ಶಿವಮೊಗ್ಗ : ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ ಪ್ರಯುಕ್ತ ಅ.೩ರಿಂದ ಅ. ೧೨ರವರೆಗೆ ಶರನ್ನವರಾತ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿನಿತ್ಯ ಬೆಳಿಗ್ಗೆ ೮ಗಂಟೆಯಿಂದ ಚಂಡಿಕಾಪಾರಾಯಣ ಹಾಗೂ ದೇವಿಗೆ ವಿಶೇಷ ಅಲಂಕಾರ , ಬೆಳಿಗ್ಗೆ ೧೦ಗಂಟೆಯಿಂದ ಹೋಮ ಪ್ರಾರಂಭವಾಗಲಿದೆ ೧೨.೩೦ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಿರುತ್ತದೆ.
ಪ್ರತಿನಿತ್ಯ ಸಂಜೆ ೬.೦೦ ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ ೮ಗಂಟೆಗೆ ಉಯ್ಯಾಲೇ ಸೇವೆ ಪ್ರಾರಂಭ, ೮.೩೦ಕ್ಕೆ ಮಹಾಮಂಗಳಾರತಿ ರ್ಥಪ್ರಸಾದ ವಿನಿಯೋಗವಿರುತ್ತದೆ.
ಅ.೦೩ಗುರುವಾರದಂದು ಶ್ರೀಮತಿ ಡಾ|| ರಶ್ಮಿ ಶ್ರೀ ಡಾ || ಅನಿಲ್‌ಕುಮಾರ್ ಕುಟುಂಬದವರಿಂದ ದೇವಿಗೆ ಅರಿಶಿನ-ಕುಂಕುಮ ಅಲಂಕಾರ, ಶ್ರೀಮತಿ ಭವಾನಿ ಶ್ರೀ ಜಯಣ್ಣ ಕುಟುಂಬದವರಿಂದ , ಶ್ರೀಮತಿ ಭವಾನಿ ಮತ್ತು ಶ್ರೀ ಶಶಿಧರ್ ಕುಟುಂಬದವರಿಂದ ದೀಪ ನಮಸ್ಕಾರ, ಶ್ರೀಮತಿ ದಿವ್ಯ ಡಾ|| ಮೋಹನ್ ಕುಟುಂಬದವರಿಂದ ಉಯ್ಯಾಲೇ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀ ಚೇತನ್ ಭಟ್ ೯೯೮೦೨೪೭೦೮೧, ಶ್ರೀ ಕೆ. ಶೇಖರ್ ೯೪೪೮೮೮೮೧೨೯ ಸಂಪರ್ಕಿಸಬಹುದು.
ಭಕ್ತಾದಿಗಳು ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.