ಚುಂಚಾದ್ರಿ ಕಪ್ ನಾಲ್ಕು ದಿನದಿಂದ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಶ್ರೀ ಮಠದಿಂದ ತುಂಬಾ ಅಚ್ಚುಕಟ್ಟಾಗಿ ಕ್ರೀಡಾ ಕೂಟ ನಡೆಸುತ್ತಿರುವುದು ಸಂತೋಷವಾಯಿತು ಎಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ತಿಳಿಸಿದರು.
ಅವರು ನಿನ್ನೆ ಸಂಜೆ ನೆಹರೂ ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ ಶಿವಮೊಗ್ಗ ಇವರ ಸಂಯುಕ್ತ ಆಶಯದಲ್ಲಿ ನಡೆಸಲಾದ ಚುಂಚಾದ್ರಿ ಕಪ್ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಂತ ಎಲ್ಲಾ ಕ್ರೀಡಾಪಟುಗಳಿಗೆ ವಸತಿ,ಊಟದ ವ್ಯವಸ್ಥೆಯನ್ನು ಮಾಡಿರುವುದನ್ನು ಕೇಳಿ, ಶ್ರೀಗಳು ಸಮಾಜಮುಖಿ
ಧಾರ್ಮಿಕ ಕೆಲಸ ಕಾರ್ಯಗಳಲ್ಲದೆ ಕ್ರೀಡೆಯಲ್ಲೂ ಮಹತ್ತರವಾದ ಕಾರ್ಯವನ್ನು ಮಾಡಿರುವುದು ಸ್ವಾಗತಾರ್ಹ. 22 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದು, ಈ ಕ್ರೀಡಾಕೂಟದಿಂದ ಉತ್ತೇಜಿತರಾಗಿ ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ.
ಇದೇ ಸಂದರ್ಭದಲ್ಲಿ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಅಂತಿಮ ಪಂದ್ಯದ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಳೆ ಬರುತ್ತಿದ್ದು, ಅಂದು ಕ್ರೀಡಾಪಟುಗಳ ತೊಂದರೆಯನ್ನು ಗಮನಿಸಿದ ಸಚಿವರು,ನೆಹರು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದೇನೆ. ಸಿಂಥೆಟಿಕ್ ಕ್ರೀಡಾಂಗಣಕ್ಕೆ ಫೆಡ್ ಲೈಟ್ ವ್ಯವಸ್ಥೆಯನ್ನು ಹಾಗೂ ವಾಲಿಬಾಲ್ ಅಂಕಣಕ್ಕೆ ಒಳಾಂಗಣ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಶ್ರೀ ಆದಿಶೂನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಕ್ರೀಡೆಯಲ್ಲಿ ಸೋಲುವುದು
ಸಾಮಾನ್ಯ ಆದರೆ ಕ್ರೀಡಾಪಟು ಎಂದೂ ಕೂಡ ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಆಟದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ ಆದರೆ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿರುತ್ತದೆ ಎಂದ ಅವರು, ಕ್ರೀಡೆಯಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ ಅಲ್ಲದೇ ಕ್ರೀಡೆ ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದರು.
ಕ್ರೀಡಾಪಟುಗಳಲ್ಲಿ ಅತ್ಯಂತ ಸಾಮರಸ್ಯವಿರುತ್ತದೆ ಇದು ಕ್ರೀಡಾ ಕ್ಷೇತ್ರದ ಗುಟ್ಟಾಗಿದೆ ಎಂದ ಅವರು, ಕ್ರೀಡೆ ತಮ್ಮ ಮಾನಸಿಕ ಬುದ್ದಿಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಕೂಡ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ನಮ್ಮ ಮಕ್ಕಳಿಗೆ ಹಾಗೂ ಸಮಾಜಕ್ಕೆ ಬೇಕಾಗುವ ಒಂದು ಒಳ್ಳೆಯ ಸಂಸ್ಕೃತಿ, ಸಂಸ್ಕಾರ,ಆತ್ಮವಿಶ್ವಾಸ ಅದನ್ನು ನಿರಂತರವಾಗಿ ಸಮಾಜಕ್ಕೆ ಕೊಡುಗೆಯಾಗಿ ಕೊಡುತ್ತಾ ಬಂದಿದೆ. ಓದು ವಕ್ಕಲು,ಬುದ್ಧಿ ಮುಕ್ಕಾಲು ಅಂದರೆ ಓದು ಏನು ಮಾಡುತ್ತದೆ ಅಂದರೆ ಕೆಲಸ ಮಾಡುತ್ತದೆ.
