Site icon TUNGATARANGA

ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ : 02 ಗ್ರಾಮಗಳ ಆಯ್ಕೆ

ಶಿವಮೊಗ್ಗ.ಸೆ.21 2024-25ನೇ ಸಾಲಿನ ಆರ್ಥಿಕ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವಂತೆ ದೇಶದಾದ್ಯಂತ ಬಹುಸಂಖ್ಯಾತ ಬುಡಕಟ್ಟು ಸಮುದಾಯದ 63,000 ಗ್ರಾಮಗಳನ್ನು ಹಾಗೂ 5.00 ಕೋಟಿ ಜನರ ಆರ್ಥಿಕ, ಸಾಮಾಜಿಕ ಹಾಗೂ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿರುವ ಪಿಎಂ ಜನಮನ್ ಯೋಜನೆಯಿಂದ ಸ್ಫೂರ್ತಿ ಪಡೆದ ಯೋಜನೆ ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ.


 2024-25ನೇ ಸಾಲಿನಿಂದ 2028-29ನೇ ಸಾಲಿನ 5 ವರ್ಷಗಳ ಈ ಅಭಿಯಾನಕ್ಕೆ ಕೇಂದ್ರ ಬುಡಕಟ್ಟು ಮಂತ್ರಾಲಯ (ಒಔಖಿಂ) ನೋಡಲ್ ಸಚಿವಾಲಯವಾಗಿದ್ದು, 17 ಇಲಾಖೆಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ.


 ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ ಕೇಂದ್ರ ರಾಜ್ಯ ಸರ್ಕಾರಗಳು ಮೀಸಲಿರಿಸಿದ ರೂ.79.156 ಕೋಟಿ ಅನುದಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.


 2024-25 ರಿಂದ 2025-26 ರ ಆರ್ಥಿಕ ಸಾಲುಗಳಿಗೆ ಮೊದಲ ಹಂತದಲ್ಲಿ ರೂ.4000 ಕೋಟಿ ಅನುದಾನವನ್ನು ನಿಗದಿಗೊಳಿಸಿದೆ. ಪರಿಶಿಷ್ಟ ಪಂಗಡದ ಜನಾಂಗದವರು ಹೆಚ್ಚಾಗಿರುವ ಶಿವಮೊಗ್ಗ ಜಿಲ್ಲೆಯ, ಶಿವಮೊಗ್ಗ ತಾಲ್ಲೂಕಿನ, ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿರೂಪಿನಕೊಪ್ಪ ಹಾಗೂ ಬಿ.ಬೀರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸದಾಶಿವಪುರ ಎಂಬ 02 ಗ್ರಾಮಗಳನ್ನು ಆಯ್ಕೆ ಮಾಡಿ ಭೌತಿಕ ಗುರಿ ನಿಗದಿಗೊಳಿಸಲಾಗಿದೆ. ಈ 02 ಗ್ರಾಮಗಳಲ್ಲಿ ಈ ಕೆಳಕಂಡ ಮೂಲಭೂತ ಸೌಕರ್ಯಗಳನ್ನು 17 ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುತ್ತಿದೆ.


ಯೊಜನೆಗಳ ವಿವರ :
 ಗ್ರಾಮೀಣಾಭಿವೃದ್ಧಿ ಇಲಾಖೆ- ಪಕ್ಕ ಮನೆಗಳು, ಸಂಪರ್ಕ ರಸ್ತೆ. ಗ್ರಾಮೀಣ ನೀರು ಸರಬರಾಜು ಇಲಾಖೆ- ನೀರು ಸರಬರಾಜು- ಜಲ ಜೀವನ್ ಮಿಷನ್. ವಿದ್ಯುತ್ ಇಲಾಖೆ- ಮನೆ ವಿದ್ಯುಧೀಕರಣ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ-ಆಪ್ -ಗ್ರಿಡ್ ಸೌರ, ಹೊಸ ಸೌರ ವಿದ್ಯುತ್ ಯೋಜನೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಸಂಚಾರಿ ವೈದ್ಯಕೀಯ ಘಟಕಗಳು ರಾಷ್ಟ್ರೀಯ ಆರೋಗ್ಯ ಮಿಷನ್, ಆಯುಷ್ ಮಾನ್ ಕಾರ್ಡ್ -ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ-ಎಲ್ ಪಿಜಿ

ಉಜ್ವಲ್ ಯೋಜನೆ ಸಂಪರ್ಕಗಳು.


