Site icon TUNGATARANGA

ಚುನಾವಣಾ ರಾಜಕಾರಣದಲ್ಲೂ “ತೇಪೆ” ಪ್ರಭಾವ ಗೊತ್ತಾ? ಇಂದಿನ ನೆಗಿಟೀವ್ ಥಿಂಕಿಂಗ್ ಅಂಕಣದೊಳಗಿನ ಸ್ಪರ್ಧಾಳುಗಳಾಗಿ ವಸೂಲಿ ಹೆಂಗಿರುತ್ತೆ ಓದಿ

ದೊಡ್ಡ ದೊಡ್ಡ ರಾಜಕಾರಣದ ಭವ್ಯ ಭಾವಗಳನ್ನ ಹೇಳುವ ಪ್ರಯತ್ನ ಇಲ್ಲಿ ಇಲ್ಲ. ಚಿಕ್ಕಮಟ್ಟದಿಂದ ಹೋಗೋಣ.
ಒಂದು ಸ್ಥಳೀಯ ಚುನಾವಣೆ ಎಂದರೆ ಅಲ್ಲಿ ನಾನು ನಿಲ್ಲಬೇಕು, ನಾನು ಈ ಚುನಾವಣೆಯಲ್ಲಿ ಗೆಲ್ಲಲೇಬೇಕು. ಏನಾದರೂ ಆಗಲಿ ಜನರ ಪ್ರೀತಿ ಗಳಿಸಬೇಕು ಎಂದು ಕೆಲ ಪಾಸಿಟಿವ್ ಮನಸುಗಳು ಜನರ ಜೊತೆ ಬೆರೆತು ಗೆಲ್ಲುವ ದಾರಿ ಹುಡುಕುವುದು ವಾಡಿಕೆ.


ಮತ್ತೆ ಕೆಲವರದು ನೆಪ ಮಾತ್ರದ ಚುನಾವಣೆ ಅಷ್ಟೇ. ಆದರೆ ವಿಕೃತ ಮನಸ್ಸಿನ ಕೆಲವರು ಚುನಾವಣೆಗೆ ಸ್ಪರ್ಧಿಸುವ ಕಾರಣವೇ ಬೇರೆ. ಅನ್ಯ ವಿರೋಧಿ ಬಣಗಳ ನಾಯಕರ ಜೊತೆ ಬೆರೆತು ಅವರೊಂದಿಗೆ ತೇಪೆ ಹಚ್ಚಿಕೊಂಡು ಇಡೀ ತಮ್ಮ ತಮ್ಮ ಬಣದ ಗೌರವವನ್ನು ಮಾರಿ ಸ್ವಯಂ ಸಂಪಾದನೆ ಮಾಡುವ ಕಾಯಕವನ್ನು ಮಾಡಿಕೊಳ್ಳುತ್ತಾರೆ.


ಇಂತಹ ಆಟದಲ್ಲಿ ಜಾತಿ ರಾಜಕಾರಣವು ನಡೆಯುತ್ತದೆ. ಎಲ್ಲೆಡೆ ತಮ್ಮನ್ನು ತಾವು ಹೀರೋಗಳಂತೆ ಬಿಂಬಿಸಿಕೊಂಡು ಹಾಗೆಯೇ ಚುನಾವಣೆಯಲ್ಲಿ ಗೆಲ್ಲುವ ನಾಟಕ ಆಡಿ ತಮ್ಮ ಪಕ್ಷದದಿಂದಲೂ ವಸೂಲಿ ಮಾಡಿಕೊಂಡು, ಅನ್ಯನ ಜೊತೆ ಬೆರೆತು ನನ್ನ ಪಾಲಿನಲ್ಲಿ ನನ್ನ ಜಾತಿಯ ಇಷ್ಟು ಓಟುಗಳನ್ನು ನಾನು ಕದ್ದರೆ ನೀವು ಅತ್ಯಂತ ಸುಲಭವಾಗಿ ಗೆಲ್ಲುತ್ತೀರಿ ಎನ್ನುವ ಮಾತಿನ ಮೂಲಕ ಅಲ್ಲಿಯೂ ಸಹ ಒಂದಿಷ್ಟು ಅಲ್ಲದಿದ್ದರೂ ಬರೋಬ್ಬರಿ ವಸೂಲಿ ಮಾಡಿ ಮುಂದಿನ ಐದು ವರ್ಷ ನಾನು ಸೋತವನು ಮುಂದೆ ನಾನೇ ಇರುತ್ತೇನೆ ಎಂದು ನಾಟಕ ಮಾಡುತ್ತಾ ರಾಜಕೀಯ ಪಕ್ಷಗಳಿಗೂ ಮೋಸ ಮಾಡುವ ಕೆಲ ವಿಕೃತ ಮನಸ್ಸುಗಳು ನಮ್ಮ ನಡುವೆ ಈಗಲೂ ಇರುವುದು ನೆಗೆಟಿವ್ ಥಿಂಕಿಂಗ್ ಅಲ್ಲವೇ? ಇದರ ಸಮಗ್ರ ಮಾಹಿತಿಗಳು ಇನ್ನೊಮ್ಮೆಗೆ ಇರಲಿ.

ಅಂಕಣ ಕುರಿತಂತೆ..

ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.
ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಅಂಕಣದ ಹನ್ನೆರಡನೇ ಅಂಕಣದ ಮತ್ತೊಂದು ವಿಶೇಷ. ಇಂದಿನ ಡಿಫರೆಂಟ್ ವಿಷಯ ಓದಿ,  ಬದುಕಿಗಾಗಿ ಮನಸಿಗೆ ತೇಪೆ ಬೇಕೆ? ಓದಿ.


ನೆಗೆಟಿವ್ ಥಿಂಕಿಂಗ್ ಕಾಲಂಗೆ ಮೊದಲಿನಿಂದಲೂ ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು,

ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.
ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ, ಹಣ ಮಾಯೆನಾ? ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ”, “ಒಳ್ಳೆಯವರಾದ್ರೆ ನಾಕಾಣೆ ಸಾಲ ಸಿಗೊಲ್ಲ” ಹಾಗೂ “ನಂಬಿಕೆ ದ್ರೋಹದ ಮನಸುಗಳೇ ಹೊಲಸು” ಕೆಟ್ಟ ಕಣ್ಣುಗಳಿಂದ ದೂರ ಇರ್ರಿ”” ಹಣದ ಲಾಲಸೆಗೆ ರಾಜಕಾರಣ”  ಸಂಪನ್ನರನ್ನ ಕೆಣಕಬ್ಯಾಡ್ರಿ..!” , “ಅತಿಯಾದ ತಾಳ್ಮೆ ಆತಂಕ ತಂದೀತು ಜೋಕೆ” ಓದಿದ್ದೀರಿ.


ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳ ಕುರಿತಂತೆ ಓದಿದ್ದೀರಿ. ಇಂದು ಇಂದಿನ ವಿಶೇಷ ನೋಡಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ
   – ಸಂ

Exit mobile version