ದೇಶ ಏನನ್ನು ಮಾಡುತ್ತದೆ ಅಂದರೆ ದೇಶ ಆಳುತ್ತದೆ. ಅಂದರೆ ಓದಿನ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು. ಆಟಗಳು ನಮ್ಮ ದೇಹ ಮತ್ತು ಮನಸ್ಸನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೀವನದ ಎಲ್ಲಾ ಕಠಿಣ ಸವಾಲುಗಳನ್ನು ಎದುರಿಸಲು ನಮಗೆ ಪ್ರೋತ್ಸಾಹ ನೀಡುತ್ತದೆ ಎಂದರು.
ಬಾಲಕ ಮತ್ತು ಬಾಲಕಿಯರ ಮೂರು ಮತ್ತು ನಾಲ್ಕನೇ ಸ್ಥಾನದ ವಿವರ :
ಬಾಲಕಿಯರ ವಿಭಾಗದಲ್ಲಿ: ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಬಸವೇಶ್ವರ ಪ್ರೌಢಶಾಲೆ ಹಾಗೂ ರಾಷ್ಟ್ರೀಯ ಪಬ್ಲಿಕ್ ಪ್ರೌಢಶಾಲೆ ಶಿವಮೊಗ್ಗ ಇವರುಗಳ ಹಣಾ ಹಣಿ ಯಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಮೊದಲ ಸೆಟ್ಟಿನಲ್ಲಿ ಬಸವೇಶ್ವರ 25 ಅಂಕ, ಎನ್‌ಪಿಎಸ್ 13 ಅಂಕಗಳಿಸಿದ ರೆ, ಎರಡನೇ ಸೆಟ್ಟಿನಲ್ಲಿಯೂ ಬಸವೇಶ್ವರ ಪ್ರೌಢಶಾಲೆ 25 ಅಂಕ ಗಳಿಸುವುದರ ಮೂಲಕ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಆದಾಯಕ್ಕೆ ಸ್ಪರ್ಧೆಯನ್ನು ನೀಡಿದ ರಾಷ್ಟ್ರೀಯ ಪಬ್ಲಿಕ್ ಪ್ರೌಢಶಾಲೆ 18 ಅಂಕಗಳಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಬಾಲಕರ ವಿಭಾಗ : ಸೆಂಟ್ ಜೋಷಪ್ ಪ್ರೌಢಶಾಲೆ ಸಾಗರ ಹಾಗೂ ಸಹ್ಯಾದ್ರಿ ಪ್ರೌಢಶಾಲೆ ತೀರ್ಥಹಳ್ಳಿ ಈ ಎರಡು ತಂಡಗಳ ಮಧ್ಯೆ ರೋಚಕ ಪಂದ್ಯ ನಡೆಯಿತು. 25 – 19 ರ ಅಂತರದಲ್ಲಿ ಜೋಸೆಪ್ ಮೊದಲ ಸೆಟ್ಟನ್ನ ತನ್ನದಾಗಿಸಿಕೊಂಡರೆ, ಎರಡನೇ ಸೆಟ್ಟನ್ನು ಸಹ್ಯಾದ್ರಿ ಪ್ರೌಢಶಾಲೆ 25- 19 ಅಂಕಗಳ ಅಂತರದಲ್ಲಿ ಜಯಗಳಿಸಿ ಪಂದ್ಯವನ್ನ ದ್ರಾ ಮಾಡಿಕೊಂಡಿತ್ತು. ಮೂರನೇ ಸುತ್ತಿನಲ್ಲಿ ಎರಡು ತಂಡಗಳು ಸಮಬಲದ ಹೋರಾಟವನ್ನು ಮಾಡಿ 15 -08 ಅಂಕಗಳ ಅಂತರದಲ್ಲಿ 7 ಅಂಕಗಳಿಂದ ಸಹ್ಯಾದ್ರಿ ಪ್ರೌಢಶಾಲೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಸೆಂಟ್ ಜೋಸೆಫ್ ಪ್ರೌಢಶಾಲೆ ಮೂರನೇ ಸ್ಥಾನವನ್ನು ಮಡಿಗೇರಿಸಿಕೊಂಡಿತು.
