Site icon TUNGATARANGA

ಬೊಮ್ಮನಕಟ್ಟೆ ನಿವಾಸಿಗಳಿಗೆ ಸ್ಥಗಿತಗೊಳಿಸಿರುವ ಎಲ್ಲಾ ರೀತಿಯ ಖಾತೆಗಳನ್ನು ದಾಖಲಿಸಿಕೊಡುವಂತೆ :ಮಾಜಿ ಸದಸ್ಯ ಹೆಚ್.ಸಿ.ಯೋಗೇಶ್ ಪಾಲಿಕೆ ಆಯುಕ್ತರಿಗೆ ಮನವಿ

ಶಿವಮೊಗ್ಗ,ಸೆ.೨೫: ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಆಶ್ರಯ ನಿವಾಸಿಗಳಿಗೆ ಸಂಬಂಧಪಟ್ಟಂತೆ ಈಗ ಸ್ಥಗಿತಗೊಳಿಸಿರುವ ಎಲ್ಲಾ ರೀತಿಯ ಖಾತೆಗಳನ್ನು ಮತ್ತೆ ದಾಖಲಿಸಿಕೊಡಬೇಕು

ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ.ಯೋಗೇಶ್ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.


ಬೊಮ್ಮನಕಟ್ಟೆಯ ಆಶ್ರಯ ಯೋಜನೆಯಡಿಯಲ್ಲಿ ಸಾವಿರಾರು ಬಡ ಕುಟುಂಬಗಳಿಗೆ ಉಚಿತವಾಗಿ ನಿವೇಶನಗಳನ್ನು ಮಂಜೂರು

ಮಾಡಲಾಗಿತ್ತು. ಈ ನಿವೇಶನಗಳಲ್ಲಿ ಅನೇಕರು ಆರ್ಥಿಕ ಸಹಾಯ ಪಡೆದುಕೊಂಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಇವರ ಪೌತಿ ಖಾತೆ ಹಾಗೂ ಇನ್ನಿತರ ಕಾನೂನು ರೀತಿಯ ಆಸ್ತಿ ವರ್ಗಾವಣೆಯನ್ನು ಪಾಲಿಕೆ ಸ್ಥಗಿತಗೊಳಿಸಿದೆ. ಇದರಿಂದ ನಿವೇಶನ ಮಾಲೀಕರುಗಳಿಗೆ

ಸ್ವತ್ತಿನ ಹಕ್ಕುದಾರಿಕೆಗೆ ಸಂಬಂಧಿಸಿದಂತೆ ತೊಂದರೆಯುಂಟಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.


ಆದ್ದರಿಂದ ಆಶ್ರಯಬಡಾವಣೆಯ ಸ್ವತ್ತಿನ ಖಾತೆಗೆ ಸ್ಥಗಿತಗೊಳಿಸಿರುವ ಕ್ರಮವನ್ನು ಹಿಂಪಡೆದು ನಿಯಮಾನುಸಾರ ಖಾತೆಯ ವರ್ಗಾವಣೆ ಮತ್ತು ಖಾತೆ ದಾಖಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಎಸ್.ಶಿವಕುಮಾರ್, ಪಾಲಾಕ್ಷಿ ಎಚ್.ನಾಗರಾಜ್ ಕಂಕಾರಿ, ರಮೇಶ್ ಹೆಗಡೆ, ಚೇತನ್, ರಾಮು ಉಪಸ್ಥಿತರಿದ್ದರು.

Exit mobile version