Site icon TUNGATARANGA

ನೆಹರು ಕ್ರೀಡಾಂಗಣಕ್ಕೆ ಸಚಿವ ಮಧು ಭೇಟಿ/ ಅವ್ಯವಸ್ಥೆಯ ವಿರುದ್ಸ ಹಿಗ್ಗಾಮುಗ್ಗಾ ತರಾಟೆ

ಶಿವಮೊಗ್ಗ, ಆ.14:
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಶಿಕ್ಷಣ ಸಚಿವರೂ ಅಸದ ಮಧು ಬಂಗಾರಪ್ಪನವರು ನಗರದ ನೆಹರು ಕ್ರೀಡಾಂಗಣಕ್ಕೆ ಇಂದು ಸಂಜೆ ದಿಡೀರ್ ಭೇಟಿ ನೀಡಿ ಕ್ರೀಡಾಂಗಣದ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ ತಗೆದುಕೊಡರು.


ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಂದ ಹಾಗೂ ಸಾರ್ವಜನಿಕರಿಂದ ಸಮಸ್ಯೆಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತಿಳಿಸಿ ತಕ್ಷಣ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸುವ ಪೂರ್ವದಲ್ಲೇ ಈ ಬಗ್ಗೆ ಅಧಿಕಾರಿಗಳಿಗೆ ಜಾಡಿಸಿದ್ದು ವಿಶೇಷ.


ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರನ್ನು ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸ್ಥಳಕ್ಕೆ ತಕ್ಷಣ ಬರುವಂತೆ ತಿಳಿಸಿ ಕ್ರೀಡಾಪಟುಗಳಿಗೆ ಯಾವುದೇ ತೊಂದರೆ ಆಗದಂತೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಇನ್ನಿತರ ಮೂಲಬೂತ ಸೌಕರ್ಯಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.


ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಾಣಗೊಂಡ ಕಟ್ಟಡ, ನೀರಿನ ಟ್ಯಾಂಕ್ ಹಾಗೂ ಇನ್ನಿತರ ಕಾಮಗಾರಿಗಳು ಕಳಪೆಯಾಗಿದ್ದು ನೀರಿನ ಟ್ಯಾಂಕ್ ಸೋರುತ್ತಿದೆ ಎಂದು ಸಾರ್ವಜನಿಕರು ಸಚಿವರಲ್ಲಿ ದೂರಿದರು ಇದರಿಂದ ಕುಪಿತಗೊಂಡ

ಸಚಿವರು 16 ನೇ ತಾರೀಖಿನಂದು ನಡೆಯಲಿರುವ ಮಹಾನಗರ ಪಾಲಿಕೆಯ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಹಾಗೂ ಕಳಪೆ ಕಾಮಗಾರಿಯ ಪಟ್ಟಿಯೊಂದಿಗೆ ಸಭೆಗೆ ಬರಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು,


ಈ ನಡುವೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಕೇಳಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಇಂದು ನೀವು ಭೇಟಿ ನೀಡುತ್ತಿದ್ದೀರಿ ಎಂದು ತಿಳಿದು ನೀರಿನ ವ್ಯವಸ್ಥೆ ಮಾಡಿದ್ದಾರೆ ಎಂದು ಸಚಿವರ ಗಮನ ಸೆಳೆದಾಗ ಆಕ್ರೋಶಗೂಂಡ ಸಚಿವರು ಅಧಿಕಾರಿಗಳಿಗೆ ತರಾಟೆ

ತೆಗೆದುಕೊಂಡು ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಿರುವ ಹಾಗೆ ಕಾರ್ಯನಿರ್ವಹಿಸಬೇಕು ಒಂದೆರಡು ದಿನಗಳಲ್ಲಿ ಸಮಸ್ಯೆಗಳು ಬಗೆಹರಿಯದೆ ಇದ್ದಲ್ಲಿ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಫುಟ್ಬಾಲ್ ಆಟಗಾರರಿಗೆ

ಅನುಕೂಲವಾಗುವಂತೆ ಗ್ರೀನ್ ಲಾನ್ ಅಳಓಡಿಸುವಂತೆ ಸೂಚಿಸಿ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಪಟ್ಟಿ ತಯಾರಿಸಿ ನಾಳಿನ ಸಭೆಯಲ್ಲಿ ಮಂಡಿಸುವಂತೆ ತಿಳಿಸಿದರು.


ಈ ನಡುವೆ ಫುಟ್ಬಾಲ್ ಆಟಗಾರರು ತಮಗೆ ಟೂರ್ನಮೆಂಟ್ ಗೆ ತೆರಳಲು ಅಗತ್ಯವಿರುವ ಜರ್ಕಿನ್ ಶೂ ಹಾಗೂ ಶಾರ್ಟ್ಸ್ ಗಳನ್ನು ಒದಗಿಸುವಂತೆ ಮನವಿ ಸಲ್ಲಿಸಿದಾಗ ಪೂರಕವಾಗಿ ಸ್ಪಂದಿಸಿದ ಸಚಿವರು ನನ್ನ ವೈಯಕ್ತಿಕ ಹಣದಿಂದ ತಮಗೆ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು

Exit mobile version