ವಾರದ ಅಂಕಣ- 13
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
ಜಗತ್ತಿನಲ್ಲಿ ಯಾವುದೂ ಅತಿಯಾಗಬಾರದು. ಯಾವುದು ಇಲ್ಲದೇ ಇರಬಾರದು. ಯಾವುದು ಮರೆಯಾಗಬಾರದು. ಯಾವುದನ್ನೂ ಹತ್ತಿರ ಹಚ್ಚಿಕೊಳ್ಳಬಾರದು. ಯಾವುದನ್ನೂ ದೂರ ಕಳೆದುಕೊಳ್ಳಬಾರದು ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅತಿಯಾದ ತಾಳ್ಮೆ ಅಮೃತವಾಗುವ ಬದಲು ವಿಷವಾಗುವ ಕಾಲ ಕೂಡಿಬರುತ್ತಿದೆ.
ಯಾವುದೇ ಆಗಲಿ ತಾಳ್ಮೆ ವ್ಯವಧಾನ ಸಹನೆ, ಸಹಿಷ್ಣತೆ, ಉಳಿಯಬೇಕು, ಬೆಳೆಯಬೇಕು. ಆದರೆ ಅದು ಅತಿ ಆಗಬಾರದು. ಅತಿಯಾದರೆ ಆತಂಕ ತರುವ ಪ್ರಸಂಗ ಹೆಚ್ಚಿಗೆ ಎಂಬುದು ಈ ವಾರದ ನೆಗೆಟಿವ್ ಥಿಂಕಿಂಗ್ ನ ಯೋಚನಾ ಲಹರಿ.
ನಾವು ಏನೇ ಮಾಡಲಿ ಯಾವುದೇ, ಯಾವುದನ್ನೇ ಮಾಡಲಿ, ಯಾವುದೇ ಆಗಿರಲಿ ಅದರಲ್ಲಿ ಒಂದಿಷ್ಟು ಮಾನವೀಯ ನೆಲೆಗಟ್ಟು, ಮನುಷ್ಯತ್ವದ ಗುಣ, ನೈತಿಕತೆ, ನಿಯತ್ತು, ನ್ಯಾಯ ಇರಲೇಬೇಕು. ಆದರೆ ಅದೇ ಮುಖ್ಯವಾಗಬಾರದು. ಕಳೆದುಕೊಳ್ಳುವ ಮನೋಭಾವ ಒಳ್ಳೆಯದಲ್ಲ ಕಳೆದುಕೊಳ್ಳುವುದನ್ನು ಬದುಕನ್ನಾಗಿ, ಮಾಡಿಕೊಂಡರೆ ಇರುವ ಬದುಕು ಆತಂಕಕ್ಕೆ ದೂಡುತ್ತದೆ ಅಲ್ಲವೇ?
ಇದು ಹಣಕಾಸಿಗೆ ಮಾತ್ರ ಸೀಮಿತವಾದ ಮಾತಲ್ಲ. ಬದುಕಿನ ಎಲ್ಲ ವ್ಯವಹಾರಿಕ ವಾಸ್ತವಿಕ ಜಗತ್ತಿನ ಕಟು ಸತ್ಯ ಎಂಬುದು ಜಗ್ಗಜಾಹೀರಾಗಿದ್ದರು ಒಂದಿಷ್ಟು ತಾಳ್ಮೆಯ ಗುಣ ಜಗತ್ತಿನ ಬಹುದೊಡ್ಡ ಆತಂಕಗಳನ್ನು, ಬಹುದೊಡ್ಡ ದೊಡ್ಡ ಅಘಾತಗಳನ್ನು ನಮ್ಮ ಮುಂದೆ ನೀಡಿದೆ. ಹಾಗೆಯೇ ಅದು ಶಾಂತಿಯುತ ಬದುಕಿಗೆ ದಾರಿದೀಪವೂ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇಲ್ಲಿ ಜನನ ಹಾಗೂ ಮರಣ ಹೇಗೋ, ಅದರ ನಡುವಿನ ಬದುಕಿನಲ್ಲಿ ವಾಸ್ತವತೆಗಳು ಇಂದಿನ ಬದುಕಿನ ಸ್ಥಾನಮಾನಗಳಿಗೆ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವ ವ್ಯವಧಾನವು ಅತ್ಯಂತ ಅವಶ್ಯಕ. ಆದರೆ ಅದಕ್ಕಾಗಿ ನಮ್ಮನ್ನು ನಾವು ಕಳೆದುಕೊಳ್ಳುವ, ನಮ್ಮನ್ನು ನಾವು ಹಿಂಸಿಕೊಳ್ಳುವ ಮನೋಭಾವವನ್ನು ಬಿಡಲೇಬೇಕು. ಸಿಟ್ಟು ಕೇವಲ ಮಾನಸಿಕವಾಗಿ ಸುಡುವುದಿಲ್ಲ ಅದು ದೈಹಿಕವಾಗಿಯೂ ನಮ್ಮನ್ನು ನಿರ್ನಾಮ ಮಾಡುತ್ತದೆ ಎಂಬುದು ಸತ್ಯ. ಸಿಟ್ಟೇ ಇಲ್ಲದಿದ್ದಾಗ ತಾಳ್ಮೆ ಎಂಬುದು ಹೇಗೆ ತಾನೇ ನೆನಪಾಗಲು ಸಾಧ್ಯ. ಬದುಕಲ್ಲಿ ಒಂದಿಷ್ಟು ಕೋಪ ತಾಪ ಇರಬೇಕು, ಆದರೆ ಅದು ಎಲ್ಲಿ ಯಾವಾಗ ಎಂಬ ವಾಸ್ತವತೆ ಮರೆಯಾಗಬಾರದು ಅಲ್ಲವೇ?
