Site icon TUNGATARANGA

ಗಣಿ ಬಳಿ ಸ್ಪೋಟಕ್ಕೆ ಬಿಜೆಪಿ ಪಕ್ಷದವರೇ ಕಾರಣ, ನ್ಯಾಯಾದೀಶರಿಂದ ತನಿಖೆ ನಡೆಸಿ: ಸಿದ್ದರಾಮಯ್ಯ


ಶಿವಮೊಗ್ಗ, ಜ.28:
ಕಳೆದ ಜ.21 ರಂದು ನಡೆದ ಹುಣಸೋಡು ಸ್ಪೋಟದ ಕುರಿತು ಜಿಲ್ಲಾ ನ್ಯಾಯಾದೀಶರಿಂದ ತನಿಖೆ ನಡೆಯಬೇಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಹುಣಸೋಡು ಸ್ಪೋಟದ ಜಾಗಕ್ಕೆ ಭೇಟಿ ನೀಡಿ ನಂತರ ಐಬಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ಪೋಟದ ಜಾಗ ಕುಲಕರ್ಣಿ ಎಂಬುವವರಿಗೆ ಸೇರಿದ್ದು, ಕುಲಕರ್ಣಿಯಿಂದ ಸುಧಾಕರ್ ಲೀಸ್ ಗೆ ಪಡೆದಿದ್ದಾರೆ.

