Site icon TUNGATARANGA

ಸಂಪನ್ನರನ್ನ ಕೆಣಕಬ್ಯಾಡ್ರಿ!…, ವಟವಟ ಎನ್ನುವ ಹೆಂಡ್ತವ್ವ! ತುಂಗಾತರಂಗ ಗಜೇಂದ್ರಸ್ವಾಮಿ ಅವರ ವಾರದ ನೆಗಿಟೀವ್ ಥಿಂಕಿಂಗ್ ಅಂಕಣ ಓದಿ

ವಾರದ ಅಂಕಣ- 12

ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ

ಜಗತ್ತಲ್ಲಿ ಒಳ್ಳೆಯವರಿಗೆ ಪದೇಪದೇ ಕಾಡಬೇಡಿ, ಕೆಣಕಬೇಡಿ ಸಿಟ್ಟು ಬರಿಸಬೇಡಿ. ಆತ ಸಂಪನ್ನ ಎಂದು ಪದೇಪದೇ ಹಿಂಸೆ ನೀಡಬೇಡಿ. ಮೋಸ ಮಾಡಬೇಡಿ. ಆತನೇನಾದರೂ ನಿಮ್ಮ ಎದುರು ಸಿಡಿದುಬಿಟ್ಟರೆ ನೀವು ಛಿದ್ರವಾಗುವುದು ಖಚಿತ. ಇದು ಇವತ್ತಿನ ನೆಗೆಟಿವ್ ಥಿಂಕಿಂಗ್ ಕಾನ್ಸೆಪ್ಟ್.
ಪದೇ ಪದೇ ಯಾವುದೇ ಮನುಷ್ಯ ಮೋಸ ಹೋಗುವುದಿಲ್ಲ. ಪ್ರತಿ ಮನುಷ್ಯ ಸೋಲುವಾಗ, ಮೋಸ ಹೋಗುವಾಗ ಒಂದಿಷ್ಟು ಹೊಸ ಪಾಠವನ್ನು ಕಲಿಯುತ್ತಾನೆ. ಸಕಾರಾತ್ಮಕ ಮನಸ್ಸು ಹೊಂದಿದ ವ್ಯಕ್ತಿ ನಕಾರಾತ್ಮಕ ನಿರ್ಲಜ್ಜ ಮನೋಭೂಮಿಕೆಯನ್ನು ಕೆಲವೊಮ್ಮೆ ಸಹಿಸಿಕೊಳ್ಳುತ್ತಾನೆ. ಹೋಗ್ಲಿ ಬಿಡು ಎಂದುಕೊಳ್ಳುತ್ತಾನೆ. ಕೆಲವೊಮ್ಮೆ ಅದನ್ನು ಮರೆತುಬಿಡುತ್ತಾನೆ ಆದರೆ ಅದೇ ಮುಂದುವರೆಯುವುದಿಲ್ಲ ಎಂಬುದು ಇಂದಿನ ವಾಸ್ತವದ ಚಿತ್ರಣ ಅಲ್ಲವೇ?

ಇದನ್ನೂ ಓದಿ

https://tungataranga.com/?p=34169
ನಮ್ಗೊಂದು ಪತ್ರ, ಬೆಚ್ಚಿಬಿದ್ದ ಮನಸು!, ನೆಗಿಟೀವ್ ಥಿಂಕಿಂಗ್ ಅಂಕಣದ ಸ್ಪೆಷಲ್ ಐಟಂ ಓದಿ, ಓದುಗರೊಬ್ಬರ ಪ್ರತಿಕ್ರಿಯೆ ನೋಡಿ
ಸಂಪೂರ್ಣ ಅಂಕಣ ಓದಲು ಮೇಲಿನ ಲಿಂಕ್ ಬಳಸಿ
ತುಂಗಾತರಂಗ ಗುಂಪಲ್ಲಿ ಇಲ್ಲದವರಿಲ್ಲಿ ಸೇರಿ
https://chat.whatsapp.com/IzhQLfWK8ud0fRtId61ehs


