Site icon TUNGATARANGA

ಬದುಕಿಗಾಗಿ ಮನಸಿಗೆ ತೇಪೆ ಬೇಕೇ?, ಗಜೇಂದ್ರ ಸ್ವಾಮಿ ಅವರ ಈ ವಾರದ ನೆಗಿಟೀವ್ ಥಿಂಕಿಂಗ್ ಅಂಕಣ

ವಾರದ ಅಂಕಣ- 14

ಗಜೇಂದ್ರ ಸ್ವಾಮಿ ಎಸ್. ಕೆ., ಶಿವಮೊಗ್ಗ

ಎಂತಹ ವಿಚಿತ್ರ ನೋಡ್ರಿ. ಜಗತ್ತಲ್ಲಿ ಯಾವುದಕ್ಕೂ ಒಂದಿಷ್ಟು ನೀತಿ ನಿಯತ್ತುಗಳು ಇರಬೇಕು. ಆದರೆ ಅದೇ ಬಗೆಯಲ್ಲಿ ಸಮಾಜವು ನಮ್ಮೊಂದಿಗೆ ಬೆರೆಯಬೇಕು. ಎಲ್ಲರೂ ಅದೇ ಬಗೆಯಲ್ಲಿ ಪರಸ್ಪರ ನಂಬಿಕೆ ಇಟ್ಟುಕೊಳ್ಳಬೇಕು. ಇದು ಸಾಧ್ಯವೇ? ಎಂಬ ಅನುಮಾನ ಮೂಡಿದಾಗ ನಾವು ನಮ್ಮ ಬದುಕಿಗಾಗಿ ನಮ್ಮ ನಮ್ಮ ಮನಸ್ಸುಗಳಿಗೆ ನೆಪಮಾತ್ರದ ತೇಪೆ ಹಚ್ಚಿಕೊಳ್ಳುವ ಕಾಯಕದಲ್ಲಿ ಮುಳುಗಿದ್ದೇವಾ ಎಂಬ ಪ್ರಶ್ನೆ ಮೂಡಿದಾಗ ನಿಜಕ್ಕೂ ಬದುಕಿಗಾಗಿ ಕೆಲ ತೇಪೆ ಹಚ್ಚಿಕೊಳ್ಳುವ ಮನೋ ಸ್ಥಿತಿ ನಮ್ಮದಾಗಿರುವುದು ದುರಂತವೇ ಹೌದು.
ಆದರೆ ಅದು ಯಾವತ್ತಿದ್ದರೂ ತೇಪೆಯೇ ಹೊರತು ಗಟ್ಟಿಯಾದಲ್ಲ. ಬಾಂದವ್ಯ ಉಳಿಸುವಂತಹುದಲ್ಲ. ಯಾವತ್ತಾದರೂ ಒಂದು ದಿನ ಮತ್ತೆ ಮನಸು ತಿರುಗಿ ಬೀಳುತ್ತದೆ. ಈ ಮನಸುಗಳ ತೇಪೆ ಹಚ್ಚುವ ವಿಷಯವೇ ಇಂದಿನ ನೆಗೆಟಿವ್ ಥಿಂಕಿಂಗ್.


