Site icon TUNGATARANGA

ನಮ್ಗೊಂದು ಪತ್ರ, ಬೆಚ್ಚಿಬಿದ್ದ ಮನಸು!, ನೆಗಿಟೀವ್ ಥಿಂಕಿಂಗ್ ಅಂಕಣದ ಸ್ಪೆಷಲ್ ಐಟಂ ಓದಿ, ಓದುಗರೊಬ್ಬರ ಪ್ರತಿಕ್ರಿಯೆ ನೋಡಿ

ನೆಗೆಟಿವ್ ಥಿಂಕಿಂಗ್ ಅಂಕಣದ ಬಗ್ಗೆ ಸಾಕಷ್ಟು ಭಿನ್ನವಿಭಿನ್ನ ಸಕಾರಾತ್ಮಕ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ತುಂಗಾ ತರಂಗ ದಿನಪತ್ರಿಕೆಯ ಹಿಂದಿನ ಕಚೇರಿಯ ಬಾಗಿಲಲ್ಲಿ ಪತ್ರವೊಂದು ಕಾಣಿಸಿಕೊಂಡಿದ್ದು ವಿಶೇಷ. ಒಂದಿಷ್ಟು ಪತ್ರಿಕೆಗಳ ದಾಖಲಾತಿಗಳನ್ನು, ಪತ್ರಿಕೆಗಳನ್ನು ನೋಡಲೆಂದು ಅಲ್ಲಿಗೆ ಹೋಗಿದ್ದಾಗ ಬಾಗಿಲು ತೆಗೆದ ಕ್ಷಣ ಸ್ವಾಗತ ಕೋರಿದ್ದು ಆ ಪತ್ರದ ಕವರ್. ಕೇಸರಿ ಬಣ್ಣದ ಪೇಪರ್ ಕವರ್ ಅದಾಗಿದ್ದು, ಅದರ ಮೇಲೆ ಇದು ನಿಮ್ಮ ಈ ಬಾರಿಯ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯವಾಗಿ ಇದನ್ನು ಬರೆಯಿರಿ ಎಂದು ಕವರ್ ಮುಖಪುಟದಲ್ಲೇ ಬರೆದಿದ್ದು ವಿಶೇಷ ಎನಿಸಿದ್ದು, ಅನ್ಯ ಕೆಲಸಕ್ಕೆ ಹೋಗಿದ್ದ ಮನಸ್ಸು ಆ ಪತ್ರದೆಡೆ ಆಕರ್ಷಿಸಿದ್ದು ಸುಳ್ಳೇನಲ್ಲ. ಅದನ್ನ ತೆಗೆದು ನೋಡಿದಾಗ ಸುಧೀರ್ಘವಾಗಿ ಮೂರುವರೆ ಪುಟಗಳ ಪತ್ರ ಓದಲು ಸಾಕಷ್ಟು ತಾಳ್ಮೆ ಬೇಕು ಎನಿಸಿತು.

ಇದನ್ನೂ ಓದಿ

https://tungataranga.com/?p=34169
ನಮ್ಗೊಂದು ಪತ್ರ, ಬೆಚ್ಚಿಬಿದ್ದ ಮನಸು!, ನೆಗಿಟೀವ್ ಥಿಂಕಿಂಗ್ ಅಂಕಣದ ಸ್ಪೆಷಲ್ ಐಟಂ ಓದಿ, ಓದುಗರೊಬ್ಬರ ಪ್ರತಿಕ್ರಿಯೆ ನೋಡಿ
ಸಂಪೂರ್ಣ ಅಂಕಣ ಓದಲು ಮೇಲಿನ ಲಿಂಕ್ ಬಳಸಿ
ತುಂಗಾತರಂಗ ಗುಂಪಲ್ಲಿ ಇಲ್ಲದವರಿಲ್ಲಿ ಸೇರಿ
https://chat.whatsapp.com/IzhQLfWK8ud0fRtId61ehs


