Site icon TUNGATARANGA

ಕೆಟ್ಟ ಕಂಗಳಿಂದ ದೂರ ಇರ್ರೀ/ ಗಜೇಂದ್ರಸ್ವಾಮಿ ಅವರ ಇಂದಿನ ನೆಗಿಟೀವ್ ಥಿಂಕಿಂಗ್! -9 ಅಂಕಣ ಓದಿ


ವಾರದ ಅಂಕಣ- 9


ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ

ಇನ್ನೊಬ್ಬರ ಸಾಧನೆ, ಬೆಳವಣಿಗೆ, ಶ್ರೇಯಸ್ಸು, ಅಭಿವೃದ್ಧಿ ಕಂಡು ಸಮಾಜದ ಬಹುತೇಕ ಮನುಜ ಮನಸುಗಳು ಅದಕ್ಕೆ ಶಹಬ್ಬಾಸ್ ಗಿರಿ ಕೊಡುತ್ತಾರೆ ಅಭಿನಂದಿಸುತ್ತಾರೆ ಶುಭವಾಗಲಿ ಎಂದು ಹಾರೈಸುತ್ತಾರೆ. ಇನ್ನಷ್ಟು ಬೆಳೆಯಲ್ಲಿ ಎಂದು ಮನ ತುಂಬಿ ಮಾತನಾಡುತ್ತಾರೆ. ಆದರೆ ಕೆಲವೇ ಕೆಲವು ವಿಕೃತ ಮನಸ್ಸಿನ ವ್ಯಕ್ತಿಗಳಿಂದ ಅಭಿನಂದಿಸುವ ಮನಸ್ಸಿಲ್ಲದಿದ್ದರೂ, ಸುಮ್ಮನಿರದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಕಣ್ಣಲ್ಲೇ ಇಡೀ ಶಾಪ ಹಾಕುವ ವ್ಯಕ್ತಿಗಳಿದ್ದಾರೆ ಎಂಬುದನ್ನು ಮರೆಯಬಾರದು.


ಅದಕ್ಕೆ ಹೇಳೋದು ಕೆಲವರ ಕೆಟ್ಟ ಕಣ್ಣು ನಮ್ಮ ಮೇಲೆ ಬೀಳಬಾರದು. ಸಾಧ್ಯವಾದರೆ ಪ್ರಶಂಶಿಸಿ, ಅಸಾಧ್ಯವಾದರೆ ಸುಮ್ಮನಿರಿ ಎನ್ನುವ ಮನೋಭಾವ ಇಂದಿನ ಜನರಲ್ಲಿ ಬೆಳೆದಿರುವುದು ಇವತ್ತಿನ ಪ್ರಸ್ತುತ ನೆಗೆಟಿವ್ ಎಂದರೆ ತಪ್ಪಾಗಲಿಕ್ಕಿಲ್ಲ.
ಕೆಲವೇ ಕೆಲವು ವ್ಯಕ್ತಿಗಳು ನೋಡುವ ನೋಟದಲ್ಲೇ ‘ಮನೆಹಾಳು’ ಮಾಡುವ ವ್ಯಕ್ತಿತ್ವವನ್ನು ತೋರುತ್ತಾರೆ. ಸದ್ದಿಲ್ಲದೆ ಸಾಧಿಸಿದವನು, ಬೆಳೆದವನು, ಅವರ ಕೆಂಗಣ್ಣಿಗೆ ತುತ್ತಾಗಿ ನರಳುವುದು ಬಹುತೇಕ ವಾಡಿಕೆಯಾಗಿರುವುದು ಇಂದಿನ ಜನಸಾಮಾನ್ಯರಲ್ಲಿ ಕೇಳಿ ಬರುತ್ತಿರುವ ಕಟು ಸತ್ಯ.
ಕೇವಲ ಹಣಕಾಸಿನ ವಿಷಯಕ್ಕೆ ಕೆಲ

ಇಂತಹ ಕೆಲ ಕುಟುಕು ಚೇಳು ಮನಸ್ಸಿನ ವ್ಯಕ್ತಿಗಳಿರುತ್ತಾರೆ ಎಂದುಕೊಳ್ಳುವುದು ತಪ್ಪಾಗುತ್ತದೆ. ಯಾವುದೇ ಪ್ರಶಸ್ತಿ, ಫಲಕ, ಬಹುಮಾನ, ಪ್ರಶಂಸೆ, ಸಾಧನೆ ಮಾಡಿದಾಗ ಎಲ್ಲದರಲ್ಲೂ ಕಾಲೆಳೆಯುವ ಎಷ್ಟು ಜನರಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಅವರ ಕಣ್ಣ ನೋಟದಲ್ಲಿ ತಮ್ಮತನವನ್ನು ಮುಂದಿಟ್ಟುಕೊಂಡು ಸಾಧಕರ ಹಾದಿಯನ್ನು ನಿರ್ಣಾಮ ಮಾಡುವಂತಹ ಕೆಟ್ಟ ಕಣ್ಣು ಹೊಂದಿರುತ್ತಾರೆ ಎನ್ನುವುದು ಬಹುತೇಕ ಜನರ ಮಾತು.


