Site icon TUNGATARANGA

ಈ ಭಾರೀ ಶಿವಮೊಗ್ಗ ದಸರಾಕ್ಕೆ ಅದ್ದೂರಿ ತಯಾರಿ /ಹತ್ತು ದಿನ ಕಾಲ ನಡೆಯುವ ದಸರಾ ಉತ್ಸವದಲ್ಲಿ ಯಾವೆಲ್ಲಾ ಕಾರ್ಯಕ್ರಮ ನಡೆಯಲಿವೆ ಅದ್ದೂರಿ ದಸರಾದಲ್ಲಿ ಯಾವ್ಯಾವ ನಟಿಯರು ಪಾಲ್ಗೊಳ್ಳಲಿದ್ದಾರೆ ?

1. ಶಿವಮೊಗ್ಗ ನಾಡಹಬ್ಬ ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಕಡೆಯ ಹಂತದ ತಯಾರಿಗಳು ನಡೆಯುತ್ತಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯು ಸರ್ವ ಸನ್ನದ್ಧವಾಗಿದೆ.

2. 10 ದಿನಗಳ ಕಾಲ ನಡೆಯುವ ವೈಭವದ ದಸರಾ ಉತ್ಸವದಲ್ಲಿ 68ಕ್ಕೂ ಹೆಚ್ಚು ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ವಿವಿಧ ವೇದಿಕೆಗಳಲ್ಲಿ ನಡೆಯಲಿದೆ.

3. ಸಾವಿರಾರು ಕಲಾವಿದರು ಈ ಬಾರಿಯ ಅದ್ದೂರಿ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ.

4. ಈಗಾಗಲೇ ಮಹಾನಗರ ಪಾಲಿಕೆಯ ವತಿಯಿಂದ 14 ಸಮಿತಿಗಳು ರಚನೆಯಾಗಿದ್ದು, ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

5. ಈ ಬಾರಿ ವಿಶೇಷವಾಗಿ ಶಿಕ್ಷಣ ಇಲಾಖೆಯ ಸಹಕಾರದಿಂದ ಮಕ್ಕಳ ದಸರಾ ನಡೆಯಲಿದ್ದು 26 ಸಾವಿರ ಮಕ್ಕಳು ಭಾಗವಹಿಸಲಿದ್ದಾರೆ.

6. ಶಿವಮೊಗ್ಗ ದಸರಾದಲ್ಲಿ ಇದೇ ಮೊದಲನೇ ಬಾರಿ ಗಮಕ ದಸರಾ, ಪತ್ರಿಕಾ ದಸರಾ, ಹಾಗೂ ಪೌರಕಾರ್ಮಿಕರ ದಸರಾ ನಡೆಸಲು ತೀರ್ಮಾನಿಸಲಾಗಿದೆ. ವಿಶೇಷವಾಗಿ ಪೌರಕಾರ್ಮಿಕರ ದಸರಾ ಆಲೋಚನೆಯೂ ತುಂಬಾ ಸಂತೋಷ ತಂದುಕೊಟ್ಟಿದೆ.

7. 9 ದಿನಗಳ ಕಾಲ ಧಾರ್ಮಿಕ ಕಾರ್ಯಗಳು ನಡೆಯಲಿವೆ.

8. ಅಕ್ಟೋಬರ್ 10 ರಂದು ನಡೆಯಲಿರುವ ಸಾಂಸ್ಕೃತಿಕ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ಕನ್ನಡ ಚಿತ್ರರಂಗದ ಖ್ಯಾತ ನಟಿಯಾದ ಮಾಲಾಶ್ರೀ ಅವರು ಆಗಮಿಸಲಿದ್ದಾರೆ.

9. ಅಕ್ಟೋಬರ್ 11ರಂದು ನಡೆಯಲಿರುವ ಸಾಂಸ್ಕೃತಿಕ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ಕನ್ನಡ ಚಿತ್ರರಂಗದ ನಟಿಯಾದ ಶ್ರೀಮತಿ ಭವ್ಯ ಅವರು ಆಗಮಿಸಲಿದ್ದಾರೆ.

10. ದಿನಾಂಕ 3ರಂದು ಕೋಟೆ ದುರ್ಗಮ್ಮ ದೇವಸ್ಥಾನದಲ್ಲಿ ವೈಭವತವಾಗಿ ಉದ್ಘಾಟನೆ ನೆರವೇರಲಿದೆ.

11. ಸಕ್ರೆಬೈಲ್ ನಿಂದ 3 ಆನೆಗಳು ಬರಲಿದ್ದು ತಾಯಿ ಚಾಮುಂಡೇಶ್ವರಿ ಅಂಬಾರಿ ಉತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ನಡೆಯಲಿದೆ.

12. ದಿನಾಂಕ 12ರಂದು ಶಿವಪ್ಪ ನಾಯಕ ಅರಮನೆಯಿಂದ ನಂದಿ ಧ್ವಜಕ್ಕೆ ಪೂಜೆಯ ನಂತರ ದೇವಾನು-ದೇವತೆಗಳ ಅಭೂತಪೂರ್ವ ಉತ್ಸವ ಪ್ರಾರಂಭವಾಗಲಿದೆ.

13. ದಿನಾಂಕ 12ರಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಸಂಜೆ ಆರು ಮೂವತ್ತಕ್ಕೆ ಬನ್ನಿ ಮೂಡಿಯೋ ಕಾರ್ಯಕ್ರಮ ನೆರವೇರಲಿದೆ.

Exit mobile version