ಒಂದಂತೂ ಸತ್ಯ, ಎಲ್ಲವೂ ನನ್ನಂತೆ ಅಲ್ಲ, ಯಾವುದು ಸಂಪೂರ್ಣ ಸ್ವಸ್ಥ ಅಲ್ಲ, ಅಸ್ವಸ್ಥವೂ ಅಲ್ಲ. ಆದರೆ ವಾಸ್ತವದ ಸ್ಥಿತಿಯಲ್ಲಿ ಮಾಡಿಕೊಳ್ಳುವ ಕೆಲ ಅನಿವಾರ್ಯದ ಹೊಂದಾಣಿಕೆಗಳು ತೇಪೆಯಂತೆ ಕಾಣುವುದು ಸತ್ಯವಲ್ಲವೇ?
ಇಲ್ಲಿ ಸಹಜ ಹೊಂದಾಣಿಕೆ, ಸಹಜವಾದ ಪರಸ್ಪರ ಅರ್ಥ ಮಾಡಿಕೊಳ್ಳುವ ಮನೋಭಾವ ಅತ್ಯಂತ ಅಗತ್ಯ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಸಮಾಜ ಇಲ್ಲಿ ಅಪ್ರಾಮಾಣಿಕವಾಗಿ ಅಲ್ಲದಿರುವಂತೆ ಕೆಲ ಹೊಂದಾಣಿಕೆಗಳನ್ನು ಕೇವಲ ತಾತ್ಕಾಲಿಕ ನೆಪಗಳನ್ನಾಗಿ ಮಾಡಿಕೊಳ್ಳುವುದು., ಬೇಕಿಲ್ಲದಾಗ ಅವುಗಳಿಂದ ದೂರವಾಗುವುದು ನಮ್ಮ ನಡುವೆ ಈಗಲೂ ನಡೆಯುತ್ತಿರುವ ಗಂಭೀರ ಸಂಗತಿಗಳಲ್ಲವೇ?


ಬದುಕು ಸಾಗಲು ವಾಸ್ತವದ ನೈಜತೆ ನಮ್ಮ ನಡುವೆ ಇರಲಿ. ನಾವು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ. ಮನುಷ್ಯ ಸಮಾಜ ಜೀವಿ ಸಂಘ ಜೀವಿ. ಒಂದನ್ನು ತಾನು ತ್ಯಾಗ ಮಾಡಿ ಮತ್ತೆ ಒಂದಿಷ್ಟನ್ನು ಪಡೆಯುವ ಮನೋಧರ್ಮ ಅವನಲ್ಲಿದೆ. ಆದರೆ ಕೆಲವೇ ಕೆಲವು ವಿಕೃತ ಮನಸ್ಸಿನ ಕೊಡುಕೊಳ್ಳುವಿಕೆಯ ವ್ಯವಹಾರದಲ್ಲಿ ತೇಪೆ ಹಚ್ಚಲು ಮುಂದಾಗುತ್ತಾರೆ. ಇದು ಯಾವಾಗಲೂ ತಾತ್ಕಾಲಿಕವಾದ ಪರಿಹಾರವಷ್ಟೇ.


ಬದುಕು ಸಹಜ ಹೊಂದಾಣಿಕೆಗಳ ನಡುವೆ ಇದೆ. ಒಂದು ಕಡೆ ನಮ್ಮ ನಡುವಿನ ಬಾಂಧವ್ಯ ಬೆಸೆಯಲು ಇದು ಕಾರಣವಾದರೆ ಇಂತಹ ರಾಜಿ ಪಂಚಾಯಿತಿ ಹೊಂದಾಣಿಕೆಗಳು ನೆಪ ಮಾತ್ರದ ಹಿರಿಯರ ವಚನದ ಪಾಲಿಕೆಯ ಹೆಸರಲ್ಲಿ ನಡೆಯುವ ದಂಧೆ ಆಗಿರುವುದು ಇಂದಿನ ದುರಂತಗಳಲ್ಲಿ ಒಂದು.
ನಾನು ಅತ್ಯಂತ ಗಂಭೀರವಾಗಿ ಒಂದು ವಿಷಯವನ್ನು ಹೇಳುತ್ತೇನೆ. ಮೂಕ ಬಸವಣ್ಣನಂತೆ ಏನೂ ನಡೆದಿಲ್ಲ ಎಂಬಂತೆ ನಮ್ಮ ನಡುವೆ ಇರುವ, ಎಲ್ಲೋ ಒಂದು ಕಡೆ ಮೂಲೆಯ ಜಾಗದಲ್ಲಿ ಪ್ರಾಮಾಣಿಕರನ್ನು ತಳ್ಳುವ ಕೆಲವೇ ಕೆಲವು ವಿಕೃತ ಮನಸ್ಸುಗಳು ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವುದನ್ನು ನಿಜಕ್ಕೂ ನೈಜ ಪಾಸಿಟಿವ್ ಮನಸುಗಳಿಗೆ ಅರ್ಥವಾಗದಿರುವುದು ದುರಂತವೇ ಹೌದು.


