Site icon TUNGATARANGA

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಶಾಸಕ ಮುನಿರತ್ನ ವಿರುದ್ಧ ಬೃಹತ್ ಪ್ರತಿಭಟನೆ..

ಒಕ್ಕಲಿಗ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಾಗೂ ಒಕ್ಕಲಿಗ ಮಹಿಳೆಯರ ಬಗ್ಗೆ ಅಶ್ಲೀಲ ಪದ ಬಳಸಿ ನಿಂದನೆ ಮಾಡಿರುವ ಆರ್.ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸಬೇಕೆಂದು

ಸರ್ಕಾರಕ್ಕೆ ಆಗ್ರಹಿಸಿ ಇಂದು ಶಿವಮೊಗ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವುದರ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು…

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಬಿ.ಎ ರಮೇಶ್ ಹೆಗ್ಡೆ,

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷರಾದ ಚೇತನ್ ಗೌಡ, ಪ್ರಧಾನ ಕಾರ್ಯದರ್ಶಿ ರಘು ಗೌಡ, ನಿರ್ದೇಶಕರಾದ ಪ್ರಮೋದ್ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ

ಅಧ್ಯಕ್ಷರಾದ ಶ್ರೀ ಆದಿಮೂರ್ತಿ, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಶ್ರೀಮತಿ ಭಾರತಿ ರಾಮಕೃಷ್ಣರವರು, ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕರಾದ ಶ್ರೀಮತಿ ಯಮುನಾ ರಂಗೇಗೌಡರವರು, ಒಕ್ಕಲಿಗ ಸಮಾಜದ ಮುಖಂಡರಾದ ಗಾಡಿಕೊಪ್ಪ ರಾಜಣ್ಣ,

ರಂಗೇಗೌಡ್ರು, ಮೋಹನ್ ಗೌಡ, ಪ್ರಭಾಕರ್ ಗೌಡ,

ಹರ್ಷಿತ್ ಗೌಡ, ಪ್ರಮೋದ್ ಗೌಡ,  ಶ್ರೀನಿವಾಸ್ ಗೌಡ, ಕಿರಣ್ ಗೌಡ, ನಿರಂಜನ್ ಆಯನೂರು, ವಿಜಯ್ ಗೌಡ ಆಯನೂರು, ತಮ್ಮಣ್ಣ ಗೌಡ, ದುಮ್ಮಳ್ಳಿ ಯತೀಶ್ ಗೌಡ, ದಿವಾಕರ್ ಗೌಡ, ಚಂದ್ರಶೇಖರ್, ವೈಭವ್ ಗೌಡ, ಸತೀಶ್ ಗೌಡ ಸೇರಿದಂತೆ ಹಲವು ಯುವ ಮುಖಂಡರುಗಳು ಉಪಸ್ಥಿತರಿದ್ದರು….

Exit mobile version