ಶಿವಮೊಗ್ಗ: ದೇವಾಲಯಕ್ಕೆ ಸೇರಿದ ಜಮೀನು ಬಿಟ್ಟು ಕೊಡದೇ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿ ತಾಲೂಕು ಅರಬಿಳಚಿ ವಡ್ರಟ್ಟಿ ಗ್ರಾಮದ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಬಗರ್ಹುಕುಂ ಕಮಿಟಿ ಮಾಜಿ ಸದಸ್ಯ ನಂಜುಂಡಪ್ಪ ಅವರು ನೀಲಾಂಬಿಕಾ ದೇವಸ್ಥಾನಕ್ಕೆ ಸಂಬಂಧಿಸಿದ ಅರಡೊಟ್ಲು ಗ್ರಾಮದ ಸ.ನಂ. ೭೨ರಲ್ಲಿ ಒಂದು ಎಕರೆ ಜಮೀನನ್ನು ಅಕ್ರಮವಾಗಿ ಪೋಡಿ ಮಾಡಿಕೊಂಡು ಕಬಳಿಸಿದ್ದಾರೆ. ಇದನ್ನು ಕೇಳಿದರೆ
ಗ್ರಾಮಸ್ಥರನ್ನೇ ಬೆದರಿಸುತ್ತಿದ್ದಾರೆ. ಅವರ ವಿರುದ್ಧ ಸೂಕ್ರ ಕಾನೂನು ಕ್ರಮ ಜರುಗಿಸಿ ದೇವಸ್ಥಾನದ ಜಮೀನನ್ನು ವಾಪಸ್ ಕೊಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ರಮೇಶ ಕೆ., ಶರಣಪ್ಪ, ಧನಂಜಯ, ಸಂಗೀತಾ, ಲತಾ, ಚೈತ್ರಾ, ದಿವಾಕರ ಮೊದಲಾದವರಿದ್ದರು.