Site icon TUNGATARANGA

ತೀರಾ ಜಾಸ್ತಿ ಸಲಿಗೆ, ಸದರ ಬ್ಯಾಡ್ರಿ!, ಗಜೇಂದ್ರ ಸ್ವಾಮಿ ಅವರ ನೆಗಿಟೀವ್ ಥಿಂಕಿಂಗ್ ಇಂದಿನ ಅಂಕಣ…,

ವಾರದ ಅಂಕಣ- 13

ಗಜೇಂದ್ರ ಸ್ವಾಮಿ ಎಸ್‌. ಕೆ., ಶಿವಮೊಗ್ಗ

ಸಂಬಂಧಿಕರಾಗಲಿ ಸ್ನೇಹಿತರಾಗಲಿ ಯಾರೇ ಆಗಲಿ ಎಲ್ಲರನ್ನೂ ಪ್ರೀತಿಸಿ ಗೌರವಿಸಿ ಗುರುತಿಸಿಕೊಳ್ಳಿ.ಎಲ್ಲರ ಜೊತೆ ಚೆಂದಾಗಿರಿ ಎಂಬುದು ಸಾಮಾನ್ಯ ವಾಡಿಕೆ. ಆದರೆ ಅದು ಸಾಮಾನ್ಯವಾಗಿರಲಿ. ಅದಕ್ಕೊಂದು ಮಿತಿ ಇರಲಿ. ಯಾರೇ ಆಗಿರಲಿ ಅವರನ್ನು ಅತಿಯಾಗಿ ನಂಬಬೇಡಿ, ಅತಿಯಾಗಿ ಹಚ್ಚಿಕೊಳ್ಳಬೇಡಿ. ಹಾಗೆಯೇ ಅತಿಯಾದ ಸಲಿಗೆ, ಸದರ ನೀಡಬೇಡಿ ಎಂಬುದು ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಶೇಷ.


ಪ್ರತಿವಾರ ಒಂದಿಲ್ಲೊಂದು ವಿಚಾರದಲ್ಲಿ ಹೊಸ ಬಗೆಯ ನೆಗೆಟಿವ್ ಮನಸುಗಳನ್ನು ಕುರಿತು ಅವರ ಬದುಕಿನ ನಡುವೆ ಮುಕ್ತ ಪಾಸಿಟಿವ್ ಮನಸುಗಳು ಅನುಭವಿಸುವ ಯಾತನೆಗಳನ್ನು ನಿರಂತರವಾಗಿ ನಿಮ್ಮ ಮುಂದೆ ನೀಡುತ್ತಾ ಬರಲಾಗಿದೆ. ನೀವು ಅದನ್ನು ಗಮನಿಸುತ್ತಿದ್ದೀರಿ ಅಲ್ಲವೇ? ಇಲ್ಲೊಂದು ಮುಖ್ಯ ವಿಷಯ ಏನೆಂದರೆ ನಿಮಗೆ ಗೊತ್ತಿಲ್ಲದೆ ನೀವು ಕೆಲವರನ್ನು ಅತಿ ಹೆಚ್ಚಾಗಿ ನಂಬುತ್ತೀರಿ.  ಸಲಿಗೆ ಕೊಡುತ್ತೀರಿ ನೀವು ಅವರನ್ನು ನಿಮ್ಮ ನಿರ್ಧಾರ ಎಂಬಂತೆ ಹಚ್ಚಿಕೊಂಡು ಬಿಡುತ್ತೀರಿ, ಸದರ ನೀಡುತ್ತೀರಿ ಅದೇ ಮುಂದೆ ನಿಮಗೆ ಮಾರಕವಾಗಿ ಪರಿಣಮಿಸುತ್ತಿರುವುದು ಇತ್ತೀಚಿನ ಬಹಳಷ್ಟು ಘಟನೆಗಳನ್ನು ನೋಡಿದಾಗ ಸತ್ಯವೆನಿಸುತ್ತದೆ ಅಲ್ಲವೇ? ಹಚ್ಚಿಕೊಂಡ ಸಲಿಗೆ ಪಡೆದದ ಇನ್ನೊಂದು ಮನಸ್ಸು ನಿಧಾನವಾಗಿ ನಿಮ್ಮನ್ನು, ನಿಮ್ಮ ಮನಸ್ಸನ್ನು ನಿಮ್ಮ ಬದುಕನ್ನು ನಿಮ್ಮ ವ್ಯಕ್ತಿತ್ವವನ್ನು ಹಿಡಿದರಲ್ಲಿಟ್ಟುಕೊಳ್ಳಲು ನಿಮ್ಮ ವಿರುದ್ಧ ಆಟವಾಡಲು ಶುರು ಹಚ್ಚಿಕೊಂಡು ಬಿಡುತ್ತದೆ.