ಹೋಗ್ಲಿ ಬಿಡು ಎಂದುಕೊಂಡ ಮನುಷ್ಯನಿಗೆ ಎಷ್ಟು ಬಾರಿ ನಕಾರಾತ್ಮಕ ವಂಚಿಸುವ ಮನಸುಗಳು ಮೋಸ ಮಾಡಲು ಸಾಧ್ಯ? ಅಂತಹ ಸಾಧ್ಯತೆ ಅದೆಷ್ಟು ಬಾರಿ ಫಲಪ್ರದ ಆದೀತು?
ಈ ಜಗತ್ತಿನ ಪ್ರತಿ ಮೂಲೆ ಮೂಲೆಗಳಲ್ಲಿ ಹುಡುಕಿದಾಗ ಕಂಡುಬರುವ ಕೆಲವೇ ಕೆಲವು ಸತ್ಯಾಂಶಗಳು ಇಂತಿವೆ. ಒಮ್ಮೆ ಅಥವಾ ಎರಡು ಬಾರಿ ಮೋಸ ಹೋಗಬಹುದು. ಹಣ, ಆಸ್ತಿ, ಅಂತಸ್ತು, ಅಧಿಕಾರ ಯಾವುದೇ ಆಗಿರಲಿ ಒಂದಿಷ್ಟು ಕಳೆದುಕೊಳ್ಳಬಹುದು. ಮತ್ತೆ ಸಿಗುತ್ತೆ ಎಂಬ ಭರವಸೆಯನ್ನೂ ಕಳೆದುಕೊಳ್ಳಬಹುದು. ಆದರೆ ಪದೇಪದೇ ಮುಗ್ಧ ಋಣಾತ್ಮಕ ಮನಸ್ಸನ್ನು ಕೆದಕಿದಾಗ ಆ ಮನಸ್ಸು ವ್ಯಾಗ್ರನಂತಾಗುವುದು,

ಉಗ್ರವಾಗುವುದು ಸುಳ್ಳೇನಲ್ಲ. ಅಂತಹ ಸಾಕಷ್ಟು ನಿದರ್ಶನಗಳು ನಮ್ಮ ಮುಂದೆ ನಡೆದಿವೆ ಅಲ್ಲವೇ?
ಇನ್ನೊಂದು ಮುಖ್ಯ ಸಂಗತಿ ಎಂದರೆ ಕೊಡಲು ವ್ಯವಹಾರದಲ್ಲಿ ಪಡೆದವನ ಮೌನ ಯಾವಾಗಲೂ ಕೊಟ್ಟವನು ಆಕ್ರೋಶಕ್ಕೆ ತುತ್ತಾಗುತ್ತದೆ ಬೇಕಿದ್ದಾಗ ಕಾಡಿಬೇಡಿ ನಾಚಿಕೆ ಇಲ್ಲದೆ ಪಡೆದವನಿಗೆ ಕೊಡುವಾಗ ತಪ್ಪಿಸಿಕೊಳ್ಳುವ ದರ್ದು ಬರುವುದು ಏಕೆ? ಆತ ಕೊಡಲು ಶಕ್ತಿ ಇಲ್ಲದಂತಹವನೇ? ಅಷ್ಟೊಂದು ಕಠಿಣವಾದ ಬದುಕು ಆತನದಾಗಿದಿಯೇ ಎಂದು ಕಣ್ಣಾಯಿಸಿದಾಗ ಅದರಲ್ಲಿ ಶೇಕಡ 90ರಷ್ಟು ವಿಕೃತರು ಜಾಲಿ ಜಾಲಿಯಾಗಿ ಬೇರೆಯವರೆಡೆ ಮೇಯಲು ಹೋಗಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪಡೆದವನು ಮಾಡುವ ಮೌನದಾಟ, ತಪ್ಪಿಸಿಕೊಳ್ಳಲು ಆಡುವ ಆಟಗಳು ಕೊಟ್ಟವನ ಮುಗ್ಧತೆಯನ್ನು ಸದಾ ಪ್ರಶ್ನಿಸುತ್ತವೆ. ಆತನ ಮನದಲ್ಲಿ ಆಕ್ರೋಶ ಮೂಡಿಸುತ್ತದೆ ಎಂಬುದನ್ನು ಮರೆಯಬಾರದಲ್ಲವೇ?


