Site icon TUNGATARANGA

ಜಾತಿಯ ಕಾರಣಕ್ಕಾಗಿ ದೌರ್ಜನ್ಯದ ವಿಸ್ತರಣೆಯಾಗುತ್ತಲೇ ಇದೆ ಚಿಂತಕ ಎನ್.ರವಿಕುಮಾರ್ ಬಹುಮುಖಿಯ 40 ನೇ ಕಾರ್ಯಕ್ರಮದಲ್ಲಿ ಉಪನ್ಯಾಸ

ಶಿವಮೊಗ್ಗ,ಸೆ.೧೨: ಜಾತಿಯ ಕಾರಣಕ್ಕಾಗಿ ದೌರ್ಜನ್ಯದ ವಿಸ್ತರಣೆಯಾಗುತ್ತಲೇ ಇದೆ. ಇದು ವರ್ತಮಾನದಲ್ಲೂ ಮುಂದುವರೆದಿದೆ ಎಂದು ಚಿಂತಕ ಎನ್.ರವಿಕುಮಾರ್ ಹೇಳಿದರು.


ಅವರು ಫ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ನಡೆದ ಬಹುಮುಖಿಯ ೪೦ನೇ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಪುರಾಣದಿಂದ ಹಿಡಿದು ಬುದ್ಧನ ಕಾಲವನ್ನು ದಾಟಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರವು ದಲಿತ ವಿಚಾರಗಳು ಶೋಷಣೆಯೊಂದಿಗೆ ಕೇಳಿ ಬರುತ್ತಲೇ ಇದೆ. ಭಾರತದೊಳಗೊಂದು ಭಾರತ ಇದ್ದರೆ ಅದು ಅಸ್ಪೃಶ್ಯ ಭಾರತ ಬಸವಣ್ಣನ ಕಾಲದಲ್ಲಿ ಪರಿವರ್ತನೆಯಾದರೂ ಕೂಡ ಅದು ಸಂಘರ್ಷಕ್ಕೆ ಕಾರಣವಾಯಿತು. ಈಗಲೂ ಕೂಡ ಜಾತಿಯ ಸ್ವರೂಪ ಹಿಗ್ಗಿದೆ. ದಲಿತ್ವ ಎಂಬುವುದೇ ಒಂದು ಅಸ್ಮಿತೆಯಾಗಿದೆ ಎಂದರು.


ಭಾರತವನ್ನು ನಿಜವಾಗಿ ಅಂಬೇಡ್ಕರ್ ಕಣ್ಣುಗಳಿಂದ ನೋಡಬೇಕು. ದಲಿತ ಪದ ಕೆಲವರಿಗೆ ತಾತ್ಸಾರ ಮುಜುಗರ ತಂದರೆ ಕೆಲವರಿಗೆ ರೋಮಾಂಚನ ತರುತ್ತದೆ.ದಲಿತ ಸಮಸ್ಯೆ ಪ್ರಾಚೀನ ಕಾಲದಲ್ಲಿ ಆರ್ಯರು ಬಂದಮೇಲೆ ಪ್ರಾರಂಭವಾಯಿತು ಎಂದರು.


ಇಂದು ವಿಶ್ವಗುರು ಆಗಲು ಹೊರಟ ಭಾರತ ಒಂದು ಕಡೆಯಾದರೆ ದಲಿತ ಭಾರತ ಒಂದು ಕಡೆ ಇದೆ.ಈ ಭಾರತವನ್ನು ನೋಡಲು ಅಂಬೇಡ್ಕರ್ ಕಣ್ಣುಗಳು ಬೇಕು.ಈ ದಲಿತ ಭಾರತದ ಜಾತಿಗಳೇ ಎಲ್ಲಾ ಸಮಸ್ಯೆಗೆ ಕಾರಣ.ಭಾರತದಲ್ಲಿ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಂಬ ನಾಲ್ಕು ಜಾತಿಗಳಲ್ಲದೆ ಪಂಚಮರು ಎಂಬ ಅಸ್ಪೃಶ್ಯ ಜಾತಿ ಇದೆ.ಬುದ್ದನ ಕಾಲದಲ್ಲಿ ಸುನೀತ ಎಂಬ ಜಾಡಮಾಲಿ ಯನ್ನು ಮುಖ್ಯ ವಾಹಿನಿಗೆ ತರಲಾಯಿತು.ಆದರೆ ಇಂದಿಗೂ ಜಾತಿಯತೆ ಹಾಗೇ ಉಳಿದಿದೆ ಎಂದರು.


ಬದನವಾಳು ಗ್ರಾಮದಲ್ಲಿ ದೇವಸ್ಥಾನದ ಪ್ರವೇಶದ ವಿಷಯವಾಗಿ ಗಲಾಟೆ ನಡೆದು ೩ಜನ ದಲಿತರು ಕೊಲ್ಲಲ್ಪಟ್ಟರು.ಕಂಬಾಲಪಲ್ಲಿಯಲ್ಲೀ ಕೂಡ ೭ಜನ ದಲಿತರ ಹತ್ಯೆ ಆಯಿತು.ಆದರೆ ಇದುವರೆಗೆ ಅವರಿಗೆ ನ್ಯಾಯ ಸಿಗಲಿಲ್ಲ.ಬಿಹಾರ ಮತ್ತು ಗುಜರಾತ್ ನಲ್ಲಿ ದಲಿತರು ದಿನವೂ ಹಲ್ಲೆ?ಗೆ ಒಳಗಾಗುತ್ತಿದ್ದಾರೆ ವಿಷಾಧಿಸುತ್ತಿದ್ದಾರೆ ಎಂದರು.
ವಾಲ್ಮೀಕಿ ಜಾತಿ ಮಾದಿಗ ಜಾತಿ ಇಬ್ಬರು ದಲಿತರೇ ಆದರೂ ಕೂಡ ಅವರ ಮಧ್ಯೆ ಮರ್ಯಾದೆ ಹತ್ಯೆ ನಡೆಯುತ್ತಲೇ ಇದೆ. ರಾಜಕಾರಣಿಗಳು ಕೇವಲ ನಾಟಕಕ್ಕಾಗಿ ದಲಿತರ ಮನೆಯಲ್ಲಿ ಊಟ ಮಾಡುತ್ತಾರೆ.ಕ್ಯಾಮೆರಾ ಪೇಪರ್ ನವರನ್ನು ಕರೆದುಕೊಂಡು ಹೋಗುವುದು ಆತ್ಮವಂಚನೆ ಆಗುತ್ತದೆ ಎಂದರು.
ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ನಿರಾಕರಿಸಿದಷ್ಟು ಅವರು ಬೆಳೆಯುತ್ತಿದ್ದಾರೆ.ಗಾಂಧೀ ಭಾರತದ ರಾಷ್ಟ್ರಪಿತ ಆದರೆ ಅಂಬೇಡ್ಕರ್ ಭಾರತದ ರಾಷ್ಟ್ರಮಾತೆಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ.ಕೆ.ಜಿ.ವೆಂಕಟೇಶ್ ಅವರು ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು.

Exit mobile version