ಇದು ಸಾಮಾನ್ಯವಾಗಿ ಎಲ್ಲ ಕಡೆ ಕಂಡುಬರುವ ಸತ್ಯ ಎಂದರೆ ತಪ್ಪಾಗಲಿಕ್ಕಿಲ್ಲ. ಅಯ್ಯೋ ಪಾಪ ಎಂದು ಸಲಹೆ ನೀಡಿದ ಸಲುಗೆ, ನೀಡಿದ ಸದರ ಕೊಟ್ಟ ತಪ್ಪಿಗೆ ನೀವು ನಿಮ್ಮತನವನ್ನು ಇನ್ನೊಂದು ಕಡೆ ಅಡ ಇಡಬೇಕಾದ ಪರಿಸ್ಥಿತಿ ಬರುವುದು ಸಾಮಾನ್ಯವಾಗಿದೆ.
ಹಾಗೆಂದ ಮಾತ್ರಕ್ಕೆ ಎಲ್ಲರನ್ನೂ ಎಲ್ಲವನ್ನು ದ್ವೇಷಿಸಿ ಎಂಬುದು ನಮ್ಮ ಉದ್ದೇಶವಲ್ಲ. ಪ್ರೀತಿ ಇರಲಿ ಸಲಿಗೆ ಇರಲಿ ಎಲ್ಲದಕ್ಕೂ ಒಂದು ಮಿತಿ ಇರಲಿ, ಅತಿಯಾದರೆ ಅದು ಅಮೃತವಾಗದು ವಿಷವಾಗುವ ಎಲ್ಲ ಸಾಧ್ಯತೆಗಳು ಇವೆ.


ಇತ್ತೀಚಿನ ಒಂದು ಘಟನೆಯನ್ನು ತಮ್ಮ ಮುಂದೆ ಉದಾಹರಣೆ ರೂಪದಲ್ಲಿ ನೀಡಬಹುದು. ನಮ್ಮ ಹಿರಿಯ ಗೆಳೆಯರೊಬ್ಬರು ಎಲ್ಲರ ಜೊತೆ ಸಹಜ ಸ್ನೇಹಜೀವಿಯಾಗಿ ಬೆಳೆಯುತ್ತಿದ್ದರು. ತಾವೇಷ್ಟೇ ಬೆಳೆದಿದ್ದರೂ ಅದನ್ನು ಅಹಂಕಾರದಿಂದ ಕಾಣದೆ ಅಷ್ಟೇ ಪ್ರೀತಿಯಿಂದ ಎಲ್ಲರ ಜೊತೆ ಗೌರವಾನ್ವಿತರಾಗಿದ್ದರು. ಆದರೆ ಅವರ ಜೊತೆಗೆ ಇದ್ದ ನೆಗೆಟಿವ್  ಮನಸ್ಸೊಂದು ಈ ಸ್ನೇಹಜೀವಿಯನ್ನು ಬಳಕೆ ಮಾಡಿಕೊಂಡು ಬೇಕಿಲ್ಲದ ಎಲ್ಲಾ ಆಟ ಆಡಿ ಅಂತಿಮವಾಗಿ ಅವರ ತೇಜೋವಧಗೆ ಮುಂದಾಗಿದ್ದು ಸುಳ್ಳೇನಲ್ಲ.
ಸಮಾಜದ ನಾನಾ ಚೌಕಟ್ಟುಗಳಲ್ಲಿ ಇಂತಹ ಘಟನೆಗಳು ಇತ್ತೀಚೆಗೆ ಸಹಜವಾಗಿವೆ ದೈಹಿಕ ಸಂಬಂಧ ಕೆಲವೊಮ್ಮೆ ಮಾನಸಿಕ ಒಪ್ಪಿಗೆಯಿಂದ ನಡೆದಿದ್ದರೂ ಸಹ ಕೊನೆ ಹಂತದಲ್ಲಿ ಅದೊಂದು ಬಲತ್ಕಾರ ಅತ್ಯಾಚಾರ ಎಂಬ ಹೆಸರಿನಲ್ಲಿ ತಿರುಗುತ್ತಿರುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಹಾಗಾಗಿ ಯಾರೇ ಆಗಲಿ ಯಾವುದೇ ಆಗಲಿ ಅತಿಯಾದ ಪ್ರೀತಿ ಸಲುಗೆ ಸದರ ಇರುವುದು ಒಳ್ಳೆಯದಲ್ಲ ಅಲ್ಲವೇ?


