Site icon TUNGATARANGA

ಲಸಿಕಾಕರಣ ಗುರಿ ಸಾಧನೆ-ಆರ್‌ಬಿಎಸ್‌ಕೆ ಅನುಸರಣೆ ಕೈಗೊಳ್ಳಲು : ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ

ಶಿವಮೊಗ್ಗ, ಆ.30
 ಎಲ್ಲ ಅರ್ಹ ಮಕ್ಕಳಿಗೆ ಮೀಸಲ್ಸ್ ರುಬೆಲ್ಲಾ ಮತ್ತು ಇತರೆ ಲಸಿಕೆಗಳನ್ನು ಕಾಲ ಕಾಲಕ್ಕೆ ನೀಡಬೇಕು. ಲಸಿಕಾ ವಂಚಿತ ಹಾಗೂ ಬಿಟ್ಟುಹೋದ ಮಕ್ಕಳನ್ನು ತಾಲ್ಲೂಕುಗಳ ಹಂತದಲ್ಲೇ ಗುರುತಿಸಿ, ಪಟ್ಟಿ ಮಾಡಿ ಲಸಿಕೆ ನೀಡುವ ಮೂಲಕ ನಿಗದಿತ ಗುರಿಯನ್ನು ಸಾಧಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


 ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾ ಆರೋಗ್ಯ ಸಂಘ ಹಾಗೂ ವಿವಿಧ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮೀಸಲ್ಸ್, ರುಬೆಲ್ಲಾ ಮತ್ತು ಇತರೆ ಲಸಿಕೆಗಳನ್ನು ಸರಿಯಾದ ವೇಳೆಗೆ ನೀಡದಿದ್ದರೆ ರೋಗ ನಿರ್ಮೂಲನೆ ನಿಗದಿತ ಸಮಯದೊಳಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು


 ಡಬ್ಲುö್ಯಹೆಚ್‌ಓ ಕನ್ಸಲ್ಟೆಂಟ್ ಡಾ.ಹರ್ಷಿತ್ ಹೆಚ್, ಜಿ ಮಾತನಾಡಿ, ಮೀಸಲ್ಸ್ ರುಬೆಲ್ಲಾ ಲಸಿಕೆಯನ್ನು ಶೇ.95 ಹಾಕಬೇಕೆಂದು ಗುರಿಯನ್ನು ನೀಡಲಾಗಿದ್ದು ಜಿಲ್ಲೆಯಲ್ಲಿ ಶೇ. 89 ಲಸಿಕೆ ನೀಡಲಾಗಿದೆ. ಮುಖ್ಯವಾಗಿ ಶಿವಮೊಗ್ಗ ನಗರ ಭಾಗದಲ್ಲಿ ಲಸಿಕೆ ವಂಚಿತರನ್ನು ಹೆಚ್ಚಾಗಿ ಕಾಣಬಹುದು. ಲಸಿಕಾ ವಂಚಿತರು, ಡೋಸ್‌ಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಹಾಗೂ ಶೇ.80 ಜ್ವರ ಮತ್ತು ದದ್ದು ಪ್ರಕರಣಗಳನ್ನು ಮೀಸಲ್ಸ್ ರುಬೆಲ್ಲಾ ಪರೀಕ್ಷೆಗಾಗಿ 5 ದಿನಗಳ ಒಳಗೆ ಮಾದರಿಯನ್ನು ವೈರಾಲಜಿಗೆ ಕಳುಹಿಸಕೊಡಬೇಕು ಎಂದು ತಿಳಿಸಿದರು.
 ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಲಸಿಕಾಕರಣ ನಿಗದಿತ ಗುರಿಗಿಂತ ಶೇ.6 ಕೊರತೆಯಾಗಿದ್ದು, ಇದನ್ನು ಸರಿಪಡಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆ/ನರ್ಸಿಂಗ್ ಹೋಂ ಗಳಲ್ಲಿ ಎಂಆರ್ ಲಸಿಕೆಗಳ ಕೊರತೆಯಿಂದ ನೀಡಿಲ್ಲವೆಂದು ಹೇಳಲಾಗುತ್ತಿದ್ದು,

ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಯಿಂದ ಉಚಿತವಾಗಿ ಲಸಿಕೆ ಪಡೆಯಬಹುದು. ತಾಲ್ಲೂಕುಗಳ ಹಂತದಲ್ಲೇ ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಈ ವ್ಯತ್ಯಾಸವನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಖಾಸಗಿ ನರ್ಸಿಂಗ್ ಹೋಂ ಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ತಾಲ್ಲೂಕು ವೈದ್ಯಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದರು.


