Site icon TUNGATARANGA

ಅಂತರಾಷ್ಟ್ರೀಯ ಭರತನಾಟ್ಯಸ್ಪರ್ಧೆಗೆ ಶಿವಮೊಗ್ಗ ನಟನಂ ಬಾಲ ನಾಟ್ಯ ಕೇಂದ್ರದ ಮಕ್ಕಳು ಬ್ಯಾಂಕಾಂಕ್, ಥೈಲ್ಯಾಂಡ್ ಗೆ ಡಾ.ಕೇಶವ್ ಕುಮಾರ್ ಪಿಳ್ಳೈ ನೇತೃತ್ವದ ತಂಡ ಪ್ರಯಾಣ

ಶಿವಮೊಗ್ಗ, ಸೆ.4:
ದೇಶದ ಪ್ರಖ್ಯಾತ ಭರತನಾಟ್ಯ ಕೇಂದ್ರಗಳಲ್ಲಿ ಒಂದಾದ ಶಿವಮೊಗ್ಗದ ನಟನಂ ಬಾಲ ನಾಟ್ಯ ಕೇಂದ್ರದ 50ಕ್ಕೂ ಹೆಚ್ಚು ಕಲಾವಿದರ ತಂಡ ಕೇಂದ್ರದ ರೂವಾರಿಗಳಾದ ಡಾ. ಎಸ್ ಕೇಶವಕುಮಾರ್ ಪಿಳ್ಳೈ

ಅವರ ನೇತೃತವದಲ್ಲಿ ಅಂತರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಗೆ ಭಾಗವಹಿಸಲು ಥೈಲೆಂಡ್ ಹಾಗೂ ಬ್ಯಾಂಕಾಕ್ ಪ್ರವಾಸವನ್ನು ಕೈಗೊಂಡಿದೆ.


ನಿರಂತರವಾಗಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾವಿರಾರು ಸಾಧನೆ ಮಾಡಿರುವ ನಟನಂ ಬಾಲ ನಾಟ್ಯ ಕೇಂದ್ರದ ಐವತ್ತಕ್ಕೂ ಹೆಚ್ಚು ಕಲಾವಿದರ ತಂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಇದರೊಂದಿಗೆ ಕೇಂದ್ರದ ಸಂಸ್ಥಾಪಕರು,

ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಕೇಶವಕುಮಾರ್ ಅವರಿಗೆ ಪಂದ್ಯಾವಳಿ ಸಮಾರಂಭದಲ್ಲಿ ವಿಶೇಷ ಗೌರವ ನೀಡಿ ಸನ್ಮಾನಿಸಲಿದ್ದಾರೆ.


ಸೆ.6 ರಿಂದ ನಡೆಯಲಿರುವ ಪಂದ್ಯಾವಳಿಯಲ್ಲಿ ನಟನಂ ಕೇಂದ್ರದ ಕಲಾವಿದರಾದ ದೃತಿ, ಅನಿಂದಿತ, ಸಾನ್ವಿ ಎಸ್., ಸಂಜನಾ, ನೈದಿಲೆ, ವೈಷ್ಣವಿ, ಪೂಜಾ, ಸೌಮ್ಯ, ಸಾನಿಕ, ಸುಷ್ಮಿತ, ಅಮೂಲ್ಯ,

ಪೂರ್ವಿಕ, ಸುದೀಕ್ಷ, ಭೂಮಿಕ, ಮನಸ್ವಿ, ಸಾನ್ವಿ ಜಿ., ಸಿಂಚನ, ಖುಷಿ, ತೇಜಸ್ವಿನಿ, ಮಾನಸ, ಕಶ್ವಿ, ಶ್ರೀ ಗೌರಿ, ಅನುಷಾ, ಸಾಧ್ವಿ, ಮೇಘನಾ, ಸೌರವಿ, ಷಣ್ಮುಕಿ,

ದೀಕ್ಷಾ, ಅನನ್ಯ, ಸುಜನ, ಸ್ಪೂರ್ತಿ, ರಮ್ಯಶ್ರೀ, ರೋಹಿತ, ಪ್ರೇರಣ, ದೇವಿ ಚಿನ್ಮಯಿ, ಭೂಮಿಕಾ, ಲಿಪಿಕ, ಶಾಂತಿಪ್ರಿಯ, ಮೌಲ್ಯ, ಉಪಾಸನ, ಗೆಹೇನ, ಆಕಾಂಕ್ಷ, ಶಾಲಿನಿ, ಸೀಮಾ, ಪ್ರಜ್ಞಾ ಅವರೊಂದಿಗೆ ಶಿಕ್ಷಕರ ತಂಡವಾದ ಸುಪ್ರಿಯ, ಚೈತ್ರ, ನಾಟ್ಯಶ್ರೀ, ಸೌಮ್ಯ, ವಂದನ ಕೆ. ಚೇತನ್, ಚಂದ್ರಪ್ಪ, ಶೇಖರ್ ಅವರು ಈ ಪಂದ್ಯಾವಳಿಗೆ ಭಾಗವಹಿಸಲಿದ್ದಾರೆ.

Exit mobile version