Site icon TUNGATARANGA

ಚಲನಚಿತ್ರ ದಸರಾ ನಗರಕ್ಕೆ ಉಮಾಶ್ರೀ, ನಾಗೇಂದ್ರ ಪ್ರಸಾದ್, ಭೀಮ ಚಿತ್ರದ ನಟಿ ಪ್ರಿಯಾ, ಅವಿನಾಶ್ /ಎರಡು ಚಿತ್ರಮಂದಿರಗಲ್ಲಿ ನಾಲ್ಕು ಚಿತ್ರಗಳ ಪ್ರದರ್ಶನ


ಚಲನಚಿತ್ರ ರಸಗ್ರಹಣ ಕಾರ್ಯಾಗಾರ
ಶಿವಮೊಗ್ಗ:
ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ ಶಿವಮೊಗ್ಗ ದಸರಾ ಭಾಗವಾಗಿ ಚಲನಚಿತ್ರ ದಸರಾ ಅ.೦೪ ರಂದು ಆರಂಭವಾಗಲಿದೆ.


ಅಂಬೇಡ್ಕರ್ ಭವನದಲ್ಲಿ ಅ. ೦೪ರಂದು ಬೆಳಿಗ್ಗೆ ೯.೩೦ಕ್ಕೆ ಹೆಸರಾಂತ ಚಲನಚಿತ್ರ ಕಲಾವಿದೆ, ಮಾಜಿ ಸಚಿವೆ, ಹಾಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಯವರು ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.


ಇದೇ ಸಂದರ್ಭದಲ್ಲಿ ಆಯೋಜಿಸಲಾಗಿರುವ ಛಾಯಾಚಿತ್ರ ಪ್ರದರ್ಶನ, ಕ್ಯಾಮರಾ ಪ್ರದರ್ಶನ, ಪತ್ರಿಕೆಗಳ ಪ್ರದರ್ಶನ, ವ್ಯಂಗ್ಯ ಚಿತ್ರ ಪ್ರದರ್ಶನಗಳಿಗೆ ಖ್ಯಾತ ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಚಾಲನೆ ನೀಡಿ, ಚಲನಚಿತ್ರ ಸಂಗೀತ ಬೆಳೆದು ಬಂದ ದಾರಿಯನ್ನು ಅವಲೋಕಿಸಲಿದ್ದಾರೆ. ಪೃಥ್ವಿಗೌಡ, ಸಂಗೀತ ಹುಂಚರವರು ಗೀತೆಗಳನ್ನು ಹಾಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭೀಮ ಚಿತ್ರದ ಖ್ಯಾತಿಯ ಇನ್ಸ್ಪೆಕ್ಟರ್ ಪಾತ್ರಧಾರಿ ಪ್ರಿಯಾ, ಚಲನಚಿತ್ರ ನಟ ಅವಿನಾಶ್, ಶಾಖಾಹಾರಿ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್, ನಿರ್ಮಾಪಕ ರಾಜೇಶ್ ಕೀಳಂಬಿ ಪಾಲ್ಗೊಳ್ಳಲಿದ್ದಾರೆ.


ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ವಾರ್ತಾಽಕಾರಿ ಮಾರುತಿ, ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜ, ಬೆಳ್ಳಿಮಂಡಲದ ಸಂಚಾಲಕ ವೈದ್ಯ, ಆಯುಕ್ತರು ಹಾಗೂ ದಸರಾ ಚಲನಚಿತ್ರೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಕವಿತಾ ಯೋಗಪ್ಪನವರ್, ಕಾರ್ಯದರ್ಶಿ ಯಶವಂತ್, ಮಲ್ಲಿಕಾರ್ಜುನ ಚಿತ್ರ ಮಂದಿರದ ಮಾಲೀಕರಾದ ಹೆಚ್. ಆರ್. ಶೈಲೇಶ್, ಶ್ರೀ ವೀರಭದ್ರೇಶ್ವರ ಚಿತ್ರ ಮಂದಿರದ ಮಾಲೀಕರಾದ ಎನ್. ಜೆ. ವೀರಣ್ಣ ಪಾಲ್ಗೊಳ್ಳಲಿದ್ದಾರೆ.