 ಅಂಗನವಾಡಿಗಳಲ್ಲಿ ಮತ್ತು ಶಾಲೆಗಳಲ್ಲಿ 1 ರಿಂದ 10 ವರ್ಷದೊಳಗಿನ ಮಕ್ಕಳಿಗೆ ನಿಗದಿಪಡಿಸಲಾದ ಲಸಿಕೆಗಳನ್ನು ಹಾಕಲಾಗಿದೆಯೇ ಎಂದು ಪರೀಕ್ಷಿಸಿ ಆರೋಗ್ಯ ಇಲಾಖೆಗೆ ವರದಿ ನೀಡಬೇಕು. ಹಾಗೂ ಲಸಿಕಾಕರಣದ ಕುರಿತು ಸ್ಥಳೀಯರಿಂದ ಅರಿವು ಮತ್ತು ಎಲ್ಲೆಡೆ ಜಾಗೃತಿ ಮೂಡಿಸುವ ಕೆಲಸ ಇನ್ನೂ ಪರಿಣಾಮಕಾರಿ ಆಗಬೇಕು. ಪ್ರಸ್ತುತ ಹೆಚ್‌ಎಂಐಎಸ್ ಅಂತಹ ಆನ್‌ಲೈನ್ ಪೋರ್ಟಲ್ ಮೂಲಕ ಲಸಿಕಾವಂಚಿತ ಮಕ್ಕಳ ವಿವರ ಸುಲಭವಾಗಿ ಲಭ್ಯವಿದ್ದು, ಅನುಸರಣೆ ಮೂಲಕ ಆ ಮಕ್ಕಳಿಗೆ ಲಸಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಹಾಗೂ ಮೀಸಲ್ಸ್ ರುಬೆಲ್ಲಾ ಪ್ರಕರಣ ಪತ್ತೆ ಹಚ್ಚಲು ಎಲ್ಲ ರೀತಿಯ ಜ್ವರ ಮತ್ತು ದದ್ದು ಪ್ರಕರಣಗಳಲ್ಲಿ ಸ್ಯಾಂಪಲ್‌ನ್ನು ವೈರಾಲಜಿಗೆ 5 ದಿನಗಳ ಒಳಗಾಗಿ ಕಳುಹಿಸಿಕೊಡಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.


 ಜಿಲ್ಲೆಯಲ್ಲಿ ಶೇ.64 ಹೆರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ, ಶೇ 36 ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿದೆ. ಶೇ.47 ಸಿಸೇರಿಯನ್ ಹೆರಿಗೆಗಳು ಆಗುತ್ತಿದ್ದು ಜನನದಲ್ಲಿ 958 ಲಿಂಗಾನುಪಾತವಿದೆ. ಕಳೆದ ವರ್ಷಕ್ಕೆ ಹೋಲಿಸಿದಿದರೆ ಸಿಸೇರಿಯನ್ ಪ್ರಮಾಣ ಕಡಿಮೆ ಆಗಿದೆ. ಹೆರಿಗೆ ಮಾಡಿಸಲು ಎಲ್ಲ ಅನುಕೂಲಗಳನ್ನು ಹೊಂದಿರುವ ಪಿಹೆಚ್‌ಸಿ ಮತ್ತು ಸಿಹೆಚ್‌ಸಿಗಳಲ್ಲಿ ಹೆಚ್ಚಿನ ಹೆರಿಗೆ ಮಾಡಿಸಲು ಕ್ರಮ ವಹಿಸಬೇಕು. ಹಾಗೂ ನಿಯಮಿತವಾಗಿ ಗರ್ಭಿಣಿ ದಾಖಲಾತಿಯನ್ನು, ತಾಯಿ ಕಾರ್ಡ್ ಇತರೆ ವ್ಯವಸ್ಥೆಯನ್ನು ಆಶಾ, ಅಂಗನವಾಡಿ ಸೇರಿದಂತೆ ಸಂಬAಧಿಸಿದ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು. ಹಾಗೂ ಗರ್ಭಪಾತಕ್ಕೆ ಇರುವ ಕಾರಣಗಳನ್ನು ತಿಳಿದು ಗರ್ಭಪಾತ ಪ್ರಮಾಣವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.