ಗಣಿಗಾರಿಕೆ ಸ್ಥಳಕ್ಕೆ ಬೇಟಿ


ಲೀಸ್ ಗೆ ಪಡೆದು ಕ್ರಷರ್ ಆರಂಭಿಸಿದ್ದಾರೆ..
ಈ ಕ್ರಷರ್ ಗೆ ಸಿ ಫಾರಂ ನೀಡಿದ್ದಾರೆ. 12-04-2019 ರಿಂದ ನಡೆಯುತ್ತಿದೆ ಎಂದು ಗಣಿ ಅಧಿಕಾರಿಗಳು ತಿಳಿಸಿದ್ದಾರೆ. ಜ. 21 ರಂದು ಬ್ಲಾಸ್ಟ್ ಆಗಿದೆ. ಅದು ಯಾವ ರೀತಿ ಬ್ಲಾಸ್ಟ್ ಆಗಿದೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ.
ಪೊಲೀಸರ ಪ್ರಕಾರ ಆಂಧ್ರದಿಂದ ಬಂದಿವೆ ಎಂದು ತಿಳಿಸಿದ್ದಾರೆ. ಆಂಧ್ರದವನು ಇಲ್ಲಿಗೆ ಸಾಗಾಟ ಮಾಡುವ ವೇಳೆ ಆತನಿಗೆ ಅನುಮತಿ ಇರಬೇಕು. ಅನುಮತಿ‌ ಇಲ್ಲದೇ ಮಾರಾಟ ಮಾಡಲು ಬರುವುದಿಲ್ಲ.
ಸುಧಾಕರ್ ಪೊಲೀಸರಿಗಾಗಲಿ, ಕಂದಾಯ ಅಧಿಕಾರಿಗಳಿಗಾಗಲಿ, ಗಣಿ ಇಲಾಖೆ ಅಧಿಕಾರಿಗಳಿಗೆ ಸ್ಪೋಟದ ಬಗ್ಗೆ ತಿಳಿಸಿಲ್ಲ, ಅನುಮತಿನೂ ಪಡೆದಿಲ್ಲ.
ಪೊಲೀಸರ ಪ್ರಕಾರ ಅಲ್ಲಿಂದ ಬೇರೆ ಕಡೆ ಸಾಗಿಸುವ ವೇಳೆ ಬ್ಲಾಸ್ಟ್ ಆಗಿರಬಹುದು ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ..
ಮುಖ್ಯಮಂತ್ರಿ ಐದು ಲಕ್ಷ ಪರಿಹಾರ ಕೊಡುತ್ತೇವೆ ಎಂದಿದ್ದರು. ಇದುವರೆಗೂ ಪರಿಹಾರದ ಹಣ ನೀಡಿಲ್ಲ. ಪರಿಹಾರ ನೀಡುವ ವಿಷಯದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ಪರಿಹಾರ ಕೊಡಬೇಕು. ಮೃತ ಕುಟುಂಬಕ್ಕೆ ಇನ್ನು ಹೆಚ್ಚಿನ‌ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಘಟನಾ ಸ್ಥಳದ ಪಕ್ಕದಲ್ಲಿ ಒಂದು ಕ್ವಾರಿ ನಡೆಯುತ್ತಿದೆ.
ಗಣಿ ಬಳಿ ಸ್ಪೋಟಕ್ಕೆ ಬಿಜೆಪಿ ಪಕ್ಷದವರೇ ಕಾರಣ: ಸಿದ್ದರಾಮಯ್ಯ ಗಣಿ ಅಧಿಕಾರಿ ಹೇಳುವ ಪ್ರಕಾರ ಅದು ಅನಧಿಕೃತವಾಗಿ ನಡೆಯುತ್ತಿದೆ ಎನ್ನುತ್ತಾರೆ. ನಾನು ನೋಡಿದಾಗ ನನಗೆ ಅನಿಸಿದ್ದು, ಆ ಕ್ವಾರಿಗಳು ಸುಮಾರು 20 ವರ್ಷದಿಂದ ನಡೆಯುತ್ತಿದೆ ಅನಿಸುತ್ತೆದೆ ಎಂದರು.
ಅಧಿಕಾರಿ ಕೇಳಿದರೆ ಆರು ವರ್ಷದಿಂದ ನಡೆಯುತ್ತಿದೆ ಸರ್, ಅದು ಅನಧಿಕೃತವಾಗಿ ನಡೆಯುತ್ತಿದೆ ಎನ್ನುತ್ತಾರೆ.
ಇಂದಿನವರೆಗೂ ಅನಧಿಕೃತವಾಗಿ ನಡೆಯುತ್ತಿದೆ ಅಂದರೆ ರಾಜಕಾರಣಿಗಳ ಪ್ರಭಾವ ಇಲ್ಲದೇ ನಡೆಯಲು ಸಾಧ್ಯವಾ ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದರು.
ಅನಧಿಕೃತವಾಗಿ ನಡೆಯುತ್ತಿದೆ ಅಂದ್ರೆ ಆತ ಲಂಚ ಕೊಟ್ಟು ನಡೆಸುತ್ತಿರಬೇಕು. ಇಲ್ಲವೇ ರಾಜಕಾರಣಿಗಳ ಕ್ವಾರಿ ಇರಬೇಕು, ಇಲ್ಲಾಂದ್ರೆ ರಾಜಕಾರಣಿ ಸಂಬಂಧಿ‌ ಇರಬೇಕು. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಅನಧಿಕೃತ ಕ್ವಾರಿ ನಡೆಯುತ್ತಿದೆ.
ಈ ಅಕ್ರಮಗಳು ಸಿಎಂ ಹಾಗೂ ಉಸ್ತುವಾರಿ ಸಚಿವರಿಗೆ ತಿಳಿಯದೇ ನಡೆಯುತ್ತವಾ..?