ನೆಗೆಟಿವ್ ಎಂಬ ವಿಷಯವೇ ಬದುಕ ದಾರಿದಕ್ಕೂ ನಡೆಯುವ ಸಂಗತಿಗಳ ಎಳೆಗಳಲ್ಲಿ ದೊರೆಯುವ ಒಂದಿಷ್ಟು ಅಘಾತಕಾರಿ ಮನಸ್ಸಿಗೆ ನೋವು ಮಾಡುವ ಅಂಶಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಈ ನೆಗೆಟಿವ್ ಅಂಶ ಬಹಳಷ್ಟು ಭಾಗದಲ್ಲಿ ತನ್ನ ತನ್ನ ವ್ಯಕ್ತಿತ್ವವನ್ನು ತನ್ನ ತನ್ನ ಮನೋಧರ್ಭವನ್ನು ತನ್ನ ತನ್ನ ಬಗ್ಗೆ ಸಮಾಜ ತೋರಿಸುವ ಗೌರವವನ್ನು ತೋರಿಸುತ್ತದೆ.


ನಾನು ದೊಡ್ಡ ಹೀರೋ, ನಾನೆ ಎಲ್ಲರಿಗೂ ಪ್ರೀತಿ ಪಾತ್ರ ಎಂದು ಹೇಳಿಕೊಳ್ಳುತ್ತಾ ಒಬ್ಬರ ನಂತರ ಮತ್ತೊಬ್ಬರಿಗೆ ಮೋಸ ಮಾಡುತ್ತಾ ಬಕೆಟ್ ಹಿಡಿಯುವ ತಂತ್ರಗಳ ಕೆಲವರು ತಮ್ಮನ್ನು ಮಾತ್ರ ತಾವು ಒಪ್ಪಿಕೊಳ್ಳುತ್ತಾರೆ. ಆದರೆ ಈ ಸಮಾಜ ಅವರನ್ನು ಕಂಡು ಮಾತನಾಡಿಸುತ್ತದೆ ಆದರೆ ಮನದೊಳಗೆ ಅವರ ಅಸಹ್ಯಗಳ ಬಗ್ಗೆ ಕ್ಯಾಕರಿಸಿ ಉಗಿದು ಹಾಳಾಗಿ ಹೋಗ ಎಂದು ಶಪಿಸುವುದು ಸತ್ಯವಲ್ಲವೇ? ಅವರಿಗೆ ನಾಚಿಕೆಯಾಗಬೇಕು ಎಂದು ಹೇಳುವ ಧರ್ದು ಈ ಮನಸ್ಸುಗಳಲ್ಲಿ ಇದ್ದರೂ ಸಹ ಅದನ್ನು ಹೇಳಿ ನಾನೇಕೆ ಕೆಟ್ಟವನಾಗಬೇಕು. ಹಾಳಾಗಿ ಹೋಗಲಿ ಬಿಡು ಎಂದುಕೊಳ್ಳುವ ಮನಸ್ಸುಗಳು ನಮ್ಮ ನಡುವೆ ಹೆಚ್ಚಾಗಿ ಕಂಡುಬರುತ್ತಿವೆ ಅಲ್ಲವೇ?
ಹೊಂದಾಣಿಕೆ, ರಾಜಿಪಂಚಾಯ್ತಿ ಯಂತಹ ಪದಗಳು ಸಂಬಂಧಗಳಲ್ಲಿ ಸೂಕ್ತವಾದರೂ ಸಹ ವ್ಯವಹಾರಗಳಲ್ಲಿ ನೆಪ ಮಾತ್ರದ ನಾಟಕದ ತೇಪೆ ಹಚ್ಚುವ ಕಾಯಕ ಅಷ್ಟೇ.
ಮುಂದುವರೆಯುವುದು

Exit mobile version