Site icon TUNGATARANGA

ಪೌರ ಕಾರ್ಮಿಕರ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ ಕ್ರೀಡೆಯಿಂದ ದೈಹಿಕ ಮಾನಸಿಕ ಸದೃಢತೆ ಸಿಗುತ್ತದೆ ಶಾಸಕ ಎಸ್.ಎನ್.ಚನ್ನಬಸಪ್ಪ

:ಶಿವಮೊಗ್ಗ, ಸೆ.೧೯:
ಕ್ರೀಡೆಯಿಂದ ದೈಹಿಕ ಮಾನಸಿಕ ಸದೃಢತೆ ಸಿಗುತ್ತದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಮಹಾನಗರ ಪಾಲಿಕೆ ಮತ್ತು ಮಹಾನ ಗರ ಪಾಲಿಕೆ ನೌಕರರ ಸಂಘದ ವತಿಯಿಂದ ಸೆ.೨೩ ರಂದು ಆಯೋಜಿಸಿರುವ ಪೌರ ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ನಗರದ ಪೊಲೀಸ್ ಮೈದಾನದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಕ್ರೀಡೆಯಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂಬುದಕ್ಕಿಂತ ಸೋಲುವುದರಲ್ಲಿ ಗೆಲುವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕ್ರೀಡೆ ಎಲ್ಲರಿಗೂ ಸಹಕಾರಿ ಎಂದರು.
ಕ್ರೀಡಾ ಮನೋಭಾವ ಜಾಸ್ತಿಯಾದರೆ ಎಲ್ಲರಿಗೂ ಸಹಕಾರಿ. ಭಾವನೆಗಳಿಗೆ ಶಕ್ತಿ ಸಿಗುವಂತಹ ಸಂದರ್ಭ. ಈ ನಿಟ್ಟಿನಲ್ಲಿ ಒಟ್ಟಾಗಿ ನಿಂತು ಒಳ್ಳೆಯ ಆಲೋಚನೆ ಮಾಡಿ ಒಂದು ರೂಪ ಕೊಟ್ಟಿದ್ದಾರೆ. ಮಹಾನಗರ ಪಾಲಿಕೆ ಆಡಳಿತ ವೃಂದ ಪೂರ್ತಿಯಾಗಿ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಶುಭವಾ ಗಲಿ ಎಂದು ಆಶಿಸಿದರು

.
ಕಲ್ಯಾಣ ಭವನ ನಿರ್ಮಾಣ ತುಂಬಾ ದೀರ್ಘ ಕಾಲ ತೆಗೆದುಕೊಂಡಿದೆ. ಅದರ ಬಗ್ಗೆ ನಮಗೆ ವಿಷಾದವೂ ಇದೆ. ನೋವು ಇದೆ. ಪೌರಕಾರ್ಮಿಕರಿಗೆ ವಿಶೇಷವಾಗಿ ಮನೆಗಳು ಆಗುತ್ತಿವೆ. ಇಲ್ಲಿ ಕಂಟ್ರಾ?ಯಕ್ಟರ್ ಸಮಸ್ಯೆ ಆಗಿದ್ದಾನೆ. ಅವರಿಂದಲೇ ಮಾಡಿಸ ಬೇಕಾ ಅಥವಾ ಬೇರೆಯವರಿಂದ ಮಾಡಿಸ ಬೇಕಾ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಆದಷ್ಟು ಬೇಗ ಈ ಎರಡು ಸಂಗತಿಗಳ ಬಗ್ಗೆ ಗಂಭೀರವಾಗಿ ಗಮನಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದಣ್ಣ ಮಾತನಾಡಿ, ಪ್ರತಿ ವರ್ಷವೂ ಅತ್ಯಂತ ವಿಜೃಂಭಣೆ ಮತ್ತು ಅರ್ಥ ಪೂರ್ಣವಾಗಿ ಪೌರ ಕಾರ್ಮಿಕರ ದಿನಾಚರಣೆಯನ್ನು ಮಾಡಲಾಗುತ್ತದೆ. ಈ ವರ್ಷವೂ ಅದೇ ರೀತಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ನಗರದ ಶಾಸಕರು ಸಹಕರಿಸಿ ಪೌರಕಾರ್ಮಿಕರ ಪರವಾಗಿ ಇರುವಂತಹತ್ತು ದೊಡ್ಡ ಸಂಗತಿ. ಸಮುದಾಯ ಭವನ ಮತ್ತೆ ಪುನಃಶ್ಚೇತನ ಗೊಳಿಸಲು ಈ ಸಂದರ್ಭದಲ್ಲಿ ಕೇಳಿಕೊಂಡರು.


ಕ್ರೀಡಾಕೂಟದಲ್ಲಿ ೧೦೦ ಮೀಟರ್ ಓಟ, ಗುಂಡು ಎಸೆತ, ಜಾವಲಿನ್, ಮ್ಯೂಸಿಕಲ್ ಚೇರ್ ಸೇರಿದಂತೆ ಇನ್ನಿತರ ಆಟಗಳನ್ನು ಆಯೋಜಿಸಲಾಗಿತ್ತು.


ಈ ಸಂದರ್ಭದಲ್ಲಿ ಉಪ ಅಯ್ಯುಕ್ತರು ಲಿಂಗೇಗೌಡ, ಕಂದಾಯ ಅಧಿಕಾರಿ ವಿರೂಪಾಕ್ಷಪ್ಪ ಪೂಜಾರ್, ಸಂಘದ ಪ್ರದಾನ ಕಾರ್ಯದರ್ಶಿ ಮೋಹನ್ ಕುಮಾರ್.ಡಿ, ಉಪಾಧ್ಯಕ್ಷ ಕುಮಾರ್, ನಿರ್ದೇಶಕರಾದ ವಸಂತ್ ಕುಮಾರ್, ನಾಗೇಶ್, ಎಸ್.ಡಿ.ಮಂಜಣ್ಣ, ಲೋಹಿತ್, ಕ್ರೀಡಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಪೌರ ಸೇವಾ ನೌಕರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Exit mobile version