Site icon TUNGATARANGA

ರಿಯಾಯಿತಿ ದರದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟ /ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ/ರಂಗ ಕುಟುಂಬ ಕಾರ್ಯಕ್ರಮಕ್ಕೆ ನೋಂದಣಿ

ಶಿವಮೊಗ್ಗ, ಸೆ .27
     ಅಕ್ಟೋಬರ್ 01 ರಿಂದ 04 ರವರೆಗೆ 4 ದಿನಗಳ ಕಾಲ ಜಿಲ್ಲಾಧಿಕಾರಿಗಳ ಕಚೇರಿ ಆವರಣಲ್ಲಿ ಶ್ರೀ ಭಾರತಾಂಬೆ ಮಹಿಳಾ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಸಂಘ, ಎಲ್.ಟಿ. ಕಾಂಪ್ಲೆಕ್ಸ್, ನೆಲಮಹಡಿ, ಮುಖ್ಯ ರಸ್ತೆ, ದುರ್ಗಿಗುಡಿ, ಶಿವಮೊಗ್ಗ ಇವರ ಒಂದು ಮಳಿಗೆಯನ್ನು ತೆರೆದು, ರಿಯಾಯಿತಿ ದರದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು.


     ರಾಜ್ಯದಲ್ಲಿ 200 ಕ್ಕೂ ಹೆಚ್ಚು ಖಾದಿ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಲ್ಲಿ ಸುಮಾರು 20 ಸಾವಿರ ನೂಲುಗರು ಮತ್ತು ನೇಕಾರರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೋವಿಡ್ – 19 ರ ಸಾಂಕ್ರಾಮಿಕ ಪಿಡುಗಿನಿಂದಾಗಿ ಖಾದಿ ಸಂಘ/

ಸAಸ್ಥೆಗಳು ಸಂಕಷ್ಟದಲ್ಲಿರುತ್ತವೆ. ಆದ್ದರಿಂದ ಅಕ್ಟೋಬರ್ 2 ರ ಗಾಂಧಿ ಜಯಂತಿ ಸಂದರ್ಭದಲ್ಲಿ ದಿ: 01-10-2024 ರಿಂದ 04-10-2024 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವಣದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟದ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತದ ಅನುಮತಿ ಪಡೆದು ಮಳಿಗೆ ತೆರೆಯಲಾಗುತ್ತಿದೆ.


     ಸಾರ್ವಜನಿಕರು ಇದರ ಸದುಪಯೋಗ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಖಾದಿ ಉತ್ಪನ್ನಗಳನ್ನು ಖರೀದಿಸಬೇಕೆಂದು ಜಿಲ್ಲಾ ಖಾದಿ ಗ್ರಾಮೋದ್ಯಗ ಅಧಿಕಾರಿ ಕೋರಿದ್ದಾರೆ.

==

ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ
ಶಿವಮೊಗ್ಗ, ಸೆ .27
 ಸೆ.29 ರ ಬೆಳಿಗ್ಗೆ 10.30 ಕ್ಕೆ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 2024-25 ನೇ ಸಾಲಿನ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
 ಮಾನ್ಯ ಮುಖ್ಯಮಂತ್ರಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ


ಶ್ರೀ ಸಿದ್ದರಾಮಯ್ಯ ಇವರ ಗೌರವಾನ್ವಿತ ಉಪಸ್ಥಿತಿ ಇರಲಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.


 ವಿಶೇಷ ಆಹ್ವಾನಿತರಾಗಿ ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮ/ಲ್ಯಾಂಡ್ ಆರ್ಮಿ ಬೆಂಗಳೂರು ಇದರ ಅಧ್ಯಕ್ಷರಾದ ಬಿ.ಕೆ.ಸಂಗಮೇಶ್ವರ, ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಪಾಲ್ಗೊಳ್ಳುವರು.


 ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎನ್.ಚನ್ನಬಸಪ್ಪ ವಹಿಸುವರು. ಸಂಸದರು, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.

==

ರಂಗ ಕುಟುಂಬ ಕಾರ್ಯಕ್ರಮಕ್ಕೆ ನೋಂದಣಿ
ಶಿವಮೊಗ್ಗ, ಸೆ .27
     ಮಹಾನಗರಪಾಲಿಕೆ ವತಿಯಿಂದ ದಸರಾ ಪ್ರಯುಕ್ತ ರಂಗ ದಸರಾ ಕಾರ್ಯಕ್ರಮದಲ್ಲಿ ಈ ಬಾರಿ ರಂಗ ಕುಟುಂಬ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
     ಸಾರ್ವಜನಿಕರ ಪಾಲ್ಗೊಳ್ಳೊವಿಕೆಯ ದೃಷ್ಟಿಯಿಂದ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾಟಕ ಆಸಕ್ತ ಕುಟುಂಬಗಳು ಮನೆಯಲ್ಲಿಯೇ ಕಿರು ನಾಟಕ ಪ್ರದರ್ಶಿಸುವ ಈ ಕಾರ್ಯಕ್ರಮದ ಮೂಲಕ ಆಯ್ಕೆಯಾದ ಕನಿಷ್ಟ 4 ನಾಟಕಗಳಿಗೆ ಕುವೆಂಪು ರಂಗಮAದಿರದ ರಂಗ ದಸರಾ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.