ಅಧ್ಯಕ್ಷತೆಯನ್ನು ಶಾಸಕ ಎಸ್. ಎನ್. ಚನ್ನಬಸಪ್ಪ ವಹಿಸಲಿದ್ದಾರೆ.
ಚಿತ್ರೋತ್ಸವದ ಮೊದಲ ಚಿತ್ರವಾಗಿ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಶಾಖಾಹಾರಿ ಚಿತ್ರ ಪ್ರಡರ್ಶನ ನಡೆಯಲಿದೆ.
ಇದೇ ಸಂದರ್ಭದಲ್ಲಿ ನಗರದ ಖ್ಯಾತ ಪತ್ರಿಕಾ ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್, ಶಿವಮೊಗ್ಗ ನಾಗರಾಜ್‌ರವರ ಛಾಯಾಚಿತ್ರಗಳ ಪ್ರದರ್ಶನ, ಪ್ರದೀಪ್ ಕುಮಾರ್-ವಾಸುಕಿ ಕುಮಾರ್‌ರವರ ಅಪರೂಪದ ಕ್ಯಾಮರಾಗಳ ಪ್ರದರ್ಶನ ನಡೆಯಲಿದೆ.


* ಚಿತ್ರ ಪ್ರದರ್ಶನ
ನಾಲ್ಕು ದಿನಗಳ ಈ ಚಿತ್ರೋತ್ಸವದಲ್ಲಿ ಅ. ೦೫ರಂದು ಬೆಳಿಗ್ಗೆ ೦೯.೦೦ಗಂಟೆಗೆ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಟಗರು ಪಲ್ಯ, ೦೬ರ ಭಾನುವಾರ ಬೆಳಿಗ್ಗೆ ಮಲ್ಲಿಕಾರ್ಜುನ ಚಿತ್ರ ಮಂದಿರದಲ್ಲಿ ಕಂಬ್ಳಿಹುಳ, ಅ. ೦೭ರಂದು ಬೆಳಿಗ್ಗೆ ೦೯.೦೦ಗಂಟೆಗೆ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಕಾಲಾಪತ್ಥರ್ ಚಿತ್ರಗಳು ಪ್ರದರ್ಶನ ಕಾಣಲಿವೆ.


* ಚಲನಚಿತ್ರ ಕಾರ್ಯಗಾರ
ದಸರಾ ಚಲನಚಿತ್ರೋತ್ಸವದ ಭಾಗವಾಗಿ ಅ. ೦೫ರ ಶನಿವಾರ ಬೆಳಿಗ್ಗೆ ೦೯.೦೦ ರಿಂದ ೧೨.೦೦ರ ವರೆಗೆ ಅಂಬೇಡ್ಕರ್ ಭವನದಲ್ಲಿ ಚಲನಚಿತ್ರ ಕ್ಕೆ ಸಂಬಂಽಸಿದ ಕಾರ್ಯಗಾರ ನಡೆಯಲಿದ್ದು, ಕಿರುಚಿತ್ರ ನಿರ್ಮಾಣ ಕುರಿತು ರಾಮ ರಾಮ ರೇ ಖ್ಯಾತಿಯ ನಿರ್ದೇಶಕ-ನಟ ಡಿ. ಸತ್ಯಪ್ರಕಾಶ್, ಮಾತನಾಡಲಿದ್ದು, ಛಾಯಾಗ್ರಾಹಣ ಒಂದು ಅನುಸಂಧನ ಕುರಿತು ಪ್ರಸಿದ್ಧ ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ, ಛಾಯಾಗ್ರಾಹಣ ವರ್ತಮಾನದ ಬೆಳವಣಿಗೆಗಳು ಕುರಿತು ಗುರು ಪ್ರಸಾದ ಕಾಶಿ ಮಾತನಾಡಲಿದ್ದಾರೆ.


ಚಲನಚಿತ್ರ ಆಸಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.


Exit mobile version