ಶಿವಮೊಗ್ಗ, ಸೆ.26:
ಹಾವುಗಳ ಜಾತಿಯಲ್ಲಿ ವಿಶೇಷ ಹಾವಾದ ಹಾರುವ ಹಾವು (Flying Ornate Snake) ಕುವೆಂಪು ವಿಶ್ವವಿದ್ಯಾಲಯದ ನಗರ ಕಛೇರಿಯಲ್ಲಿ ಕಾಣಿಸಿಕೊಂಡಿದೆ.
ಎಂ.ಆರ್.ಎಸ್ ಸರ್ಕಲ್ ನಲ್ಲಿರುವ ಕುವೆಂಪು ವಿಶ್ವವಿದ್ಯಾಲಯ ನಗರ ಕಛೇರಿಯಲ್ಲಿ ಹಾರುವ ಹಾವು (Flying Ornate Snake) ಕಾಣಿಸಿಕೊಂಡಿದೆ ಇದು ಉರಗ ಜಾತಿಯಲ್ಲಿ ವಿಶೇಷ ಮತ್ತು ಆಕರ್ಷಣೀಯ ವಾದದ್ದು ಈ ಹಾವಿಗೆ ಅಲಂಕೃತ ಹಾರುವ ಎಂದು ಹೆಸರು ನೋಡುಗರನ್ನು ಗಮನ ಸೆಳೆಯುತ್ತದೆ. ಈ ಹಾವು ನಗರ ಕಛೇರಿ ಆವರಣದಲ್ಲಿ ಕಾಣಿಸಿಕೊಂಡಿದ್ದು , ಕೊಡಲೆ ಉರಗ ರಕ್ಷಕ ಸ್ನೇಕ್ ವಿಕ್ಕಿ ಮತ್ತು ಉರಗ ತಜ್ಞ ಜಯಂತ ಬಾಬು ರವರಿಗೆ ಸಂಪರ್ಕಿಸಿದ್ದು ಕೊಡಲೆ ಸ್ಥಳಕ್ಕೆ ಆಗಮಿಸಿದ ಇವರು ಈ ಸುಂದರ ಹಾವಿನ ಬಗ್ಗೆ ಇಲ್ಲಿರುವ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಸುರಕ್ಷಿತವಾಗಿ ಸಂರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಿರುತ್ತಾರೆ.
ಉಗರಗಳ ರಕ್ಷಣೆಗಾಗಿ ಸಂಪರ್ಕಿಸಿ : ಸ್ನೇಕ್ ವಿಕ್ಕಿ
9916286349,
ಜಯಂತ್ ಬಾಬು
9886635333