    ಆಸಕ್ತ ಕುಟುಂಬಗಳು ತಮ್ಮ ಆಯ್ಕೆಯ ಕಿರು ನಾಟಕವನ್ನು ತಾವೇ ಮನೆಯಲ್ಲಿ ತಾಲೀಮು ಮಾಡಿ, ಮನೆಯಲ್ಲಿಯೇ ತೀರ್ಪುಗಾರರ ಎದುರು ಪ್ರದರ್ಶಿಸಬೇಕು. ಪ್ರತಿ ಕುಟುಂಬಕ್ಕೂ ಸಹ ನಿರ್ದಿಷ್ಟ ದಿನಾಂಕ, ಸಮಯವನ್ನು ನಿಗದಿ ಮಾಡಲಾಗುವುದು.


     ಕಾರ್ಯಕ್ರಮದ ನಿಯಮಗಳು : ಶಿವಮೊಗ್ಗ ರಂಗತAಡಗಳ ಪದಾಧಿಕಾರಿಗಳು, ಕಲಾವಿದರು ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸುವಂತಿಲ್ಲ. ನಾಟಕವನ್ನು ಅಭಿನಯಿಸುವ ಕಲಾವಿದರು ಆ ಮನೆಗೆ ಸಂಬAಧಿಸಿದವರಾಗಿರಬೇಕು. ಒಂದು ತಂಡದಲ್ಲಿ ಕನಿಷ್ಟ 3 ಮತ್ತು ಗರಿಷ್ಟ 10 ಜನರಿರಬೇಕು. ವಯಸ್ಸಿನ ಮಿತಿ ಇರುವುದಿಲ್ಲ, ಮನೆಯಲ್ಲಿಯೇ ಲಭ್ಯವಿರುವ ಅಗತ್ಯ ಪರಿಕರಗಳನ್ನು ಬಳಸಬಹುದು. ನಾಟಕಕ್ಕೆ ಅಗತ್ಯವಿರುವ ಸಂಗೀತ, ವಸ್ತಾçಲಂಕಾರ, ಪ್ರಸಾದನವನ್ನು ತಂಡದವರೇ ನಿರ್ವಹಿಸಬೇಕು. ನಾಟಕ ಅವಧಿ ಕನಿಷ್ಟ 15 ಮತ್ತು ಗರಿಷ್ಟ 30

ನಿಮಿಷ ಇರುವುದು ಕಡ್ಡಾಯ. ಮನೆಯಲ್ಲಿ ಇರುವ ಸ್ಥಳಾವಕಾಶ ಬಳಸಬೇಕು. ರಾಷ್ಟಿçÃಯ ಹಿತಾಸಕ್ತಿಗೆ ಧಕ್ಕೆಯಾಗುವಂತಹ, ಕೋಮು ದ್ವೇಷ ಕೆರಳಿಸುವಂತಹ, ಸಂವಿಧಾನ ವಿರೋಧಿ ವಿಷಯಗಳುಳ್ಳ ನಾಟಕಗಳನ್ನು ಪರಿಗಣಿಸುವುದಿಲ್ಲ. ತೀರ್ಪುಗಾರರ ಆಯ್ಕೆ ಅಂತಿಮವಾಗಿರುತ್ತದೆ.
     ಅಕ್ಟೋಬರ್ 01 ರೊಳಗೆ ಹೆಸರು ನೊಂದಾಯಿಸಬೇಕು. ಅಕ್ಟೋಬರ್ 02 ರಿಂದ ಮನೆಗಳಲ್ಲಿ ನಾಟಕ ಪ್ರದರ್ಶನಕ್ಕೆ ದಿನಾಂಕ ಹಾಗೂ ಸಮಯ ನಿಗದಿಪಡಿಸಲಾಗುವುದು. ಕಲಾವಿದರ ವಿವರ, ನಾಟಕ ಪ್ರದರ್ಶನ ಮಾಡುವ ಮನೆ ವಿಳಾಸ, ದೂರವಾಣಿ ಸಂಖ್ಯೆಯೊAದಿಗೆ ಕೈಬರಹದ ಅರ್ಜಿಯನ್ನು ಕ್ರೀಡಾಲೋಕ, ಶ್ರೀನಿಧಿ ಕಾಂಪ್ಲೆಕ್ಸ್, ಟಿಎಸ್ ವೃತ್ತ(ಗೋಪಿ ವೃತ್ತ), ಶಿವಮೊಗ್ಗ ಇವರಿಗೆ ನೀಡಿ ನೋಂದಾಯಿಸಬೇಕು. ಹೆಚ್ಚಿನ ವಿವರಗಳಿಗೆ ಶ್ರೀಕಂಠಪ್ರಸಾದ್ ಮೊ.ಸಂ 8660756404, ಸುರೇಶ್ 9449925746, ಚೈತ್ರಾ 6364571232 ಇವರನ್ನು ಸಂಪರ್ಕಿಸಬಹುದೆAದು ಪಾಲಿಕೆ ರಂಗ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Exit mobile version