Site icon TUNGATARANGA

ಸಿಎಂ ಸಿದ್ದರಾಮಯ್ಯ ಮೇಲೆ FIR ದಾಖಲಾಗಿರುವ ಬಗ್ಗೆ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದೇನು ?

ಶಿವಮೊಗ್ಗ :  ಸಿಎಂ ಸಿದ್ದರಾಮಯ್ಯ ಮೇಲೆ  ಎಫ್ಐಆರ್ ದಾಖಲಾಗಿರುವುದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಸಿಎಂ ಸ್ಥಾನ ಪ್ರಭಾವ ಇರುವ ಸ್ಥಾನ. ಹಾಗಾಗಿ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಹಗರಣ ನಡೆದಿರುವ ಬಗ್ಗೆ ಎಲ್ಲವೂ ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿದ್ರೆ ತನಿಖೆ ಸರಿಯಾಗಿ ನಡೆಯೋಲ್ಲ. ಹಾಗಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದರು.

ಪ್ರತಿ ಗ್ರಾ.ಪಂ.ನಲ್ಲಿ ಸಹಕಾರ ಸಂಘ ಸ್ಥಾಪಿಸಬೇಕು ಅನ್ನೋದು ಪ್ರಧಾನಿ ಅವರ ಕನಸು. ಹಾಗಾಗಿ ಈಗಾಗಲೇ ಪ್ರಧಾನಿಯವರು ಘೋಷಣೆ ಮಾಡಿದ್ದಾರೆ. ಸಹಕಾರ ಸಂಘ ಬಲಿಷ್ಠ ಸ್ತಂಬ ಆಗುತ್ತದೆ. ಸಂರಕ್ಷಣೆ ಇಟ್ಟು ಕ್ಷೇತ್ರದ ಅಭಿವೃದ್ಧಿ ಮಾಡಬೇಕಾಗುತ್ತದೆ ಎಂದರು.

ವಿಐಎಸ್ ಎಲ್ ಕನ್ನಡಿಗರ ಹೆಮ್ಮೆಯ ಸಂಸ್ಥೆ ಅದು. ಅದರ ಉಳಿವಿಗಾಗಿ ನಮ್ಮ‌ ಪ್ರಯತ್ನ ಇರುತ್ತದೆ. ಕಾರ್ಖಾನೆಗೆ ಕೇಂದ್ರ ಸಚಿವ ಕುಮಾರ ಸ್ವಾಮಿ ಭೇಟಿ ನೀಡಿದ್ದಾರೆ. ಇದನ್ನ ನಮ್ಮ ಕುಟುಂಬ ಆರಂಭಿಸಿತ್ತು. ಅದನ್ನ ಉಳಿಸುವ ಕೆಲಸ ಆಗಲಿದೆ. ವಿಐಸ್ಎಲ್ ಹೆಮ್ಮೆಯ ಸಂಸ್ಥೆಯಾಗಿದೆ. ಅದಕ್ಕೆ ನಮ್ಮ ಪ್ರೋತ್ಸಾಹವಿದೆ ಎಂದರು.

ಮೈಸೂರು-ಕೊಡಗು ಆರ್ಗನಿಕ್ ಅಭಿವೃದ್ಧಿ ಬೇಕು. ಪಾರಂಪರಿಕ ಅಭಿವೃದ್ಧಿಯ ಅಗತ್ಯವಿದೆ. ಸಂರಕ್ಷಣ ಆಗಬೇಕಿದೆ. ಪ್ರವಾಸೋದ್ಯಮ ಆರ್ಥಿಕವಾಗಿ ಅವಲಂಭಿಸಿದೆ. ಮೈಸೂರಿನಲ್ಲಿ ಏರ್ ಪೋರ್ಟ್ ಆಗಬೇಕಿದೆ. 46 ಎಕರೆ ಭೂಸ್ವಾಧೀನ ಆಗಬೇಕಿದೆ ಹೈವೆ, ಲೈಟ್ ಕಂಬಗಳು ಶಿಫ್ಟ್ ಆಗಬೇಕಿದೆ. ನಂತರ ಕ್ರೆಡಿಲ್ ನಿಂದ ಏರ್ ಪೋರ್ಟ್ ನಿರ್ಮಿಸಲಾಗುವುದು ಎಂದರು. 

ನಾಲ್ಕು ಪ್ಯಾಕೇಜ್‌ನಲ್ಲಿ ಮೈಸೂರು ಕೊಡುಗು ಅಭಿವೃದ್ಧಿಯಾಗಬೇಕಿದೆ. ಬೆಳಗೋಳ ರಸ್ತೆ ಅಭಿವೃದ್ಧಿ ಆಗಲಿದೆ. ಮೈಸೂರಿನಲ್ಲಿ ಮತ್ತೊಂದು ರೈಲು ಉದ್ಘಾಟನೆ ಆಗಲಿದೆ ಎಂದ ಯದುವೀರ್‌, ಮೂಡಾ ಹಗರಣದಲ್ಲಿ ಎಫ್ಐಆರ್ ಆಗಿದೆ ಪಾರದರ್ಶಕ ತನಿಖೆಯಾಗಬೇಕು ಹಾಗಾಗಿ ಸಿಎಂ ರಾಜೀನಾಮೆ ನೀಡಬೇಕು ಎಂದರು. 

ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಅವರ ಮೇಲೆ ಎಫ್ಐಆರ್ ಆಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಯವೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಂಸದ ಯದುವೀರ್ ಕಾನೂನು ಕ್ರಮ ಆಗಲಿದೆ. ಮೊದಲು ಸಿಎಂ ರಾಜೀನಾಮೆ ನೀಡಲಿ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಸೇರಿದಂತೆ ಹಲವರು ಉಪಸಿತರಿದ್ದರು.

,  

Exit mobile version