 ಆರ್‌ಬಿಎಸ್‌ಕೆ ಕಾರ್ಯಕ್ರಮದಡಿ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಶೇ.99 ಆಗಿದೆ. ಆದರೆ ತಪಾಸಣೆ ವೇಳೆ ಪಟ್ಟಿ ಮಾಡಲಾದ ಮಕ್ಕಳಿಗೆ ಅಗತ್ಯವಾದ ಆಪ್ತಸಮಾಲೋಚನೆ, ಚಿಕಿತ್ಸೆ, ಶಸ್ತçಚಿಕಿತ್ಸೆ ಇತರೆ ಉಲ್ಲೇಖಿಸಲಾದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆಯೇ ಎಂದು ಆರ್ ಸಿಹೆಚ್‌ಓ ಅನುಸರಣೆ ಕೈಗೊಂಡು ಪಟ್ಟಿ ಮಾಡಲಾದ ಎಲ್ಲ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ತಿಳಿಸಿದರು.
 ನವಜಾತ ಶಿಶು ಮರಣ ಪ್ರಮಾಣವನ್ನು ಪ್ರತಿ ತಿಂಗಳು ಕಟ್ಟುನಿಟ್ಟಾಗಿ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಂಡು ಮರಣ ಪ್ರಮಾಣವನ್ನು ತಗ್ಗಿಸಬೇಕು ಎಂದು ಸೂಚಿಸಿದರು.


 ಜಿಲ್ಲೆಯಲ್ಲಿ ನಿಯಮಿತವಾಗಿ ಕೋಟ್ಪಾ ಕಾಯ್ದೆಯಡಿ ತಂಬಾಕು ದಾಳಿ ಹಾಗೂ ತಂಬಾಕು ಮುಕ್ತ ಶಾಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ಗೋಪಾಳ ಮತ್ತು ತೀರ್ಥಹಳ್ಳಿ ಎರಡು ಕಡೆ ಅನಧಿಕೃತ ಹುಕ್ಕಾಬಾರ್ ಇದ್ದು ಅದನ್ನು ಮುಚ್ಚಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
 ತಾಯಿ ಮರಣ ಆಡಿಟ್ ಮಾಡಿದ ಜಿಲ್ಲಾಧಿಕಾರಿಗಳು ವೈದ್ಯಕೀಯ ನೆರವು ಮತ್ತು ವೈದ್ಯರ ನಿರ್ಲಕ್ಷö್ಯದಿಂದ ಯಾವುದೇ ತಾಯಿ ಮರಣ ಸಂಭವಿಸದAತೆ ಎಲ್ಲ ಆಸ್ಪತ್ರೆಗಳಲ್ಲಿ ಎಚ್ಚರಿಕೆ ವಹಿಸಿ ಸೂಕ್ತ ಕ್ರಮಗಳನ್ನು ಹಾಗೂ ತಾಯಿ ಮರಣ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆಗಳನ್ನು ನೀಡಿದರು.
 ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕುಗಳಲ್ಲಿನ ಸರ್ಕಾರಿ ಆಸ್ಪತ್ರೆಯ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಿಸುತ್ತಿರುವ ಸುಶೃತ ಸಂಸ್ಥೆಗೆ ಹೊಸ ನಿಯಮದಿಂದಾಗಿ ಯಾವುದೇ ಆರ್ಥಿಕ ಹೊರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
 ಜಿಲ್ಲಾ ಅಂಧತ್ವ ನಿವಾರಣೆ, ಕುಷ್ಟರೋಗ ಕಾರ್ಯಕ್ರಮ ಸೇರಿದಂತೆ ರಾಷ್ಟಿçÃಯ ಆರೋಗ್ಯ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಿದರು.
 ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್, ಡಿಹೆಚ್‌ಓ ಡಾ.ನಟರಾಜ್, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಬೋಧನಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಆರ್‌ಸಿಹೆಚ್‌ಓ ಡಾ.ನಾಗರಾಜ ನಾಯ್ಕ್, ಡಾ.ಗುಡುದಪ್ಪ, ಡಾ.ಕಿರಣ್ ಸೇರಿದಂತೆ ವಿವಿಧ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು, ತಾಲ್ಲೂಕುಗಳ ಟಿಹೆಚ್‌ಓ ಗಳು, ಆರ್‌ಬಿಎಸ್‌ಕೆ ವೈದ್ಯರು ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

Exit mobile version