Site icon TUNGATARANGA

ಮಹಿಳೆಯರು ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದಾರೆ :ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಮಹಿಳೆಯರು ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 

ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಏರ್ಪಡಿಸಲಾಗಿದ್ದ ಸದಸ್ಯತಾ ಅಭಿಯಾನ ಹಾಗೂ ಜಿಲ್ಲಾಮಟ್ಟದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಒಟ್ಟು 60 ಕೋಟಿ ಮತದಾರರು ಈ ಬಾರಿ ಮತ ಚಲಾಯಿಸಿದ್ದು, ಅದರಲ್ಲಿ ಶೇಕಡ 46ರಷ್ಟು ಮಹಿಳೆಯರು ಬಿಜೆಪಿಗೆ ಮತವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಮತಗಳು ಬಿಜೆಪಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುವಂತಾಗಬೇಕು ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಅಧಿಕಾರಕ್ಕೆ ಬಂದಿರುವುದು ಐತಿಹಾಸಿಕ ಕ್ಷಣವಾಗಿದೆ. ಪ್ರತಿ ಬಾರಿ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ ಕೇವಲ ಅಡಿಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಎಂದು ಸಾಮಾಜಿಕ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸುತ್ತಿದ್ದಾಳೆ ಇದಕ್ಕೆ ಕೇಂದ್ರದ ಅನೇಕ ಯೋಜನೆಗಳೆ ಕಾರಣವಾಗಿದೆ ಎಂದು ಹೇಳಿದರು. 

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿದೆ. ಅದು ನೂರಕ್ಕೆ ಅಲ್ಲ 543ಕ್ಕೆ ಎಂದು ವ್ಯಂಗ್ಯವಾಡಿದ ಅವರು ಅದು 17 ರಾಜ್ಯಗಳಲ್ಲಿ ಒಂದೇ ಒಂದು ಎಂಪಿ ಸ್ಥಾನವನ್ನು ಗಳಿಸಲಾಗದಂತಹ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಕೇವಲ ಬೆರಳಿಕೆಯಷ್ಟು ರಾಜ್ಯದಲ್ಲಿ ಮಾತ್ರ ನಮ್ಮ ಪಕ್ಷ ಸಾಧನೆಯನ್ನ ಮಾಡಲು ಆಗಿಲ್ಲ. ನಮ್ಮಗಳ ತಪ್ಪಿನಿಂದಾಗಿ ರಾಜ್ಯದಲ್ಲಿ ಒಂದಿಷ್ಟು ಸ್ಥಾನಗಳನ್ನು ಕಾಂಗ್ರೆಸ್ನವರು ಪಡೆಯುವಂತಾಯಿತು ಅದನ್ನು ಕೂಡ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳೋಣ ಎಂದು ಹೇಳಿದರು. 

ಶಿವಮೊಗ್ಗ ನಗರದಲ್ಲಿ 6,000 ಕೇಂದ್ರ ಸರ್ಕಾರದ ನಿವೃತ್ತಿ ನೌಕರರು ವಾಸಿಸುತ್ತಿದ್ದಾರೆ ಅವರುಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸಿಜಿಎಸ್ ಆಸ್ಪತ್ರೆಯನ್ನು ಆರಂಭಿಸಲಾಗುತ್ತಿದೆ ಅಲ್ಲದೆ ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಎಸ್‌ಐ ಆಸ್ಪತ್ರೆ ರಾಗಿಗುಡ್ಡದಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳಿದರು. 

ನಗರದ ಸಹ್ಯಾದ್ರಿ ಕಾಲೇಜ್ ಎದುರಿರುವ ದೂರದರ್ಶನ ಗೋಪುರ ವ್ಯರ್ಥವಾಗಿ ಬಿದ್ದಿತ್ತು ಅದನ್ನು ಬಳಸಿಕೊಂಡು ಶಿವಮೊಗ್ಗ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಗೆ ಎಫ್.ಎಂ ರೇಡಿಯೋ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. 10 ಕೋಟಿ ಮೌಲ್ಯದ ಟ್ರಾನ್ಸಾ÷್ಫರ್ಮರ್ ಅಳವಡಿಸಲಾಗುತ್ತದೆ ಎಂದು ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಅಂತರಾಷ್ಟಿçÃಯ ವಿಮಾನ ನಿಲ್ದಾಣ ವಾಗುವ ಎಲ್ಲಾ ರೀತಿಯ ಸೌಲತ್ತುಗಳನ್ನು ಹೊಂದಿದೆ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ಆ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದರು.

ಕೋಟೆ ಗಂಗೂರಿನಲ್ಲಿ ರೈಲ್ವೆ ಸರ್ವಿಸ್ ಕೇಂದ್ರವನ್ನ ಶೀಘ್ರದಲ್ಲಿ ಆರಂಭಿಸಲಾಗುತ್ತದೆ 10ರಿಂದ 12 ರಾಜ್ಯಳಿಗೆ ರೈಲ್ವೇ ಸಂಪರ್ಕ ದೊರಕುತ್ತದೆ. ಎಂದ ಅವರು 2008ರ ಹಿಂದೆ ಒಂದೇ ಒಂದು ಮೀಟರ್ ರೈಲ್ವೆ ಹಳಿಯನ್ನು ಹಾಕಲು ಆಗಿರಲಿಲ್ಲ ನಾನು ಎಂಪಿ ಆದ ನಂತರ ಶಿವಮೊಗ್ಗದಿಂದ ತಾಳ್ಗುಪ್ಪದವರೆಗೆ ಬ್ರಾಡ್‌ಗೇಜ್ ಸೌಲಭ್ಯವನ್ನು ಮಾಡಲಾಯಿತು ಎಂದು ಹೇಳಿದರು. 

ಆಯಾ ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಆಗುವಂಥಾಗಬೇಕು ಅದಕ್ಕೆ ನಮ್ಮ ಮಹಿಳಾ ಕಾರ್ಯಕರ್ತರು ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದ ಅವರು ಅತಿ ಹೆಚ್ಚು ಸದಸ್ಯರನ್ನ ಹೊಂದಿರುವAತಹ ಬಿಜೆಪಿ ಗೆ ಕಾರ್ಯಕರ್ತರೇ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಹೇಳಿದರು 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಗಾಯತ್ರಿ ಮಲ್ಲಪ್ಪ ವಹಿಸಿದ್ದರು. ಸಮಾರಂಭದಲ್ಲಿ ಮಂಗಳ ನಾಗೇಂದ್ರ ರೇಖಾ ಹೆಗಡೆ ಎಂ ಬಿ ಹರಿಕೃಷ್ಣ ಮಾಲತೇಶ್ ಕುಸುಮ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

Exit mobile version