Site icon TUNGATARANGA

ಸೊರಬ: ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ

ಸೊರಬ: ವೀರಶೈವ-ಲಿಂಗಾಯತ ಒಂದೇ ಆಗಿದ್ದು, ಯಾರು ಬೇರೆ ಬೇರೆ ಎಂದು ಭಾವಿಸದೇ ಎಲ್ಲರೂ ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲು ಮುಂದಾಗುವಂತೆ ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ಮಧ್ಯ ಕರ್ನಾಟಕ ಅಧ್ಯಕ್ಷ ಸಿ.ಪಿ ಈರೇಶ್ ಗೌಡ ಕರೆ ನೀಡಿದರು.

     ಶನಿವಾರ ಪಟ್ಟಣದ ಮುರುಘಾ ಮಠದಲ್ಲಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಗೌಡ ಕಡಸೂರು ಅವರ ಅಧ್ಯಕ್ಷತೆಯಲ್ಲಿ ನಡೆದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

   ಇತ್ತೀಚೆಗೆ ಧರ್ಮ ಒಡೆಯುವ ಕೆಲಸ ನಡೆಯುತ್ತಿದ್ದು, ಸಮಾಜದ ಜನ ಜಾಗೃತರಾಗಿರಬೇಕು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಂಘಟಿತವಾಗಿ ಸಮಾಜದ ಪರ ಕೆಲಸ ಮಾಡಬೇಕು.

    ಒಬಿಸಿ ಪಂಗಡಕ್ಕೆ ಸಿಗುವ ಸರ್ಕಾರದ ಸೌಲಭ್ಯ ನಮ್ಮ ಸಮಾಜಕ್ಕೆ ಸಿಗುತ್ತಿಲ್ಲ. ಸರ್ಕಾರ ವೀರಶೈವರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಈ ನಿಗಮದಿಂದ ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ, ರೈತರ ಕೃಷಿ ಕೊಳವೆ ಬಾವಿ ಮುಂತಾದ ಸಾಲ ಸೌಲಭ್ಯ ನಿಗಮದಿಂದ ಸಿಗುತ್ತದೆ.

ಪದಾಧಿಕಾರಿಗಳು ಈ ಬಗ್ಗೆ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಿ ಸೌಲಭ್ಯದ ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಸಿಗುವಂತೆ ಮಾಡಲು ಪದಾಧಿಕಾರಿಗಳು ಮುಂದಾಗಬೇಕು ಎಂದರು.

   ಗೌರವಾಧ್ಯಕ್ಷರಾಗಿ ಚಂದ್ರಶೇಖರ್ ನಿಜಗುಣ, ಅಧ್ಯಕ್ಷರಾಗಿ ಪಂಚಾಕ್ಷರಪ್ಪ ಗೌಡ ಬೆದವಟ್ಟಿ, ಉಪಾಧ್ಯಕ್ಷರುಗಳಾಗಿ ಶಿವಮೂರ್ತಿ ಕಡಸೂರು, ವಿಜಯ್ ಕುಮಾರ್ ಕೆ.ವಿ ಆನವಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಗುರುಗೌಡ ಗುಂಜನೂರು, ಸಹ ಕಾರ್ಯದರ್ಶಿಯಾಗಿ ಅವಿನಾಶ್ ಗೇರುಕೊಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಗೌಡ ಮಾವಲಿ, ಷಣ್ಮುಖ ಗೌಡ ಹರಳಿಗೆ, ಗಿರೀಶ್ ಗುಡ್ಡೆಕೊಪ್ಪ, ಸಂಚಾಲಕರಾಗಿ ನಾಗರಾಜ್ ಗೌಡ ಸಿ.ಪಿ, ಮಾವಲಿ, ಮಲ್ಲೇಶಪ್ಪ ಗೌಡ ಕುಂಶಿ, ಶರತ್ ಚಿಕ್ಕಾವಲಿ, ವಕ್ತಾರರಾಗಿ ಶಿವಯೋಗಿ, ಶಶಾಂಕ್ ಅಂಕರವಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.

Exit mobile version