ತನ್ನ ತನ್ನ ಬದುಕಿಗೋಸ್ಕರ ಇನ್ನೊಬ್ಬರ ಬದುಕನ್ನು, ಇನ್ನೊಬ್ಬರ ವಾಸ್ತವತೆಯನ್ನು ನಿರ್ನಾಮ ಮಾಡುವ ಕೆಲವೇ ಕೆಲವು ವಿಕೃತ ಮನಸ್ಸುಗಳು ಕೆಲವೊಮ್ಮೆ ಬ್ಲಾಕ್ ಮೇಲ್ ಮಾಡುತ್ತವೆ. ಅದರಿಂದ ನೊಂದ ಮನಸ್ಸುಗಳು ಅದೆಷ್ಟೇ ತಾಳ್ಮೆಯನ್ನು ಹೊಂದಿದ್ದರೂ ವಾಸ್ತವದ ಸ್ಥಿತಿಯಲ್ಲಿ ಆಕ್ರೋಶ, ಕೋಪದ ತಾಪದಲ್ಲಿ ಸಿಲುಕುವುದು ಖಚಿತ. ಈ ಕೋಪ ತನ್ನನ್ನು ಮಾತ್ರ ನಿರ್ಮೂಲನೆ ಮಾಡುವುದಿಲ್ಲ. ತನ್ನೊಂದಿಗೆ ಇರುವ ಬದುಕನ್ನೇ, ಸಮಾಜವನ್ನೇ ಹಾಳು ಮಾಡುತ್ತದೆ ಎಂಬುದು ಸಹ ಸತ್ಯ.
ಮಹಾತ್ಮ ಗಾಂಧೀಜಿ ಅಹಿಂಸೆ, ಸತ್ಯ, ಶಾಂತಿ ಹೇಳುವ ಜೊತೆ ತಾಳ್ಮೆಯ ವ್ಯವಧಾನವನ್ನು ನಮ್ಮ ಮುಂದೆ ನೀಡಿದ್ದಾರೆ. ಅವರ ತಾಳ್ಮೆ ಭಾರತಕ್ಕೆ ಸ್ವತಂತ್ರ ಬದುಕಿಗೆ ಅವಕಾಶ ನೀಡಿದ್ದು ಸರಿಯಷ್ಟೆ. ಹಾಗೆಯೇ ಆ ನಡುವಿನ ತಾಳ್ಮೆಯೊಳಗೆ ಒಂದಿಷ್ಟು ಸಿಟ್ಟು ಸೆಡಕುಗಳು ಸೇರಿಕೊಳ್ಳಬೇಕಿತ್ತು ಎನಿಸುತ್ತದೆ. ಕಷ್ಟಪಟ್ಟು ಪಡೆದ ಯಾವುದೇ ವಸ್ತುವಾಗಲಿ ನಿಜಕ್ಕೂ ಇಷ್ಟವಾಗುತ್ತದೆ. ಅತ್ಯಂತ ಸುಲಭವಾಗಿ ಸಿಗುವ ಯಾವುದೇ ವಸ್ತು ಅಷ್ಟೊಂದು ಪ್ರೀತಿ ಎನಿಸುವುದಿಲ್ಲ ಅಲ್ಲವೇ?
ಬಾಡಿಗೆ ದುಡ್ಡು ಜಗಳ ಹೆಂಗೆ ಗೊತ್ತಾ?