ಬಾಲಕ ಮತ್ತು ಬಾಲಕಿಯರ ಪ್ರಥಮ ಮತ್ತು ದ್ವಿತೀಯ ಸ್ಥಾನದ ವಿವರ :
ಬಾಲಕರ ವಿಭಾಗ : ಅನ್ನಪೂರ್ಣ ಪ್ರೌಢಶಾಲೆ ತೀರ್ಥಹಳ್ಳಿ ಹಾಗೂ ಸೆಂಟ್ ಜೋಸೆಫ್ ಪ್ರೌಢಶಾಲೆ ಸಾಗರ ಈ ಎರಡು ತಂಡಗಳ ಮಧ್ಯೆ ಅಂತಿಮ ಪಂದ್ಯದಲ್ಲಿ ಉತ್ತಮ ಆಟದ ಪ್ರದರ್ಶನ ಕಂಡುಬಂದಿತು. ದಾಳಿ ಮತ್ತು ಅಷ್ಟೇ ರಕ್ಷಣಾತ್ಮಕ ಆಟವನ್ನು ಕಾಣಬಹುದಾಗಿತ್ತು. ಮೊದಲನೇ ಸೆಟ್ಟಿನಲ್ಲಿ ಆಗುಂಬೆ 25, ಅಂಕ ಪಡೆದರೆ,ಸಾಗರ ತಂಡ 22 ಅಂಕ ಪಡೆದು ಸೆಟ್ಟು ಪರಾಜಯಗೊಂಡಿತು.
ಎರಡನೇ ಶೆಟ್ಟಿನಲ್ಲಿ ಸಾಗರ ತಂಡ ಚೇತರಿಸಿಕೊಂಡು 25 ಅಂಕಗಳನ್ನು ಪಡೆದು ಎರಡನೇ ಸುತ್ತನ್ನು ತನ್ನದಾಗಿಸಿಕೊಂಡು ಮೂರನೇ ಸುತ್ತಿಗೆ ಅರ್ಹತೆಯನ್ನು ಪಡೆಯಿತು. ಆಗುಂಬೆ ತಂಡ 22 ಅಂಕಕ್ಕೆ ತೃಪ್ತಿ ಪಡಬೇಕಾಯಿತು.
