Site icon TUNGATARANGA

ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ರು ಶಿಕ್ಷಣ ಸಚಿವ ಮಧುಬಂಗಾರಪ್ಪ / ಯಾವುದೇ ಕಾರಣಕ್ಕೂ ಗ್ಯಾರಂಟಿ ಬಂದ್ ಅಗಲ್ಲ

ಶಿವಮೊಗ್ಗ: ಗ್ಯಾರಂಟಿಗಳ ಪರಿಷ್ಕರಣೆ ಅಥವಾ ಬಂದ್ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಗ್ಯಾರಂಟಿ ಐದು ವರ್ಷ ಗ್ಯಾರಂಟಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.


ಸ್ವಾತಂತ್ರ್ಯೋತ್ಸವದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಹಾರ ಸಂರಕ್ಷಣಾ ಘಟಕದ ಜತೆಗೆ ಶೀತಲೀಕರಣ ಘಟಕ ಆರಂಭಿಸಲಾಗುತ್ತದೆ. ಜಲಾಶಯಗಳ ಭದ್ರತೆ ಪರಿಶೀಲಿಸಲಾಗಿದೆ. ಜಿಲ್ಲೆಯ ಎಲ್ಲಾ ಜಲಾಶಯಗಳು ಸುಸ್ಥಿತಿಯಲ್ಲಿವೆ ಎಂದರು.


ಅರಣ್ಯ ಭೂಮಿ ಸಾಗುವಳಿ ಹಾಗೂ ಶರಾವತಿ, ವರಾಹಿ ಸಾವೆಹಕ್ಲು ಮೊದಲಾದ ಮುಳುಗಡೆ ಸಂತ್ರಸ್ತರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕಾನೂನುಪಾಲನೆಯ ಹೆಸರಿನಲ್ಲಿ ಜನರಿಗೆ ತೊಂದರೆ

ನೀಡದಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ. ಅರಣ್ಯವಾಸಿಗಳಿಗೆ ಖುಲ್ಲಾ ಮಾಡದಂತೆ ಕ್ರಮ ವಹಿಸಲಾಗಿದೆ ಎಂದರು.


ಗ್ಯಾರಂಟಿ ಯೋಜನೆಗಳು ಯಾರಿಗೆ ಸಿಕ್ಕುತ್ತಿಲ್ಲವೋ ಅಂತಹವರಿಗೆ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಕೊಡಿಸಲು ಬದ್ಧವಾಗಿದೆ. ಸೆಪ್ಟೆಂಬರ್ ನಲ್ಲಿ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ನೀಡಲು ಅಜೀಂ ಪ್ರೇಮ್ ಜಿ ೧೫೦೦ ಕೋಟಿ ರೂ. ನೀಡಿದ್ದಾರೆ ಎಂದರು.


ನಾಳೆ ಕುಬಟೂರಿನ ಕೆರೆಗೆ ಬಾಗಿನ ನೀಡಲಾಗುತ್ತದೆ. ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಯಡಿ ದಾನಿಗಳಿಂದ ದೇಶದ ದೇಣಿಗೆ ಪಡೆಯಲಾಗುತ್ತಿದೆ. ಇದಕ್ಕೆ ದಾನಿಗಳು ಮುಂದೆ ಬಂದಿದ್ದಾರೆ

. ೨೦೨೦ ರವರೆಗೆ ಅನುದಾನಿತ ಶಾಲೆಗಳಿಗೆ ೫ ಸಾವಿರ ಶಿಕ್ಷಕರ ನೇಮಕ ಮಾಡಲಾಗುತ್ತದೆ. ಸರ್ಕಾರ ಸದೃಢವಾಗಿ ಮುನ್ನಡೆಯುತ್ತಿದೆ ಎಂದರು.


ನೀರಾವರಿ ನಿಗಮದ ಹಣವನ್ನು ರಸ್ತೆ, ಚರಂಡಿಗಳಿಗೆ ಬಳಸದೆ ಅಣೆಕಟ್ಟು ದುರಸ್ತಿ, ಗೇಟುಗಳ ಸರಿಪಡಿಸಲು ಬಳಸಿಕೊಳ್ಳಬೇಕಿದೆ. ಗಾಜನೂರಿನ ತುಂಗಾ ಹಾಗೂ ಭದ್ರಾ ಜಲಾಶಯ ಸೋರಿಕೆ ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಬಲ್ಕೀಶ್ ಬಾನು, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಡಿಸಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್ ಕುಮಾರ್, ಜಿಪಂ ಸಿಇಓ ಇದ್ದರು.

Exit mobile version