 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ-ಪೋಷಣ್ ಅಭಿಯಾನÀ, ಶಿಕ್ಷಣ ಇಲಾಖೆ-ವಿದ್ಯಾರ್ಥಿ ನಿಲಯಗಳ ನಿರ್ಮಾಣ- ಸಮಗ್ರ ಶಿಕ್ಷಾ ಅಭಿಯಾನ. ಆಯುಷ್ ಇಲಾಖೆ-ಪೋಷನ್ ವಾಟಿಕಾಸ್-ರಾಷ್ಟ್ರೀಯ ಆಯುಷ್ ಮಿಷನ್. ಕೌಶಲ್ಯಾಭಿವೃದ್ದಿ ಇಲಾಖೆ-ಸ್ಕಿಲ್ ಇಂಡಿಯಾ. ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಇಲಾಖೆ-ಡಿಜಿಟಲ್ ಇನಿಶಿಯೇಟಿವ್ಸ್ , ಕೃಷಿ ಇಲಾಖೆ -ಸುಸ್ಥಿರ ಕೃಷಿ ಉತ್ತೇಜನ. ಮೀನುಗಾರಿಕೆ ಇಲಾಖೆ-ಮೀನು ಸಂಸ್ಕೃತಿಯ ಬೆಂಬಲ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ-ಜಾನುವಾರು ಪಾಲನೆ -ರಾಷ್ಟ್ರೀಯ ಜಾನುವಾರು ಮಿಷನ್. ಪಂಚಾಯತ್ ರಾಜ್ ಇಲಾಖೆ-ಟ್ರೆöÊಬಲ್ ಹೊಂ ಸ್ಟೇ ಸ್ವದೇಶ್ ದರ್ಶನ. ಬುಡಕಟ್ಟು

ವ್ಯವಹಾರಗಳ ಸಚಿವಾಲಯ – ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ.
 100 ಬುಡಕಟ್ಟು ಬಹು ಉಪಯೋಗಿ ಮಾರ್ಕೆಟಿಂಗ್ ಕೇಂದ್ರಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಸರ್ಕಾರಿ/ರಾಜ್ಯ ಬುಡಕಟ್ಟು ವಸತಿ ಶಾಲೆಗಳ ಮೂಲ ಸೌಕರ್ಯಗಳನ್ನು ಸುಧಾರಿಸುವುದು. ಕೌನ್ಸಲಿಂಗ್ ಬೆಂಬಲ, ಅರಣ್ಯ ಹಕ್ಕು ಕಾಯ್ದೆ-2006 ಮತ್ತು ಸಮುದಾಯ

ಅರಣ್ಯ ಹಕ್ಕು ನಿರ್ವಹಣೆ ಮಧ್ಯಸ್ಥಿಕೆಗಳಿಗೆ ಬೆಂಬಲ, ಯೋಜನಾ ನಿರ್ವಹಣಾ ನಿಧಿಗಳು ಉನ್ನತ ಪ್ರದರ್ಶನ ನೀಡುವ ಬುಡಕಟ್ಟು ಜಿಲ್ಲೆಗಳಿಗೆ ಪ್ರೋತ್ಸಾಹ ನೀಡುವಂತಹ ಯೋಜನೆಗಳನ್ನು ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ ಯೋಜನೆಯಡಿ ಅವಕಾಶ ಕಲ್ಪಿಸಲಾಗುತ್ತಿದೆ. ಈ 02 ಗ್ರಾಮದ ಎಲ್ಲಾ ಬುಡಕಟ್ಟು ಜನಾಂಗದವರು ಸದರಿ ಯೋಜನೆಯ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

Exit mobile version