Site icon TUNGATARANGA

ಗಣಪನ ಹಬ್ಬದಲ್ಲಿನ ಸಂಭ್ರಮದಲ್ಲಿ ಬರ್ಜರಿ ಮನೆಕಳವು/ ಸರ್ಕಾರಿ ನೌಕರರಿಗೆ ನೀಡುವ ಮನೆಗೇ ಹಿಂಗಾ? ಶಿವಮೊಗ್ಗ ಬಸವನಗುಡಿಯಲ್ಲಿ ಸಾಲು ಮನೆ ಕಳವು ಹೇಗೆ ಎಲ್ಲಿ ನೋಡಿ?

ಶಿವಮೊಗ್ಗ, ಸೆ.8:
ಇಲ್ಲಿನ ಬಸವನಗುಡಿಯ ಸರ್ಕಾರಿ ನೌಕಕರಿಗೆ ನೀಡುವ ಪಿಡಬ್ಲೂಡಿ ಕ್ವಾಟ್ರಸ್ ನಲ್ಲಿರುವ ಒಟ್ಟು ಐದು ಮನೆಯಲ್ಲಿ ಕಳವು ಪ್ರಕರಣ ನಡೆದಿದ್ದು, ಒಂದು ಮನೆಗಳಲ್ಲಿ ಕಳುವಿನ ಯತ್ನ ನಡೆದಿದೆ.


ಡಿಸಿ ಕಚೇರಿಯ ಇಬ್ಬರ ಮನೆ, ಮಾನ್ಯ ನ್ಯಾಯಾದೀಶರ ಚಾಲಕ, ವಾರ್ತಾ ಇಲಾಖೆಯ ಓರ್ವರು, ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯ ಓರ್ವರ ಮನೆ ಸೇರಿದಂತೆ 5 ಮನೆ ಕಳುವು ಆಗಿದೆ. ಒಂದು ಮನೆ ಕಳುವಿನ ಯತ್ನ ನಡೆದಿದೆ.


ಸುಮಾರು ಐದು ಲಕ್ಷಕ್ಕೂ ಹೆಚ್ಚು ನಗದು ಕಳುವಾಗಿದೆ. ಆದರೆ ಮನೆಯಲ್ಲಿದ್ದವರಿಗೇ ಅಲ್ಲಿಟ್ಟ ನಗದಿನ ಬಗ್ಗೆ ಜ್ಞಾಪನವಿಲ್ಲ.
ಶಿವಮೊಗ್ಗ ಪೊಲೀಸ್ ಇಲಾಖೆಯ ಪ್ರಿಂಗರ್ ಪ್ರಿಂಟ್ಸ್, ಡಾಗ್ ಸ್ಕ್ವಾಡ್, ಜಯನಗರ ಪೊಲೀಸರು ಸ್ಥಳಕ್ಕೆ ಡಿಎಆರ್ ವಾಹನ ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಂಡಿದೆ.
ಮದ್ಯರಾತ್ರ ಎನ್ನಬಹುದಾದ ಬೆಳಗಿನ ಜಾವದ ರಾತ್ರಿ ಸುಮಾರು ಮೂರು ಗಂಟೆಯ ವೇಳೆಗೆ ಸರಣಿ ಕಳವು ನಡೆದಿದೆ.


ಐದು ಲಕ್ಷಕ್ಕೂ ಹೆಚ್ಚು ನಗದು, ಮೂರು ಉಂಗುರ, ಬೆಳ್ಳಿ ಕಾಯಿನ್, 300 ಗ್ರಾಂ ಚಿನ್ನಾಭರಣ, ಕಳುವಾಗಿದೆ. ಹಬ್ಬದ ಹಿನ್ನಲೆಯಲ್ಲಿ ಹಾಗೂ ಕೆಲ ಕೆಲಸದ ಮೇಲೆ ಊರಿಗೆ ಹೋದಾಗ ಕಳ್ಳತನ ನಡೆದಿದೆ.
ಇಲ್ಲಿ ವಿಶೇಷವೆಂದರೆ ಆ ಎಲ್ಲರೂ ಅನಿರ್ವಾರ್ಯವಾವಿ ಮನೆ ಖಾಲಿ ಮಾಡಿಕೊಂಡಿದ್ದರು.


ಕ್ವಾಟ್ರಸ್ ನ ಎದುರಿನ ಮನೆಯಲ್ಲಿ ಸಿಸಿ ಟಿವಿ ಕ್ಯಾಮರಾ ಮೂಲಕ ಮಾಹಿತಿ ದೊರೆತಿದ್ದು ಮೂವರು ಮುಸುಕುಧಾರಿಯಾಗಿ ಬಂದು ಐದು ಮನೆಯನ್ನ ಇಂಟರ್ ಲಾಕರ್ ಹೊಡೆದು ಕಳುವು ಮಾಡಿದ್ದಾರೆ. ಕಳುವಾದ ಮನೆಗಳ ಬೀರುವಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿ ಅಗಿವೆ. ಮಿಕ್ಕ ಮಾಹಿತಿ ನಾಳೆಗೆ?

Exit mobile version