Site icon TUNGATARANGA

ನೈತಿಕತೆ ಆಧಾರದ ಮೇಲೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ,ಆ.೨೭: ನೈತಿಕತೆ ಆಧಾರದ ಮೇಲೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ನಿರಾಪರಾಧಿ ಎಂದಾದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಸರ್ಕಾರಕ್ಕೆ ಬೆಂಬಲದ ಕೊರತೆಯಿದೆ ಎಂದು ನಾವು ಹೇಳಿಲ್ಲ, ರಾಜ್ಯಪಾಲರ ಮುಂದೆ ಫೆರೆಡ್ ಮಾಡುವ ಅವಶ್ಯಕತೆಯೂ ಇಲ್ಲ, ಮೂಡಾ ಅಧಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂಬ ನಿಮ್ಮ ಮೇಲಿನ ಆರೋಪದ ನೈತಿಕ ಹೊಣೆಹೊತ್ತು ರಾಜೀನಾಮೆ ಕೇಳಿದ್ದೇವೆ ಎಂದರು.


ಆರ್‌ಟಿಐ ಕಾರ್ಯಕರ್ತರನ್ನು ಬೀದಿಯಲ್ಲಿ ಹೋಗುವವರು ಎಂದು ಹಗುರವಾಗಿ ಮಾತನಾಡಿದ್ದಾರೆ. ಆದರೆ, ಬೀದಿಯಲ್ಲಿ ಇರುವರಿಂದಲೇ ನಿಮಗೆ ಅಧಿಕಾರ ಸಿಕ್ಕಿದ್ದು ಎಂಬುವುದನ್ನು ಮರೆಯಬೇಡಿ ಎಂದರು.
ಶಾಸಕ ರವಿಗಾಣಿಗ ಅವರ ಆರೋಪವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.


ಜೋಗದಲ್ಲಿ ಪ್ರವಾಸಿಗಳಿಗೆ ಶುಲ್ಕ ಹೆಚ್ಚಳಕ್ಕೆ ಸಂಬಂದಿಸಿದಂತೆ ಮೊದಲು ಮೂಲಭೂತ ಸೌಲಭ್ಯ ಒದಗಿಸಲಿ, ಅಲ್ಲಿ ಹೋಟೆಲ್, ಇನ್ನಿತರ ಕಟ್ಟಡಗಳು, ಪೂರ್ಣಗೊಳ್ಳಲು ಕನಿಷ್ಟ ೪ ತಿಂಗಳು ಬೇಕು. ಮುಗಿದ ಮೇಲೆ ಬೇಕಾದರೆ ಶುಲ್ಕ ಹೆಚ್ಚಿಸಲಿ ಪ್ರಕೃತಿ ವೀಕ್ಷಣೆಗೆ ಜೋಗದಲ್ಲಿ ೪೫ ಎಕರೆ ಮಾತ್ರ ರೆವಿನ್ಯೂ ಭೂಮಿ ಇದ್ದು, ಜನಸ್ತೋಮ ಹೆಚ್ಚಳವಾದಾಗ ವೀಕ್ಷಣೆಗೆ ಸ್ವಲ್ಪ ಸಮಸ್ಯೆಯಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.


ಶಿಕಾರಿಪುರ ಟೋಲ್‌ಗೇಟ್‌ಗೆ ಸಂಬಂಧಿಸಿದಂತೆ ೬೦ ಕಿ.ಮೀ. ವ್ಯಾಪ್ತಿಯಲ್ಲಿ ಈ ರಾಜ್ಯ ಸರ್ಕಾರ ಬಂದ ಮೇಲೆ ನಿಯಮ ಮೀರಿ ೨ ಟೋಲ್‌ಗೇಟ್ ಮಾಡಿ ಲೂಟಿ ಮಾಡುತ್ತಿದ್ದಾರೆ. ರೈತರಿಗೂ ತೊಂದರೆಯಾಗಿದೆ. ದುರುಪಯೋಗ ಮಾಡಿದ್ದಲ್ಲಿ ನಾಲ್ಕು ಪಟ್ಟು ಪೆನಾಲ್ಟಿ ಹಾಕಿ ಟೋಲ್‌ಗೇಟ್ ಕಂಪನಿ ಕಂಟ್ರಾಕ್ಟ್‌ನ್ನು ರದ್ದುಪಡಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಕೂಡಲೇ ಸರ್ಕರ ಟೋಲ್‌ನ್ನು ಎತ್ತಂಗಡಿ ಮಾಡದಿದ್ದರೆ ಬಿಜೆಪಿ ಗಂಭೀರವಾಗಿ ತೆಗೆದುಕೊಂಡು ನಾಡಿದ್ದು ಮುತ್ತಿಗೆಯಾಕಲಿದೆ ಎಂದರು.


ದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಪರಪ್ಪನ ಆಗ್ರಹಾರದ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡುವುದಾಗಿ ಸಿ.ಎಂ. ಹೇಳಿದ್ದಾರೆ ಎಂದ ಅವರು, ವಾಲ್ಮೀಕಿ ನಿಗಮದ ಅಧಿಕಾರಿ ಡೆತ್‌ನೋಟ್ ಬರೆದಿಟ್ಟ ಪ್ರಾಣ ತೆತ್ತಿದ್ದಾರೆ. ಸರ್ಕಾರದ ಭ್ರಷ್ಟಚಾರವನ್ನು ಬಯಲಿಗೆಳೆದಿದ್ದಾರೆ. ಎಸ್.ಐ.ಟಿ.ತನಿಖೆಯಾಗಿದೆ. ಮಂತ್ರಿಯ ಹೆಸರನ್ನು ಬಿಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ, ಜನ ಉತ್ತರ ನೀಡುತ್ತಾರೆ ಎಂದರು.

Exit mobile version