Site icon TUNGATARANGA

ಭದ್ರಾವತಿ/ ಅರಬಿಳಚಿ ಕ್ಯಾಂಪ್ ಗಣಪನ ಡೊಳ್ಳು ಗಲಾಟೆ- ಊರಲ್ಲಿ ಸ್ಮಶಾನ ಮೌನ! ಇದನ್ನ ಗಣಪ ಕೇಳಿದ್ನಾ? ಸಂಪೂರ್ಣ ಸುದ್ದಿ ಓದಿ

ಶಿವಮೊಗ್ಗ,ಸೆ.08:
ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಬಿಳಚಿ ಕ್ಯಾಂಪ್ ಗ್ರಾಮದಲ್ಲಿ ನಿನ್ನೆ ಶನಿವಾರ ಸಂಜೆ ಗಣೇಶ ಹಬ್ಬದ ವೇಳೆ ಡೊಳ್ಳು ಬಾರಿಸುವ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದರು. ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್ ಸೇರಿ ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನನ್ನ
ಇಂದು ಊರಲ್ಲಿ ಸ್ಮಶಾನ ಮೌನ. ಹಿರಿಯ ಅಧಿಕಾರಿಗಳು ಬೇಟಿ ನೀಡಿದ್ದಾರೆ. ತನಿಖೆ ಚುರುಕಾಗಿದ್ದು ಊರಲ್ಲಿ ನೀರವತೆ ಕಾಡುತ್ತಿದೆ.


ಎರಡು ಗಣಪತಿ ಸಂಘಗಳು ಒಂದೇ ಡೊಳ್ಳಿನ ತಂಡದವರಿಗೆ ಹೇಳಿದ್ದರು. ಆದರೆ ಎರಡೂ ಸಂಘಗಳ ಮೆರವಣಿಗೆ ಒಂದೇ ವೇಳೆ ಇದ್ದಿದ್ದರಿಂದ ಡೊಳ್ಳಿನ ತಂಡಕ್ಕೆ ಇನ್ನೊಂದು ಗಣಪತಿ ಸಂಘದ ಮೆರವಣಿಗೆಗೆ ಹೋಗಲು ತಡವಾಗಿದೆ. ಇದರಿಂದ ಗಣಪತಿ ಸಂಘದವರು ಆಗಮಿಸಿದಾಗ ಗಲಾಟೆಯಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ತುಕಡಿ ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ, ಭದ್ರಾವತಿ ಡಿವೈಎಸ್ಪಿ ಹಾಗೂ ಹೊಳೆಹೊನ್ನೂರು ಪೊಲೀಸ್ ಇನ್ಸ್​ಪೆಕ್ಟರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.


ಈ ಕುರಿತು ಮಾತನಾಡಿದ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು, ಗ್ರಾಮದ ಎರಡು ಸಂಘಟನೆಯವರು ಒಂದೇ ಡೊಳ್ಳಿನ ತಂಡಕ್ಕೆ ಬಾರಿಸಲು ಹೇಳಿದ್ದಾರೆ. ಡೊಳ್ಳಿನವರು ಮೊದಲನೇ ಗಣಪತಿ ಬಳಿ ಬಾರಿಸುವಾಗ, ಇನ್ನೊಂದು ಗಣಪತಿ ಸಂಘದವರು ಬಂದು ವಿಚಾರಿಸಿದ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

ಈ ವೇಳೆ ಗ್ರಾಮಸ್ಥರು ಸೇರಿದಂತೆ ನಮ್ಮ ಓರ್ವ ಪೊಲೀಸ್ ಸಿಬ್ಬಂದಿಗೂ ಸಣ್ಣ ಗಾಯವಾಗಿದೆ. ಸದ್ಯ ಗ್ರಾಮ ಶಾಂತಿಯುತವಾಗಿದೆ. ಇಂದೇ ಎಲ್ಲಾ ಗಣಪತಿ ನಿಮಜ್ಜನಕ್ಕೆ ಮನವಿ ಮಾಡಿದ್ದೆವು. ನಮ್ಮ ಪೊಲೀಸ್ ಸಿಬ್ಬಂದಿಯು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Exit mobile version