ಏನು ಬೇಕಾದರೂ ಆಗಲಿ, ನನಗದಲ್ಲ ಎಂದು ಹಿಂದಿನ ಧೂಳನ್ನು ಕೊಡವಿಕೊಳ್ಳುವ ಈ ಗೋಮುಖವ್ಯಾಘ್ರ ಮನುಜ ಮುಖದ ಕೆಲವರ ವರ್ತನೆಗಳು ನಿಜವಾಗಿಯೂ ಮುಗ್ಧತೆಯ ಸತ್ಯವನ್ನೇ ಮುಗ್ಧತೆಯ ಅಸಹಾಯಕತೆಯನ್ನೇ ಬಲಿಪಡಿಯುತ್ತಿರುವುದು ದುರಂತ. ಆದರೆ ಅದು ಸದಾಕಾಲ ಶಾಶ್ವತವಾಗಿರುವುದಿಲ್ಲ.


ಒಮ್ಮೆ ಸಂಪನ್ನನಿಗೆ ಸಿಟ್ಟು ಬಂದರೆ ಆಗುವ ಅವಾಂತರ ಬಹಳ ದೊಡ್ಡದು ಎಂಬುದನ್ನು ಕಣ್ಣಾರೆ ಕಂಡಿರುವ ಎಷ್ಟೋ ನಿದರ್ಶನಗಳಿವೆ. ಇದಕ್ಕಾಗಿ ಅದೆಷ್ಟೋ ಬಗೆಯ ಅಪರಾಧ ಚಟುವಟಿಕೆಗಳು ನಡೆದಿದೆ. ಕೊಟ್ಟ ತಪ್ಪಿಗೆ ತಪ್ಪು ಮಾಡಿ ಮತ್ತೆ ಕಾನೂನಾತ್ಮಕ ಶಿಕ್ಷೆಗೆ ಬಂದಿಯಾಗುವುದು ಎಷ್ಟರಮಟ್ಟಿಗೆ ಸರಿಯಾಗುತ್ತದೆ. ಹಾಗಾಗಿಯೇ ಹೇಳುವುದು ಯಾವಾಗಲೂ ಒಳ್ಳೆಯವರ ಮನಸ್ಸನ್ನು ಪದೇಪದೇ ಕೆದಕಬೇಡಿ. ಹಿಂಸೆ ಅನುಭವಿಸಲು ಅವಕಾಶ ಮಾಡಿಕೊಡಬೇಡಿ
ಮುಂದುವರೆಯುತ್ತದೆ
.

ಮುಂದಿದೆ ವಟಗುಟ್ಟುವ ಹೆಂಡ್ತವ್ಬ

ವಟಗುಟ್ಟುವ ಹೆಂಡ್ತಿ…!
ಗಂಡ ಹೆಂಡಿರ ಸಂಬಂಧ ಅತ್ಯಂತ ವಿಶೇಷ ಹಾಗೂ ವೈಶಿಷ್ಟವಾದುದು ಎಂಬುದು ಎಲ್ಲರಿಗೂ ಗೊತ್ತಿದೆ. ಪತಿಯನ್ನು ಸತಿಯಾದವಳು ಗೌರವಿಸಬೇಕು. ಅದೇ ಬಗೆಯಲ್ಲಿ ಪತಿಯಾದವನೂ ಸಹ ಅದನ್ನು ಗೌರವಿಸಬೇಕು ಎಂಬುದು ಪರಿಪಾಠ.
ಆದರೆ ಈ ನಡುವಿನ ಕೆಲವು ಮನಸುಗಳು ಅದರಲ್ಲೂ ಕೆಲ ಸತಿಯರ ಮನಸುಗಳು ಸದಾ ಇಲ್ಲದ್ದಕ್ಕೆ, ಅಗತ್ಯ ಪಡೆದಿದ್ದಕ್ಕೆ ವಟಹುಟ್ಟುವ ಮನೋ ಭಾವ ಬಳಸಿಕೊಂಡಿರುವುದು ಈಗಿನ ಜಗತ್ತಿನಲ್ಲಿ ಪತಿರಾಯ ಹಳ್ಳದ ಹಾದಿ ಹತ್ತಲು ಕಾರಣ ಎಂಬುದು ಮತ್ತೊಂದು ನಮ್ಮ ನಡುವಿನ ನೆಗೆಟಿವ್ ಥಿಂಕಿಂಗ್!.
ಸಕಾರಣವಿಲ್ಲದೆ ಸುಖಾ ಸುಮ್ಮನೆ ಗಂಡನನ್ನು, ಆತನ ಕರ್ತವ್ಯವನ್ನು ಗೊಣಗಾಡುತ್ತಿದ್ದರೆ ಆ ಗಂಡನಾದವನಿಗೆ ಹೇಗೆ ತಾನೇ ಸಹಿಸಿಕೊಳ್ಳುವ ಶಕ್ತಿ ಬರುತ್ತದೆ.


