Site icon TUNGATARANGA

ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಟ್ರೇಡ್ ಮೇಳ:ಪಾಲಿಕೆ ಆಯುಕ್ತರಾದ ಡಾ. ಕವಿತಾ ಯೋಗಪ್ಪನವರ್

ಶಿವಮೊಗ್ಗ: ನಗರದ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವುದು ಹಾಗೂ ವ್ಯಾಪಾರದ ಲೈಸೆನ್ಸ್ ಪ್ರಕ್ರಿಯೆ ಸುಲಭಗೊಳಿಸುವ ಆಶಯದಿಂದ ಮೇಳ ಆಯೋಜಿಸಿದ್ದು, ಶಿವಮೊಗ್ಗ ನಗರದ ಉದ್ಯಮಿಗಳು ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಕವಿತಾ ಯೋಗಪ್ಪನವರ್ ಹೇಳಿದರು.


ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಾಲ್ಕನೇ ಬಾರಿ ಆಯೋಜಿಸಿದ್ದ “ಟ್ರೇಡ್ ಲೈಸೆನ್ಸ್ ಮೇಳ” ಉದ್ಘಾಟಿಸಿ ಮಾತನಾಡಿ, ಲೈಸೆನ್ಸ್ ಪಡೆಯಲು

ಉದ್ಯಮಿಗಳಿಗೆ ಆಗುವ ತೊಂದರೆಗಳನ್ನು ಪರಿಹರಿಸುವ ಆಶಯದಿಂದ ಮೇಳ ನಡೆಸುತ್ತಿದ್ದು, ದಾಖಲೆಗಳ ಜತೆಯಲ್ಲಿ ಅರ್ಜಿ ಸಲ್ಲಿಸಿ ಕೂಡಲೇ ಲೈಸೆನ್ಸ್ ಪಡೆಯಬೇಕು. ಇದರಿಂದ ಉದ್ಯಮಿಗಳಿಗೆ ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದರು.


ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಘದ ಸಂಯುಕ್ತ ಆಶ್ರಯದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋ ಕ್ಯಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ಟ್ರೇಡ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು

.ಅಧ್ಯಕ್ಷ ಎನ್ ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂರು ದಿನಗಳ ಕಾಲ ಟ್ರೇಡ್ ಲೈಸೆನ್ಸ್ ಮೇಳ ನಡೆಯುತ್ತಿದ್ದು, ವ್ಯಾಪಾರ ವಹಿವಾಟು ನಡೆಸುವವರು ಲೈಸೆನ್ಸ್ ಪಡೆದುಕೊಳ್ಳಬೇಕು. ಕಳೆದ ಸಾಲಿನಲ್ಲಿ

ಸಾವಿರಕ್ಕೂ ಅಧಿಕ ವ್ಯಾಪಾರಸ್ಥರು ಮೇಳದ ಪ್ರಯೋಜನ ಪಡೆದಿದ್ದರು. ಪಾಲಿಕೆ ಸಹಯೋಗದಲ್ಲಿ ನಡೆಯುತ್ತಿರುವ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.


ಪಾಲಿಕೆ ಅಧಿಕಾರಿಗಳು, ಆರೋಗ್ಯ ನೀರಿಕ್ಷಕರು ಹಾಗೂ ಸಿಬ್ಬಂದಿ ಸ್ಥಳದಲ್ಲಿಯೇ ಅರ್ಜಿದಾರರಿಂದ ದಾಖಲೆಗಳನ್ನು ಪಡೆದುಕೊಂಡು ಪರಿಶೀಲಿಸಿ ಲೈಸೆನ್ಸ್ ನೀಡುವ ಕೆಲಸ ಮಾಡುತ್ತಿದ್ದಾರೆ. ಮೂರು ದಿನ ( ಬುಧವಾರ. ಗುರುವಾರ ಮತ್ತು ಶುಕ್ರವಾರ ) ನಡೆಯುವ ಮೇಳದ ಸದುಪಯೋಗ ವ್ಯಾಪಾರಸ್ಥರು ಪಡೆದುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ ಗೋಪಿನಾಥ್ ಕಾರ್ಯದರ್ಶಿ ವಸಂತ್ ಹೋಬಳಿ ದಾರ್ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕರಾದ ಗಣೇಶ್ ಅಂಗಡಿ, ಮಂಜೇಗೌಡ,ಬಿ ಪ್ರದೀಪ್ ವಿ ಎಲಿ. ಮರಿಸ್ವಾಮಿ ಪರಮೇಶ್ವರ್ ಈ , ಪಾಲಿಕೆ ಆರೋಗ್ಯ ನೀರಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version