ಇಲ್ಲಿ ಕೊಡುಕೊಳ್ಳುವಿಕೆಯ ಹಣದ ಲೆಕ್ಕಾಚಾರ ಇರಬಹುದು ಯಾವುದೇ ವಸ್ತುಗಳ ನೀಡಿಕೆ ಇರಬಹುದು ಮನಸುಗಳ ಮಧ್ಯದ ಮಾತುಕತೆಗಳಿರಬಹುದು ದೈಹಿಕ ಮಾನಸಿಕ ಸಂಬಂಧಗಳಿರಬಹುದು ಅವುಗಳ ನಡುವೆ ನಮ್ಮ ಇತಿಮಿತಿಗಳು ಸಹ ಸೂಕ್ಷ್ಮವಾಗಿರಬೇಕು ಅಲ್ಲವೇ? ಸಲಗೆ ಹಾಗೂ ಸದರ ಎಂಬುದು ಭಾವನಾತ್ಮಕ ಪದವಲ್ಲ. ಅದು ನಮ್ಮ ನಡುವೆ ಇದ್ದರೂ ಇಲ್ಲದಂತಿರಬೇಕು. ಮನಸ್ಸಿಗೆ ನೋವು ಉಂಟು ಮಾಡದಂತಿರಬೇಕು.
(ಮುಂದುವರೆಯುತ್ತದೆ)

Box

ಕೊಟ್ಟದನ್ನ ಕೇಳಿದ್ರೆ  ನಿಮಗೇ ಗ್ರಹಚಾರ!?

ಅಯ್ಯೋ ಪಾಪ ಎನ್ನೊದೇ ಬ್ಯಾಡ ಅಂತ ಮತ್ತೆ ಮತ್ತೆ ಹೇಳುತ್ತಿರುವುದಕ್ಕೆ ಕಾರಣ ಏನು ಗೊತ್ತಾ? ಬಡ್ಡಿವ್ಯವಹಾರದವರನ್ನು ಬದಿಗಿಟ್ಟು ಸಹಜ ಪ್ರೀತಿ, ವಿಶ್ವಾಸಕ್ಕೆ ನೀವೇನಾದ್ರೂ ಹಣ ಕೊಟ್ರೆ ಅದನ್ನು ಕಾಡಿ ಬೇಡಿ ವಾಪಾಸ್ ಪಡೆಯಬೇಕಾದ ಅನಿವಾರ್ಯತೆ ಬಂದಿರುವುದು ದುರಂತ.
ನಿಮ್ಮ ಹಣವನ್ನು ವಾಪಸ್ ಕೇಳಲು ನೀವು ಅಣ್ಣ ಅಪ್ಪ ಎಂದು ಭಿಕ್ಷೆಯಂತೆ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಬಂದಿರುವುದು ನಿಜಕ್ಕೂ ದುರಂತವಲ್ಲವೇ ಜಾಸ್ತಿ ಮಾತನಾಡಿದರೆ ಏನು ಸೀಮೆಯಾಗಿರುತ್ತಾ ಸೀಮೆ ಮೇಲೆ ಇಲ್ಲದ್ದ ಕೊಡ್ತೀನಿ, ಹೋಗಯ್ಯ ಎನ್ನುವ ದುರಹಂಕಾರಿಗಳು ನಮ್ಮ ನಡುವೆ ಹೆಚ್ಚುತ್ತಿರುವುದು ಮತ್ತೊಂದು ಬಗೆಯ ದುರಂತವೇ ಹೌದು.


ಇಲ್ಲಿ ಪಡೆಯುವಾಗ ಕಾಡುವ ಬೇಡುವ ನೆಗೆಟಿವ್ ಮನಸುಗಳು ಕೊಡುವಾಗ ಪಾಸಿಟಿವ್ ಆಗಿ ಹೇಗೆ ತಾನೇ ಬದಲಾಗಲು ಸಾಧ್ಯ. ಜಾಸ್ತಿ ಮಾತಾಡಿದ್ರೆ ಕಷ್ಟ. ಅಕಸ್ಮಾತ್ ಅವರೇನಾದರೂ ಜಾತಿ ನಿಂದನೆ ಕೇಸ್ ಹಾಕುವಂತವರಾದರೆ ಆ ಪದವು ಅಲ್ಲಿ ಹೊರಬಂದುಬಿಡುತ್ತದೆ. ಪಡೆಯುವಾಗ ಇದ್ದ ಸಂಯಮ ಕೊಡುವಾಗ ನಿರ್ನಾಮವಾಗುವುದು ಹೆಚ್ಚುತ್ತಿರುವುದು ನಿಜ ಮನಸ್ಸುಗಳ ಮುಕ್ತ ಪಾಸಿಟಿವ್ ವ್ಯಕ್ತಿತ್ವವನ್ನು ಸಾಯಿಸುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

Exit mobile version