜಿ.ಕೆ. ಮಾಧವಮೂರ್ತಿ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೊಮ್ಮನಕಟ್ಟೆಯಲ್ಲಿರುವ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದ ವತಿಯಿಂದ ಕಳೆದ ೧೨ ವರ್ಷಗಳಿಂದ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದೇವೆ.

ಅದರ ಅಂಗವಾಗಿ ಈ ಬಾರಿಯೂ ಕೂಡ ದಸರಾ ಉತ್ಸವ ಹಾಗೂ ದೇವಿಗೆ ವಿಶೇಷ ಅಲಂಕಾರ, ಪ್ರತಿ ದಿನ ಪೂಜೆ, ಹೋಮ, ಹವನ, ಭಜನೆ, ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದ್ದೇವೆ. ವಿಜಯದಶಮಿ ದಿನವಾದ ಅ.೧೨ರಂದು ಸಂಜೆ ೬.೩೦ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮವು ಕೂಡ ಇರುತ್ತದೆ ಎಂದರು.


ಮುಖ್ಯವಾಗಿ ಅ.೪ರಂದು ಬೆಳಿಗ್ಗೆ ೯ಕ್ಕೆ ದೇವಸ್ಥಾನದ ನೂತನ ರಾಜಗೋಪುರದ ಲೋಕಾರ್ಪಣೆ ನಡೆಯಲಿದೆ. ಈ ಕಳಶಾರೋಹಣ ಕಾರ್ಯಕ್ರಮದ ಸಾನಿಧ್ಯವನ್ನು ಹೊನ್ನಾಳಿ ಹಿರೇಕಲ್ಮಠದ ಶ್ರೀಗಳಾದ ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು,

ಬಸವಕೇಂದ್ರದ ಶ್ರೀ ಬಸವ ಮರುಳು ಸಿದ್ಧ ಸ್ವಾಮೀಗಳು, ಕೂಡಲಿ ಶ್ರೀ ಆರ್ಯ ಅಕ್ಷೆಭ್ಯತೀರ್ಥ ಮಹಾಸಂಸ್ಥಾನದ ಶ್ರೀ ೧೦೮ ಶ್ರೀ

ರಘುವಿಜಯತೀರ್ಥ ಶ್ರೀಪಾದಂಗಳುವರು, ಆದಿಚುಂಚನಗಿರಿ ಮಹಾಸಂಸ್ಥಾನದ ಶಿವಮೊಗ್ಗ ಶಾಖೆಯ ಶ್ರೀ ಪ್ರಸನ್ನನಾಥ ಸ್ವಾಮಿಗಳು, ತಿಪಟೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀಚಂದ್ರಶೇಖರನಾಥ ಸ್ವಾಮಿಗಳು ವಹಿಸಲಿದ್ದಾರೆ ಎಂದರು.

Exit mobile version