ಅದನ್ನು ತೆಗೆದುಕೊಂಡು ಬಂದು ಒಂದಿಷ್ಟು ಬಿಡುವು ಮಾಡಿಕೊಂಡು ನೋಡಿದಾಗ ನಿಜಕ್ಕೂ ಆಶ್ಚರ್ಯ ಹಾಗೂ ಗಾಬರಿ ಎನಿಸುವ ಸಂಗತಿಗಳು ಅಲ್ಲಿದ್ದವು. ಮದುವೆಯಾದ ಮರುದಿನವೇ ಹೆಂಡತಿಯ ಒಡವೆಯನ್ನು ಅಡವಿಟ್ಟ ಗಂಡನ ಕಥೆ ಎಂಬ ಸೂಕ್ಷ್ಮ ಮಾಹಿತಿ ಅದರಲ್ಲಿತ್ತು. ಈ ಪತ್ರದಲ್ಲಿ ಯಾರ ಹೆಸರನ್ನು ಬರೆಯದಿದ್ದರೂ ಸಹ ಇದು ಯಾವುದೋ ಒಬ್ಬ ವ್ಯಕ್ತಿಯನ್ನೇ ಉದ್ದೇಶ ಬರೆದಿದ್ದಾರೆ ಎನ್ನುವುದು ಸುಳ್ಳೇನಲ್ಲ. ಇದರ ಬಗ್ಗೆ ತುಂಗಾ ತರಂಗದ ನೆಗೆಟಿವ್ ಅಂಕಣ ಎಂದಿಗೂ ಯೋಚಿಸುವುದಿಲ್ಲ. ಬರೆಯುವ ಉದ್ದೇಶವನ್ನೂ ಹೊಂದಿಲ್ಲ.ಯಾರದ್ದೂ ಒಬ್ಬ್ಬ ಬಗ್ಗೆ ಬರೆಯುವಂತಹ ಯಾವುದೇ ವ್ಯಕ್ತಿಯ ಬಗ್ಗೆ ದುರುದ್ದೇಶದಿಂದ ಒಂದು ಅಕ್ಷರವನ್ನಾಗಲಿ, ಒಂದು ಪದವನ್ನಾಗಲಿ ಅಂಕಣದಲ್ಲಿ ಬರೆಯುವ ಚಿಂತನೆ ನಮಗಿಲ್ಲ.


ಮುಖ್ಯವಾಗಿ ಸಮಾಜದ ನಮ್ಮ ನಡುವಿನ ನೋವುಗಳನ್ನು ಪರಸ್ಪರ ಅನುಭವಿಸುವ ಯಾತನೆಗಳನ್ನು ಕೆಲವೇ ಕೆಲವು ಮೋಸಗಾರ ಮನಸುಗಳನ್ನು, ವಾಸ್ತವಗಳನೆಲ್ಲಾ ಚಿಂತಿಸಿ ಸಮಾಜಕ್ಕೆ ಒಂದಿಷ್ಟು ಮಾಹಿತಿಯನ್ನು ಕ್ರೂಡೀಕರಿಸಿ ಕೊಡುವ ಚಿಂತನೆ ಅಷ್ಟೇ ನಮ್ಮದು.
ನಾವು ಮೋಸ ಹೋಗಬಾರದು, ಯಾರನ್ನು ನಂಬಬೇಕು ನಂಬಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಿರುವ ಇಂದಿನ ಸಮಾಜದ ಬಹುತೇಕ ಮನಸುಗಳ ಆಟೋಟಗಳೇ ನೆಗಿಟೀವ್ ಥಿಂಕಿಂಗ್!?

ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.
ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಅಂಕಣದ ಹನ್ನೆರಡನೇ ಅಂಕಣದ ಮತ್ತೊಂದು ವಿಶೇಷ. ಇಂದಿನ ಎರಡು ಡಿಫರೆಂಟ್ ವಿಷಯ ಓದಿ, “ಸಂಪನ್ನರನ್ನ ಕೆಣಕಬ್ಯಾಡ್ರಿ..!”  ಓದಿ.
ನೆಗೆಟಿವ್ ಥಿಂಕಿಂಗ್ ಕಾಲಂಗೆ Starting ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.


ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.


ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ, ಹಣ ಮಾಯೆನಾ? ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ”, “ಒಳ್ಳೆಯವರಾದ್ರೆ ನಾಕಾಣೆ ಸಾಲ ಸಿಗೊಲ್ಲ” ಹಾಗೂ “ನಂಬಿಕೆ ದ್ರೋಹದ ಮನಸುಗಳೇ ಹೊಲಸು” ಕೆಟ್ಟ ಕಣ್ಣುಗಳಿಂದ ದೂರ ಇರ್ರಿ”” ಹಣದ ಲಾಲಸೆಗೆ ರಾಜಕಾರಣ” ಓದಿದ್ದೀರಿ.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳ
ಓದಿದ್ದೀರಿ. ಇಂದಿನ ವಿಶೇಷ ನೋಡಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯ ನಮಗೆ ಸದಾ ಇರಲಿ
   – ಸಂ

Exit mobile version