ಇಲ್ಲೊಂದು ವಿಷಯ ಅತ್ಯಂತ ಸ್ಪಷ್ಟವಾಗಿ ಹೇಳಬೇಕು ನಿಜಕ್ಕೂ ನೊಂದವನು ಸಾಧಕನಾಗಿರುವುದು ಸದ್ದಿಲ್ಲದೆ ಪ್ರಯತ್ನಗಳಿಂದ ಬೆಳೆದವನಾಗಿರುವುದು ಸತ್ಯವಲ್ಲವೇ? ಇದನ್ನು ಸ್ವಚಿಂತನೆಯಲ್ಲಿ ಬಳಸಿಕೊಳ್ಳುವುದನ್ನು ದುರಂತ ಎನ್ನುವುದಾದರೆ ಕೆಲವು ತಮ್ಮ ಹಿತಾಸಕ್ತಿ ಗೋಸ್ಕರ ಬೆಳೆಯುವ ನಾಟಕ ಮಾಡುತ್ತಾ ವಂಚಿಸುವ ಮನಸ್ಸುಗಳಿಗೆ ಇಡೀ ಸಮುದಾಯ ಧಿಕ್ಕಾರ ಹಾಕುವ ಪರಿಸ್ಥಿತಿ ಬಂದಿರುವುದು ನೆಗೆಟಿವ್ ಥಿಂಕಿಂಗ್.


ನೀವು ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಿ ಸಾಧನೆ ಮಾಡಿ ಅದನ್ನು ಪ್ರಶಂಸಿಸುವ ಶೇಕಡ 99 ರಷ್ಟು ಜನ ನಮಗಿಲ್ಲಿ ಮುಖ್ಯವಾಗುವುದಿಲ್ಲ. ಅದರ ನಡುವೆ ಕಾಲೆಳೆಯುವ, ತಮ್ಮತನವನ್ನು ಬೇಯಿಸಿಕೊಳ್ಳುವ ಮನೋಸ್ಥಿತಿಗಳ ಶೇಕಡ ಒಂದರಷ್ಟು ನಿಕೃಷ್ಟರ ಬಗ್ಗೆ ನಾವು ಅತ್ಯಂತ ಎಚ್ಚರವಾಗಿರುವುದು ಸತ್ಯ ಅಗತ್ಯವಾಗಿದೆ. ಹಾಗಾಗಿ ಹೇಳುವುದು ಕೆಲವರ ಕಣ್ಣಿಗೆ ನೀನು ಕಾಣಬೇಡ ನಿನ್ನ ಸಾಧನೆ ನಿನ್ನಷ್ಟಕ್ಕೆ ಇರಲಿ ಆ ಕಣ್ಣು ನಿನ್ನ ಮೇಲೆ ಬಿದ್ದರೆ ನೀನು ಅತಂತ್ರನಾಗುತ್ತೀಯಾ ಎನ್ನುವ ಹಿರಿಯರ ಮಾತು ಹಿಂದಿನ ವಾಸ್ತವದ ನೆಗೆಟಿವ್ ಥಿಂಕಿಂಗ್ ಸತ್ಯವಲ್ಲವೇ?
ಇಲ್ಲಿ ಮತ್ತೊಂದು ವಿಷಯವನ್ನು ನಿಮ್ಮ ಮುಂದೆ ಅತ್ಯಂತ ಸ್ಪಷ್ಟವಾಗಿ ಹೇಳಬೇಕಿದೆ. ಇತ್ತೀಚಿಗಷ್ಟೇ ನೆಗೆಟಿವ್ ಥಿಂಕಿಂಗ್ ಕುರಿತು ನಾನಾ ಸಕಾರಾತ್ಮಕ ಅಭಿಪ್ರಾಯಗಳನ್ನು ಒಂದೆಡೆ ಇಟ್ಟು ವಿಕಾರಾತ್ಮಕ ಅಭಿಪ್ರಾಯಗಳನ್ನು ಸಹ ಗಣನೆಗೆ ತೆಗೆದುಕೊಂಡದ್ದು ಅತ್ಯಂತ ಅಗತ್ಯ ಎನಿಸುತ್ತದೆ. ಏಕೆಂದರೆ ವಿಕಾರಾತ್ಮಕ ಮನಸುಗಳು ಸಾವಿರಗಟ್ಟಲೆ ಇರುವ ಸಕಾರಾತ್ಮಕ ಮೃದುತ್ವವನ್ನು ನಿರ್ನಾಮ ಮಾಡುತ್ತಾರೆ.


ಮನದ ಮೂಲೆಯಲ್ಲಿ ಋಣಾತ್ಮಕ ಅಂಶಗಳನ್ನು ನಿರ್ನಾಮ ಮಾಡುವ ಈ ವಿಕಾರಾತ್ಮಕ ಸ್ವರೂಪಿಗಳು ಅದೇ ಮೂಲೆಯಲ್ಲಿ ನಕಾರಾತ್ಮಕ ಅಂಶಗಳನ್ನು ತುಂಬುವುದು ನೈಜವಲ್ಲವೇ?
ಮುಂದುವರೆಯುವುದು

Exit mobile version