Site icon TUNGATARANGA

ಸ್ಫೋಟ ಪ್ರಕರಣ: ಕ್ರಷರ್‌ಗಳ ಸ್ಥಳಾಂತರದ ಸುಳಿವು

ಶಿವಮೊಗ್ಗ,ಜ.23:
ಹುಣಸೋಡು ಅಬ್ಬಲಿಗೆರ, ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಕಲ್ಲುಗಂಗೂರು ಭಾಗದ ಎಲ್ಲ ಕ್ರಷರ್‌ಗಳನ್ನೂ ಸುರಕ್ಷಾ ವಲಯಕ್ಕೆ ಸ್ಥಳಾಂತರಿಸುವ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಹುಣಸೋಡು ಸ್ಫೋಟದ ಸ್ಥಳಕ್ಕೆ ಇಂದು ಭೇಟಿ ನೀಡಿ, ಪರಿಶೀಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಗಣಿಗಾರಿಕೆ ಪ್ರದೇಶ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿರುವ ಕಾರಣ ಸ್ಥಳಾಂತರಿಸಬೇಕು ಎನ್ನುವ ಬೇಡಿಕೆ ಇದೆ. ಈಗ ಕಾಲಕೂಡಿ ಬಂದಿದೆ ಎಂದು ಸ್ಥಳಾಂತರವನ್ನು ಖಚಿತಪಡಿಸಿದರು.

ಈ ಸ್ಥಳಾಂತರ ವಿಷಯ ಕಳೆದ ಮೂರು ವರುಷದ ಹಿಂದೆಯೇ ಚರ್ಚೆಗೆ ಬಂದಿದ್ದು, ಪ್ರಭಾವಿ ರಾಜಕಾರಣಿಗಳ ಕುಂತತ್ರದಾಟದಿಂದ ಸ್ಥಗಿತಗೊಂಡಿತ್ತು

.

Exit mobile version