Site icon TUNGATARANGA

ಶಿವಮೊಗ್ಗ | ಸೆ.22 ಜೀ಼ ಕನ್ನಡದ ಸರಿಗಮಪ ಆಡಿಷನ್ | 13 ಅಡಿ ಉದ್ದದ ಹೆಬ್ಬಾವು, ಸ್ಥಳೀಯರಿಂದ ರಕ್ಷಣೆ

#SHUBADOYASHIVAMOGGA

ಶಿವಮೊಗ್ಗ : ಜೀ಼ ಕನ್ನಡ ವಾಹಿನಿ ಇದೀಗ ಸರಿಗಮಪ ಶೋ ಮೂಲಕ ನಿಮ್ಮೂರಿನಲ್ಲಿರುವ ಗಾಯಕ- ಗಾಯಕಿಯಾಗುವ ಕನಸು ಹೊತ್ತಿರುವ,ಪ್ರತಿಭೆಗಳಿಗೆ ವೇದಿಕೆಯಾಗಲು ಬಂದಿದೆ. ಕಳೆದ ಬಾರಿ ವಿದೇಶಿ ಕನ್ನಡಿಗ ಪ್ರತಿಭೆಗಳೊಂದಿಗೆ ಕನ್ನಡದ ಕಂಪನ್ನ ಜಗತ್ತಿಗೆ ಬಿತ್ತರಿಸಿ ಸರಿಗಮಪ ಈ ಬಾರಿ 6 ರಿಂದ 60 ವಯಸ್ಸಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಸಜ್ಜಾಗಿದೆ.

ಈ ಮೂಲಕ ಕನ್ನಡದ ಸಂಗೀತ ಮತ್ತು ಚಿತ್ರರಂಗಕ್ಕೆ ಭರವಸೆಯ ಗಾಯಕ-ಗಾಯಕಿಯರನ್ನ ನೀಡುವ ಕೆಲಸವನ್ನ ಈ ರಿಯಾಲಿಟಿ ಶೋ ಮಾಡಲಿದೆ.ಸರಿಗಮಪ ಶೋ ಮೂಲಕ ಹಲವಾರು ಪ್ರತಿಭೆಗಳು ಹೊರಹೊಮ್ಮಿ ಇಂದು ಸಂಗೀತ ಲೋಕದ ಸಾಧಕರ ಸಾಲಿಗೆ ಸೇರಿದ್ದಾರೆ, ನಿಮ್ಮ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ನಿಮ್ಮೂರಿಗೆ ಬಂದು, ನಿಮ್ಮ ಪ್ರತಿಭಯೆನ್ನ ಗುರುತಿಸಿ ನಿಮ್ಮನ್ನ ಈ ವೇದಿಕೆ ಕರೆತರುವ ಕೆಲಸವನ್ನ ಈ ಮೂಲಕ ಮಾಡಲಿದೆ.


ಸರಿಗಮಪ ಶೋಗಾಗಿ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆಸಲ್ಲಿದ್ದು ,ಇದರ ಆರಂಭಿಕ ಹಂತವೆಂಬಂತೆ 22-09-2024 ಭಾನುವಾರ ಬೆಳಗ್ಗೆ 9 ಗಂಟೆಗೆ,DVS ಕಾಲೇಜ್.ವಿನೋಭನಗರ ಮುಖ್ಯರಸ್ತೆ,ವಿನೋಭನಗರ, ಶಿವಮೊಗ್ಗ.ಇಲ್ಲಿ ಆಡಿಷನ್ಸ್ ನಡೆಯಲ್ಲಿದ್ದು.ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು 2 ಪಾಸ್ಪೋರ್ಟ್ ಸೈಜ್ ಪೋಟೋ ಜೊತೆ ಅಡ್ರಸ್ ಪ್ರೂಫ್ ಜೆರಾಕ್ಸ್ ತೆಗೆದುಕೊಂಡು ಬಂದು ಭಾಗವಹಿಸಬಹುದಾಗಿದೆ. ಜೀ಼ ಕನ್ನಡ ನಡೆಸುವ ಈ ಆಡಿಷನ್ ಪ್ರಕ್ರಿಯೆಯಲ್ಲಿ ಯಾವುದೇ ಹಣವನ್ನ ಪಡೆಯಲಾಗುವುದಿಲ್ಲವೆಂದು ವಾಹಿನಿ ತಿಳಿಸಿದೆ.

13 ಅಡಿ ಉದ್ದದ ಹೆಬ್ಬಾವು, ಸ್ಥಳೀಯರಿಂದ ರಕ್ಷಣೆ

ತೀರ್ಥಹಳ್ಳಿ : ಮರವೊಂದನ್ನು ಹತ್ತಿ ಕುಳಿತುಕೊಂಡಿದ್ದ ಹೆಬ್ಬಾವೊಂದನ್ನು ಸ್ಥಳೀಯರೇ ಹಿಡಿದು ಅರಣ್ಯಕ್ಕೆ ಬಿಟ್ಟ ಘಟನೆ ಗುರುವಾರ ಸಂಜೆ ಮೇಳಿಗೆಯಲ್ಲಿ ನಡೆದಿದೆ.

ತಾಲೂಕಿನ ಮೇಳಿಗೆಯ ಕೆರೆದಂಡೆ ಬಳಿ ಇರುವ ಅಡಿಗೆ ಕಂಟ್ರಾಕ್ಟರ್ ಮಹೇಶ್ ಎಂಬುವರ ಮನೆ ಪಕ್ಕದ ಮರದಲ್ಲಿ ೧೨ ರಿಂದ ೧೩ ಅಡಿ ಉದ್ದದ ಅಂದಾಜು ೩೦ ಕೆಜಿ ತೂಕದ ಹೆಬ್ಬಾವೊಂದು ಮರವನ್ನು ಏರಿ ಕುಳಿತಿತ್ತು.

ಅದನ್ನು ನೋಡಿ ವಿಷಯ ತಿಳಿದು ಕಂತುಗದ್ದೆ ಪ್ರವೀಣ್ ಎಂಬುವರು ಅದನ್ನು ಹಿಡಿದು ಹತ್ತಿರದ ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.

ಹೆಬ್ಬಾವು ಎಲ್ಲಿಂದ ಬಂತು ಹೇಗೆ ಬಂತು ಎಂಬುದು ತಿಳಿದಿಲ್ಲ. ವಿಷಯ ತಿಳಿದು ಊರಿನ ಗ್ರಾಮಸ್ಥರು ಕೆಲ ಕಾಲ ಗಾಬರಿಗೊಂಡಿದ್ದರು.

Exit mobile version