ಈ ವಿಚಾರವಾಗಿ ಎಷ್ಟೇ ಬರೆದರೂ ಅದು ಅತ್ಯಂತ ಕಡಿಮೆ ಅನಿಸುತ್ತದೆ. ಬದುಕಿನ ಬಹುತೇಕ ವಯಸ್ಸನ್ನು ಆತ ನನ್ನ ಮನೆ, ನನ್ನ ಕುಟುಂಬ, ನನ್ನ ಹೆಂಡತಿ, ನನ್ನ ಮಕ್ಕಳು ಎಂದು ದುಡಿಯುವ ಆ ಗಂಡುಮನಸಿಗೆ ಈ ವಟಹುಟ್ಟುವಿಕೆ ದೊಡ್ಡ ದುಷ್ಟ ಶಕ್ತಿಯಾಗಿ ಕಾಡುತ್ತದೆ. ಆತನಿಗೆ ಅನಾರೋಗ್ಯ ಸಮಸ್ಯೆಗೆ ಇದೊಂದು ಪ್ರೇರಕ ಶಕ್ತಿಯಾಗುತ್ತದೆ ಅಲ್ಲವೇ?
ಇಂತಹ ಅವಾಂತರಗಳ ಬಗ್ಗೆ ಪತಿ ಹೇಗೋ ಅದೇ ಬಗೆಯಲ್ಲಿ ಪತ್ನಿಯೂ ಸಹ ಕುಟುಂಬದ ಬೆಳವಣಿಗೆಗೆ ಪ್ರೇರಕ ಹಾಗೂ ಪ್ರೋತ್ಸಾಹದ ಮಾತನಾಡಬೇಕು. ನಗುಮುಖದಿಂದ ಮನೆಯ ಎಲ್ಲರನ್ನೂ ಪ್ರೀತಿಸಿ ಗೌರವಿಸುವ ಸೌಜನ್ಯದ ಮೂರ್ತಿಯಾಗಬೇಕು. ಇಂತಹ ಮಾತಾ ಗುಣದವರ ಸಂಖ್ಯೆ ಅತಿಹೆಚ್ಚಾಗಿದ್ದರೂ ಕೆಲವೇ ಕೆಲವು ಮನಸುಗಳಿಗೆ ಅರ್ಥವಾಗದಿರುವುದು ದುರಂತವೇ ಹೌದು.


ಈ ಬಗ್ಗೆ ಆ ಮಹಿಳಾ ಮನಸು ಅರ್ಥಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿರುವುದು ಇಂದಿನ ಅತ್ಯಗತ್ಯವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಪತಿರಾಯ ಎಲ್ಲಿ ಹೆದರದಿದ್ದರೂ ತನ್ನ ಪತ್ನಿಗೆ ಒಂದಿಷ್ಟು ಪ್ರೀತಿ ಜೊತೆಗೆ ಹೆದರಿಕೆಯನ್ನು ಇಟ್ಟುಕೊಂಡಿರುತ್ತಾನೆ. ಅದನ್ನು ಪತ್ನಿಯಾದವಳು ದುರುಪಯೋಗ ಪಡಿಸಿಕೊಳ್ಳಬಾರದಲ್ಲವೇ? ಇಂತಹ ಘಟನೆಗಳ ಸವಿಸ್ತಾರ ಮಾಹಿತಿಗಳು ಮುಂದೆ ನಿರೀಕ್ಷಿಸಿ.

Exit mobile version