Site icon TUNGATARANGA

ಮೊಟ್ಟೆಗೆ ತಗಲುವ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರ ಭರಿಸಿ ಕೊಡಬೇಕು ಶಿಕ್ಷಕರ ಸಂಘದ ವತಿಯಿಂದ: ಶಿಕ್ಷಣ ಸಚಿವರಿಗೆ ಮನವಿ

ಸಾಗರ : ರಾಜ್ಯ ಸರ್ಕಾರ ಮೊಟ್ಟೆಗೆ ತಗಲುವ ಹೆಚ್ಚಿನ ಹಣವನ್ನು ಭರಿಸಿ ಕೊಡಬೇಕು ಹಾಗೂ ಮೊಟ್ಟೆಯನ್ನು ನೇರವಾಗಿ ಶಾಲೆಗಳಿಗೆ ಸರಬರಾಜು ಮಾಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಗರ ಶಾಖೆ ವತಿಯಿಂದ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.


ಮೊಟ್ಟೆ ಖರೀದಿ ಘಟಕ ವೆಚ್ಚ ೫.೨೦ ರೂ. ಆಗಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಮೊಟ್ಟೆಯ ದರ ೬ರೂ.ಗಿಂತ ಹೆಚ್ಚು ಇರುತ್ತದೆ. ಬೇರೆಬೇರೆ ಸಂದರ್ಭದಲ್ಲಿ ಮೊಟ್ಟೆಯ ದರ ರೂ. ೮ರವರೆಗೂ ಹೋಗುತ್ತದೆ.

ಮೊಟ್ಟೆಯ ಹೆಚ್ಚುವರಿ ಹಣವನ್ನು ಹೊಂದಿಸುವುದು ಮುಖ್ಯ ಶಿಕ್ಷಕರಿಗೆ ತೀರ ಹೊರೆಯಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.


ಈಗಾಗಲೆ ಮುಖ್ಯ ಶಿಕ್ಷಕರು ಹೆಚ್ಚುವರಿ ಹಣವನ್ನು ಭರಿಸಿದ್ದಾರೆ. ಅದನ್ನು ನಿರ್ವಹಿಸುವುದು ಸ್ಪಷ್ಟವಾಗಿ ನಿರ್ದೇಶನ ನೀಡಬೇಕು. ಕಾಲಕಾಲಕ್ಕೆ ಮಾರುಕಟ್ಟೆಯ ಮೊಟ್ಟೆಯ ನೈಜದರವನ್ನು ಘಟಕ ವೆಚ್ಚ ರೂಪದಲ್ಲಿ ನೀಡಬೇಕು.

ಮುಖ್ಯ ಶಿಕ್ಷಕರ ಕಾರ್ಯಭಾರ ಕಡಿಮೆ ಮಾಡಲು ನೇರವಾಗಿ ಮೊಟ್ಟೆಯನ್ನು ಶಾಲೆಗಳಿಗೆ ಸರಬರಾಜು ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.


ಈ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯೆ

ಬಲ್ಕಿಶ್ ಬಾನು, ಉಪವಿಭಾಗಾಧಿಕಾರಿ ಯತೀಶ್ ಆರ್., ಸಂಘದ ಅಧ್ಯಕ್ಷ ಮಾಲತೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸೋಮಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Exit mobile version