ಬಾಡಿಗೆ ದುಡ್ಡು ಜಗಳ ಹೆಂಗೆ ಗೊತ್ತಾ?
ಸಾಕಷ್ಟು ಜನ ಈ ಸಮಾಜದಲ್ಲಿ ತಮ್ಮ ತಮ್ಮ ಮನೆ, ಕಛೇರಿ ಮಾಡಲು ಬಾಡಿಗೆ ಜಾಗವನ್ನು ಪಡೆಯುವುದು ಮಾಮೂಲಿಯಾಗಿದೆ. ಬಹಳಷ್ಟು ಜನ ಬಾಡಿಗೆದಾರದೊಂದಿಗೆ ಬಾಡಿಗೆ ಬಂದವರು ಆತ್ಮೀಯವಾಗಿ ಸಹಬಾಳ್ವೆಯಿಂದ ಬದುಕುವುದು ಸಹ ಸಹಜವಾಗಿ ಹೆಚ್ಚಾಗಿ ಕಂಡುಬರುತ್ತದೆ.
ಆದರೆ ಅದರಲ್ಲಿ ಕೆಲವೇ ಕೆಲವರು ಎಲ್ಲೇ ಬಾಡಿಗೆ ತೆಗೆದುಕೊಳ್ಳಲಿ ಅಲ್ಲೊಂದು ಕೊಕ್ಕೆ ಹಾಕುವುದು ವಾಡಿಕೆ ದಹಣ ಕೊಡಲು ಹಣ ಕೊಡಲು ಕಾಯಿಸುವುದು ಸತಾಯಿಸುವುದು ಮಾಮೂಲಿ ಎಂಬುದು ಇಂದಿನ ಸಮಾಜದಲ್ಲಿ ಕೆಲವೆಡೆ ಕಂಡು ಬರುತ್ತಿರುವ ಕಟು ಸತ್ಯ ಅಲ್ಲವೇ?
ಒಟ್ಟಾರೆ ಇಂದಿನ ಬದುಕಲ್ಲಿ ತಾಳ್ಮೆ ಅತಿಯಾಗಬಾರದು. ಒಂದು ಕಪಾಳಕ್ಕೆ ಹೊಡೆದರೆ ಮತ್ತೊಂದು ಕಪಾಳ ಕೊಡುವ ಮನೋಭಾವ ಎಲ್ಲೆಡೆ ಮರೆಯಾಗುತ್ತಿರುವುದಕ್ಕೆ ಕಾರಣ ಕೆಲವೇ ಕೆಲವು ವಿಕೃತ ಮನಸ್ಥಿತಿಗಳು ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ? ಮಾನವೀಯ ತಾಳ್ಮೆ, ಮಾನವೀಯ ನೈಜತೆ ನಮ್ಮ ನಡುವೆ ಇರಲಿ. ಆದರೆ ಅದು ಅತಿಯಾಗದಿರಲಿ.
ಮುಂದುವರಿಯುತ್ತದೆ
ಹಾಗೇ ಓದಿ
ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.
ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಅಂಕಣದ ಹನ್ನೆರಡನೇ ಅಂಕಣದ ಮತ್ತೊಂದು ವಿಶೇಷ. ಇಂದಿನ ಎರಡು ಡಿಫರೆಂಟ್ ವಿಷಯ ಓದಿ.
“ಅತಿಯಾದ ತಾಳ್ಮೆ ಆತಂಕ ತಂದೀತು ಜೋಕೆ ಓದಿ.
ನೆಗೆಟಿವ್ ಥಿಂಕಿಂಗ್ ಕಾಲಂಗೆ Starting ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.
ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ, ಹಣ ಮಾಯೆನಾ? ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ”, “ಒಳ್ಳೆಯವರಾದ್ರೆ ನಾಕಾಣೆ ಸಾಲ ಸಿಗೊಲ್ಲ” ಹಾಗೂ “ನಂಬಿಕೆ ದ್ರೋಹದ ಮನಸುಗಳೇ ಹೊಲಸು” ಕೆಟ್ಟ ಕಣ್ಣುಗಳಿಂದ ದೂರ ಇರ್ರಿ”” ಹಣದ ಲಾಲಸೆಗೆ ರಾಜಕಾರಣ” ಸಂಪನ್ನರನ್ನ ಕೆಣಕಬ್ಯಾಡ್ರಿ..!” ಓದಿದ್ದೀರಿ.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳ ಕುರಿತಂತೆ ಓದಿದ್ದೀರಿ. ಇಂದು ಇಂದಿನ ವಿಶೇಷ ನೋಡಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ
– ಸಂ