Site icon TUNGATARANGA

ಬೇಕಾಬಿಟ್ಟಿಯಾಗಿ ವಾಹನಗಳು ಪಾರ್ಕಿಂಗ್ ಕೆಲಕಾಲ ಟ್ರಾಫೀಕ್ ಜಾಮ್ ಪೋಲಿಸರಿಂದ ವಾಹನಕ್ಕೆ ವೀಲ್ ಲಾಕ್ /ಚಾಲಕರಿಗೆ ಸ್ಥಳದಲ್ಲೇ ದಂಡದ ಜೊತೆ ಕ್ಲಾಸ್

ಶಿವಮೊಗ್ಗ: ಬೊಲೆರೊ ವಾಹನ ಚಾಲಕರೋರ್ವರು ಕೋರ್ಟ್೯ ಆವರಣದಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ್ದರಿಂದ ಕೆಲಕಾಲ ಟ್ರಾಫಿಕ್ ಜ್ಯಾಮ್ ಆದ ಕಾರಣ ಪೋಲಿಸ್ ಕಾರ್ಯಚರಣೆಯೂ ನಡೆದಿದೆ.


ಈ ಹಿನ್ನೆಲೆಯಲ್ಲಿ ಕೆಲ ವಕೀಲರು ಸಂಚಾರಿ ನಿಯಂತ್ರಣ ಘಟಕ ೧೧೨ಕ್ಕೆ ಫೋನ್ ಕರೆ ಮಾಡಿದ್ದಾರೆ. ತಕ್ಷಣದಲ್ಲಿ ಸಂಚಾರಿ ಪೋಲಿಸರು ಸ್ಥಳಕ್ಕೆ ದೌಡಾಯಿಸಿದ್ದರೆ. ವಾಹನ ನಂಬರ್ ಪ್ಲೇಟ್ ಮೂಲಕ ಸಂಬಂಧಿಸಿದ

ವಾಹನ ಮಾಲಿಕರಿಗೆ ಸಂಪರ್ಕಿಸಿದರೂ ಒಂದು ತಾಸು ಕಳೆದರೂ ಅವರ

ಪತ್ತೆ ಇರಲಿಲ್ಲ. ಈ ಸಂದರ್ಭದಲ್ಲಿ ಕೇವಲ ಒಂದೇ ಕಡೆಯಿಂದ ವಾಹನಗಳು ಕೋರ್ಟಿನ ಆವರಣದಲ್ಲಿ ಬರಬೇಕಾಗಿದ್ದರಿಂದ ೧೧೨ಸಂಖ್ಯೆಯ ವಾಹನವೂ ಟ್ರಾಫಿಕ್ ಜ್ಯಾಮ್ ಅನುಭವಿಸುವಂತಾಯಿತು.


ಈ ಮಧ್ಯೆ ಪೋಲಿಸರು ಬೊಲೆರೊ ವಾಹನ ಮತ್ತು ಬೈಕ್ ಗೆ ವೀಲ್ ಲಾಕ್ ಮಾಡಿದ್ದಲ್ಲದೆ ವಾಹನ ಚಾಲಕರಿಗೆ ಸ್ಥಳದಲ್ಲೇ ದಂಡವನ್ನೂ ವಿಧಿಸಿದರು. ನಂತರ ಅವರಿಗೆ ತಿಳುವಳಿಕೆ ನೀಡಿ ಕಳುಹಿಸಲಾಯಿತು.

Exit mobile version