ಮೂರನೇ ಸುತ್ತಿನಲ್ಲಿ ಎರಡು ತಂಡಗಳು ಸಮಬಲದ ಹೋರಾಟವನ್ನು ನೀಡಿ ಕೊನೆಯಲ್ಲಿ ಸೆಂಟ್ ಜೋಸೆಫ್ ಪ್ರೌಢಶಾಲೆ, 2024 ರ ಚುಂಚಾದ್ರಿ ಕಪ್ ವಾಲಿಬಾಲ್ ಟೋಪಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಅನ್ನಪೂರ್ಣ ಪ್ರೌಢಶಾಲೆ ಬಾಲಕರ ತಂಡವು ರೋಚಕ ಆಟದ ಪ್ರದರ್ಶನ ನೀಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಬಾಲಕಿಯರ ವಿಭಾಗ : ಶ್ರೀ ಆದಿಚುಂಚನಗಿರಿ ಪ್ರೌಢಶಾಲೆ ಶಿವಮೊಗ್ಗ ಹಾಗೂ ನಗರ ಪ್ರೌಢಶಾಲೆ ನಗರ,ಈ ಎರಡು ತಂಡಗಳ ಮಧ್ಯೆ ರೋಚಕ ಪಂದ್ಯ ನಡೆಯಿತು.ಮೊದಲ ಶೆಟ್ಟನ್ನ ನಗರ ಪ್ರೌಢಶಾಲೆ 25 -20 ಅಂಕಗಳಿಂದ ಮುನ್ನಡೆ, ಶ್ರೀ ಆದಿಚುಂಚನಗಿರಿ ಪ್ರೌಢ ಶಾಲೆ 20 ಅಂಕಗಳು ಗಳಿಸಿ ಪರಾಭವಗೊಂಡಿತು. ಎರಡನೇ ಸೆಟ್ಟಿನಲ್ಲಿಯೂ ಸಹ ನಗರ ಪ್ರೌಢಶಾಲೆ ಮತ್ತು ಆದಿಚುಂಚನ ಪ್ರೌಢಶಾಲೆ ಬಾಲಕಿಯರು ಅತ್ಯಾಕರ್ಷಕ,ಮನಮೋಹಕ ಆಟದ ಪ್ರದರ್ಶನ ನೀಡಿದರು ಕೂಡ ಕೊನೆಯಲ್ಲಿ ವಿಜಯಮಾಲೆ ನಗರ ಪ್ರೌಢ ಶಾಲೆಗೆ ದಕ್ಕಿತು.
ಬಾಲಕರ ವಿಭಾಗದಲ್ಲಿ ವೈಯುಕ್ತಿಕ ಬಹುಮಾನ : ಬೆಸ್ಟ್ ಅಟ್ಯಾಕರ್ ಸವಿತ್ ಎ ವಿ ಎಂ ಶಾಲೆ, ಬೆಸ್ಟ್ ಪಾಸರ್ ವಿಜ್ಞೇಶ್, ಸೆಂಟ್ ಜೋಸೆಫ್, ಬೆಸ್ಟ್ ಆಲ್ ರೌಂಡರ್ ಚರಣ್ , ಎ ವಿ ಎಂ ಶಾಲೆ, ಬೆಸ್ಟ್ ಬ್ಲಾಕರ್ ಮಿಲನ ಸಹ್ಯಾದ್ರಿ ತಂಡ, ಬೆಸ್ಟ್ ಲೀಬ್ರೋ ಅಜರ್ ಸೆಂಟ್ ಜೋಸೆಫ್,
ಬಾಲಕಿಯರ ವಿಭಾಗ : ಬೆಸ್ಟ್ ಅಟಾಕರ್ ಫಲಕ ನಗರ ತಂಡ, ಬೆಸ್ಟ್ ಬ್ಲಾಕರ್ ಸಂಜನಾ ಬಿ. ಆದಿಚುಂಚನಗಿರಿ, ಆಲ್ ರೌಂಡರ್ ಸಂಕಲ್ಪ, ಆದಿಚುಂಚನಗಿರಿ, ಬೆಸ್ಟ್ ಪಾಸರ್ ಲಕ್ಷ್ಮಿ ವಿ. ನಗರ ತಂಡ, ಬೆಸ್ಟ್ ನಿಬ್ರೋ ನೀತಾ ಬಸವೇಶ್ವರ ವಯುಕ್ತಿಕ ಬಹುಮಾನಗಳನ್ನು ಪಡೆದ ಪ್ರತಿಭಾನ್ವಿತರಾಗಿರುತ್ತಾರೆ.