Site icon TUNGATARANGA

ಹುಣಸೋಡು ಸ್ಪೋಟ ಪ್ರಕರಣ : ನಾಲ್ವರು ಆರೋಪಿಗಳು ಅರೆಸ್ಟ್

ಕಲ್ಲು ಗಣಿಗಾರಿಕೆ ಬಳಿ ಅವಾಂತರ ನಡೆದ ಸ್ಥಳ

ಶಿವಮೊಗ್ಗ :

ಶಿವಮೊಗ್ಗ ಸಮೀಪದ ಹುಣಸೋಡು ಕಲ್ಲು ಗಣಿ ಪ್ರದೇಶದಲ್ಲಿ ನಡೆದಂತಹ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಶಿವಮೊಗ್ಗ ಪೂರ್ವ ವಲಯದ ಐಜಿಪಿ ಹೇಳಿಕೆ ನೀಡಿದ್ದು, ‘ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸ್ಪೋಟಕ್ಕೆ ಸಂಬಂಧಿಸಿದಂತೆ ಆರೋಪಿ ಅವಿನಾಶ್ ಕುಲಕರ್ಣಿ ಬಂಧನವಾಗಿಲ್ಲ, ಸ್ಪೋಟಕ್ಕೆ ಜಿಲೆಟಿನ್ ಕಡ್ಡಿ ಬಳಕೆ ಮಾಡಿರುವುದು ಧೃಡವಾಗಿದೆ ಎಂದು ಶಿವಮೊಗ್ಗ ಪೂರ್ವ ವಲಯದ ಐಜಿಪಿ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ ತಾಲೂಕಿನ ಹುಣಸಗೋಡು ಗ್ರಾಮದಲ್ಲಿ ಡೈನಾಮೈಟ್‌ ಲಾರಿ ಸ್ಫೋಟಗೊಂಡು 6ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದರು. ನಂತರ ಸ್ಪೋಟಗೊಂಡಿರುವ ಹುಣಸಗೋಡು ಕಲ್ಲುಕ್ವಾರಿ ಬಳಿ ಮತ್ತಷ್ಟು ಸ್ಪೋಟಕ ವಸ್ತುಗಳು ಪತ್ತೆಯಾಗಿತ್ತು. ಕ್ವಾರಿ ಬಳಿಯ ರೂಮ್ ಒಂದರಲ್ಲಿ ಜೀವಂತ ಸ್ಪೋಟಕಗಳು ಪತ್ತೆಯಾಗಿತ್ತು. . ಡೆಟೋನೇಟರ್, ಜೀವಂತ ಜಿಲೆಟಿನ್ ಗಳು ಹಾಗೂ ಎಲೆಕ್ಟ್ರಿಕಲ್ ಎಕ್ಸ್ ಪ್ಲೋಸಿವ್ ಸ್ಪೋಟಕ ವಸ್ತುಗಳು ಕ್ವಾರಿಯ ರೂಂನಲ್ಲಿ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂಬಂಧಿಸಿದಂತೆ ಆರೋಪಿ ಅವಿನಾಶ್ ಕುಲಕರ್ಣಿ ಬಂಧನವಾಗಿಲ್ಲ, ಸ್ಪೋಟಕ್ಕೆ ಜಿಲೆಟಿನ್ ಕಡ್ಡಿ ಬಳಕೆ ಮಾಡಿರುವುದು ಧೃಡವಾಗಿದೆ ಎಂದು ಶಿವಮೊಗ್ಗ ಪೂರ್ವ ವಲಯದ ಐಜಿಪಿ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ ತಾಲೂಕಿನ ಹುಣಸಗೋಡು ಗ್ರಾಮದಲ್ಲಿ ಡೈನಾಮೈಟ್‌ ಲಾರಿ ಸ್ಫೋಟಗೊಂಡು 6ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದರು. ನಂತರ ಸ್ಪೋಟಗೊಂಡಿರುವ ಹುಣಸಗೋಡು ಕಲ್ಲುಕ್ವಾರಿ ಬಳಿ ಮತ್ತಷ್ಟು ಸ್ಪೋಟಕ ವಸ್ತುಗಳು ಪತ್ತೆಯಾಗಿತ್ತು. ಕ್ವಾರಿ ಬಳಿಯ ರೂಮ್ ಒಂದರಲ್ಲಿ ಜೀವಂತ ಸ್ಪೋಟಕಗಳು ಪತ್ತೆಯಾಗಿತ್ತು. ಡೆಟೋನೇಟರ್, ಜೀವಂತ ಜಿಲೆಟಿನ್ ಗಳು ಹಾಗೂ ಎಲೆಕ್ಟ್ರಿಕಲ್ ಎಕ್ಸ್ ಪ್ಲೋಸಿವ್ ಸ್ಪೋಟಕ ವಸ್ತುಗಳು ಕ್ವಾರಿಯ ರೂಂನಲ್ಲಿ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹುಣಸೋಡು ಸ್ಪೋಟಕ್ಕೆ ಜಿಲೆಟಿನ್, ಡಿಟೋನೇಟರ್ ಬಳಕೆ ದೃಢ

ಸ್ಪೋಟಕ್ಕೆ ಜಿಲೆಟಿನ್ ಕಡ್ಡಿ, ಡಿಟೋನೇಟರ್ ಬಳಕೆಯಾಗಿರುವುದು ದೃಢಪಟ್ಟಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಸುಧಾಕರ್, ನರಸಿಂಹ, ಮುಮ್ತಾಜ್ ಅಹಮದ್ ಮತ್ತು ರಶೀದ್ ಎಂಬವರನ್ನು ಬಂಧಿಸಲಾಗಿದೆ.

ಜಿಲೆಟಿನ್ ಕಡ್ಡಿ, ಡಿಟೋನೇಟರ್ ವಿತರಣೆ ಸಂದರ್ಭದಲ್ಲಿ ಸ್ಪೋಟಗೊಂಡಿದ್ದು, ಘಟನೆಯಲ್ಲಿ ಎರಡು ವಾಹನಗಳು ಸ್ಫೋಟಗೊಂಡಿವೆ. ನಾಲ್ವರ ಬಂಧನವಾಗಿದ್ದು, ಇನ್ನೂ ಹಲವರನ್ನು ಬಂಧಿಸಲಾಗುವುದು ಎಂದು ಶಿವಮೊಗ್ಗದಲ್ಲಿ ಪೂರ್ವ ವಲಯ ಐಜಿಪಿ ರವಿ ಹೇಳಿದ್ದಾರೆ.

Exit mobile version