ನನಗೆ ಬಂದ ಮಾಹಿತಿ‌ ಪ್ರಕಾರ ಅಕ್ರಮವಾಗಿ ಕ್ವಾರಿ ನಡೆಸುತ್ತಿರುವವರು ಆಡಳಿತ ಪಕ್ಷದವರು.
ಈಶ್ವರಪ್ಪ ಸಭೆಯೊಂದರಲ್ಲಿಯೇ ಅಧಿಕಾರಿಗಳಿಗೆ ಹೇಳ್ತಾರೆ ನಿಮ್ಮ ಗ್ರಾಮ ಅಭಿವೃದ್ಧಿ ಆಗಬೇಕು ಅಂದ್ರೆ ಕಣ್ಣು ಮುಚ್ಚಿಕೊಂಡಿ ಇರಿ ಅಂತಾರೆ. ಆಯನೂರು ಮಂಜುನಾಥ್ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಅಂತಾರೆ.
ಅಧಿಕಾರಿಗಳು ಹೇಳ್ತಾರೆ ಅಕ್ರಮ ಕ್ವಾರಿಗಳ ವಿರುದ್ದ ಕ್ರಮ ಕೈಗೊಂಡಿ ಅಂತಾರೆ. ಪ್ರಭಾವಿಗಳ ಕುಮಕ್ಕು ಇಲ್ಲ ಅಂದ್ರೆ ಈ ಅಕ್ರಮ ನಡೆಯಲು ಸಾಧ್ಯವೇ ಇಲ್ಲ.
ಈ ಘಟನೆಯಲ್ಲಿ ಮೃತಪಟ್ಟವರ ಹೊಣೆಯನ್ನು ಸಿಎಂ, ಸಚಿವ ಈಶ್ವರಪ್ಪ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ 73 ಕ್ವಾರಿಗಳಲ್ಲಿ 23 ಕ್ವಾರಿಗಳು ಮಾತ್ರ ಬ್ಲಾಸ್ಟ್ ಮಾಡಲು ಅನುಮತಿ ಪಡೆದಿದ್ದಾರೆ. ಉಳಿದ ಕ್ವಾರಿಗಳು ಬ್ಲಾಸ್ಟ್ ಮಾಡಲು‌ ಅನುಮತಿ ಪಡೆದಿಲ್ಲ. ಅಕ್ರಮ ಕ್ವಾರಿ ವಿಷಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು‌ ನಿದ್ದೆ ಮಾಡ್ತಿದ್ದಾರಾ ಎಂದು ಗುಡುಗಿದರು.
ಜಿಲ್ಲಾಡಳಿತ, ಅಧಿಕಾರಿಗಳು, ಹಾಗೂ ಗಣಿ ಮಾಲೀಕರ ಜೊತೆ ಹೊಂದಾಣಿಕೆ ಇದೆ ಎಂದು ಆರೋಪಿಸಿದ ಅವರು, ಸುಧಾಕರ್ ಸೇರಿ ಎಲ್ಲಾ ತಪ್ಪಿತಸ್ಥರ ಮೇಲೆ ಈಗಿರುವ ದೂರಿನ ಜೊತೆ 302 ಸೆಕ್ಷನ್ ಪ್ರಕಾರ ಮರ್ಡರ್ ಕೇಸ್ ಹಾಕಬೇಕು. ಈಗ ಇದನ್ನ ಬಿಟ್ಟು ಜಾಳು ಕೇಸ್ ಹಾಕಲಾಗಿದೆ ಎಂದು ಆರೋಪಿಸಿದರು.
ಅಕ್ರಮ ಕ್ವಾರಿ ಬಗ್ಗೆ ಈಗ ಸರ್ವೇ ಮಾಡಿಸುತ್ತೀವಿ ಎಂದು ಜಿಲ್ಲಾಧಿಕಾರಿ ಈ ಹೇಳುತ್ತಿದ್ದಾರೆ. ಘಟನೆ ಬಗ್ಗೆ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಅವರ ನೇತೃತ್ವದಲ್ಲಿ ತನುಖಾ ತಂಡ ರಚಿಸಬೇಕು. ಆಗ ಮಾತ್ರ ಸತ್ಯ ಹೊರ ಬರಲು ಸಾಧ್ಯ. ಜಿಲ್ಲಾಧಿಕಾರಿ ತನಿಖೆ ನಡೆಸಿದರೆ ತಪ್ಪಿತಸ್ಥರು ಹೊರ ಬರಲು ಸಾಧ್ಯವಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಯದಿದ್ದರೆ ಸತ್ಯ ಹೊರ ಬರಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗುವುಲ್ಲವೆಂದು ಹೇಳಿದರು.
ಈ ಬಗ್ಗೆ ಸದನದಲ್ಲಿ‌ ಕೂಡಾ ಚರ್ಚಿಸುತ್ತೇನೆ.
ಘಟನೆ ನಡೆದ ತಕ್ಷಣವೇ ನಾನು ಬರಬೇಕಿತ್ತು. ಸ್ವಲ್ಪ ಹುಷಾರಿಲ್ಲದ ಕಾರಣ ಬರಲು ಸಾಧ್ಯವಾಗಲಿಲ್ಲ.
ಈ ಘಟನೆ ತುಂಬ ಸಿರೀಯಸ್ ಆದ ವಿಷಯ..
ಜಿಲ್ಲೆಯಾದ್ಯಂತ ಬೇನಾಮಿ ಎಷ್ಟಿವೆ, ಬೇನಾಮಿ‌ ಮಾಡುತ್ತಿರುವವರು ಯಾರು ಎಂಬ ಬಗ್ಗೆ ಹೊರಗೆ ಬರಬೇಕು.ಸ್ವತಂತ್ರ ಏಜೇನ್ಸಿಯಿಂದ ತನಿಖೆ ನಡೆಯಬೇಕು ಎಂದ ಒತ್ತಾಯಿಸಿದರು.

Exit mobile version