Site icon TUNGATARANGA

ಹೋಲಿಸಿ ಪರಚಿಕೊಂಡ್ರು…?!, ತುಂಗಾತರಂಗ ನೆಗಿಟೀವ್ ಅಂಕಣದ ಸುತ್ತ…., ಜನಾಭಿಪ್ರಾಯ ಓದಿ

https://tungataranga.com/?p=33564
ನಂಬಿಕೆ ದ್ರೋಹಿಗಳ ಮನಸುಗಳೇ “ಹೊಲಸು”, ಗಜೇಂದ್ರಸ್ವಾಮಿ ಅವರ ನೆಗಿಟೀವ್ ಥಿಂಕಿಂಗ್ ಅಂಕಣ ಓದಿ
ಸಂಪೂರ್ಣ ಅಂಕಣ ಓದಲು ಮೇಲಿನ ಲಿಂಕ್ ಬಳಸಿ
ತುಂಗಾತರಂಗ ಗುಂಪಲ್ಲಿ ಇಲ್ಲದವರು ಇಲ್ಲಿ ಸೇರಿ
https://chat.whatsapp.com/IzhQLfWK8ud0fRtId61ehs

ಕಳೆದ ಎಂಟು ವಾರಗಳಿಂದ ನಿರಂತರವಾಗಿ ಹೊರ ಬರುತ್ತಿರುವ ನೆಗೆಟಿವ್ ಥಿಂಕಿಂಗ್ ವಾರದ ಅಂಕಣದ ಬಗ್ಗೆ ಸಾಕಷ್ಟು ಓದುಗರು ಮೆಚ್ಚುಗೆಯ ಮಾತನಾಡಿ ನಿಜ ಘಟನೆಗಳನ್ನು ಉದಾಹರಿಸಿ ಪ್ರಶಂಶಿಸಿದ್ದಾರೆ.


ಅದೇ ಬಗೆಯಲ್ಲಿ ಒಂದೆರಡು ಮನಸುಗಳು ಇದು ಎಲ್ಲಾ ಕಡೆ ಇರುವುದಿಲ್ಲ. ಯಾರೋ ಒಬ್ಬ ಮೋಸ ಮಾಡಿದ ಕ್ಷಣ ಎಲ್ಲರೂ ಮೋಸಗಾರರಲ್ಲ ಮೋಸ ಮಾಡುವುದೇ ನಿಜವಾಗಿದ್ದರೆ ಈ ಜಗತ್ತಿನಲ್ಲಿ ಪೂರ್ತಿ ಮೋಸವೇ ತುಂಬಿರುತ್ತಿತ್ತು. ಒಂದಿಬ್ಬರ ವಿಕೃತ ಮನಸ್ಸುಗಳು ಹೀಗೆ ಆಡಿರಬಹುದು ಎಂದು ಹೇಳಿದ್ದಾರೆ. ಮತ್ತೊಂದಿಷ್ಟು ಕಡೆ ಮನಸುಗಳು ಈ ಅಂಕಣವನ್ನು ಅತಿಯಾಗಿ ಹಚ್ಚಿಕೊಂಡು ಮುಂದಿನ ವಾರಕ್ಕೆ ಪೂರಕವಾದ ಮಾಹಿತಿಯನ್ನು ತಾವು ನೊಂದ ಕಳೆದುಕೊಂಡ ಕಥನಗಳನ್ನು ಎಳೆ ಎಳೆಯಾಗಿ ಹೇಳಿಕೊಂಡಿದ್ದಾರೆ.


ಇಲ್ಲಿ ಮತ್ತೊಬ್ಬರು ಅತ್ಯಂತ ವಿಶೇಷವಾದ ಸಲಹೆಯನ್ನು ನೀಡಿದ್ದಾರೆ. ಅವರ ಸಲಹೆಯನ್ನು ನಾನು ಅತ್ಯಂತ ಆತ್ಮೀಯವಾಗಿ ಗಂಭೀರವಾಗಿ ಪರಿಗಣಿಸಿದ್ದೇನೆ. ಅವರಿಗೆ ಅಭಿನಂದನೆ ಹೇಳುತ್ತೇನೆ. “ಈ ನೆಗೆಟಿವ್ ಥಿಂಕಿಂಗ್ ಅಂಕಣದಿಂದ ಸಾಕಷ್ಟು ಜನ ಹುಚ್ಚರಾಗುತ್ತಾರಂತೆ!, ಹುಚ್ಚಾಸ್ಪತ್ರೆಗಳು ತುಂಬುತ್ತವೆ” ಎಂದಿದ್ದಾರೆ.
ನಿಜಕ್ಕೂ ನೋಂದವನು ಮನದ ಮೂಲೆಯಲ್ಲಿ ಇಟ್ಟುಕೊಂಡಿರುವ ಸತ್ಯವನ್ನು ಹೊರ ಹಾಕುವ ಒಂದು ಪ್ರಯತ್ನ ಈ ಅಂಕಣ. ಇಲ್ಲಿ ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಉದ್ದೇಶಿಸಿ ಬರೆದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟವಾಗಿ ಹೇಳುತ್ತೇನೆ. ಜಗದ ಕೆಲವೇ ಕೆಲವು ವಂಚಕ ಮನಸ್ಸುಗಳನ್ನು ಮುಖ್ಯ ಪಾತ್ರಧಾರಿಗಳನ್ನಾಗಿ ಮಾಡಿಕೊಂಡು ಬರೆಯುತ್ತಿರುವ ಅಂಕಣ ಇದು.
ಬಹುತೇಕ ಜನ ನೊಂದು ಬಳಲುತ್ತಿರುವ ವಿಷಯ ಇದು ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ.
-ಲೇಖಕರು

ಅಂಕಣದ ಒಂದಿಷ್ಡು ಮಾಹಿತಿ

ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.


ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಅಂಕಣದ ಎಂಟನೇ ಅಂಕಣದ ಮತ್ತೊಂದು ವಿಶೇಷ. “ನಂಬಿಕೆ ದ್ರೋಹದ ಮನಸುಗಳೇ ಹೊಲಸು” ಓದಿ.
ನೆಗೆಟಿವ್ ಥಿಂಕಿಂಗ್ ಕಾಲಂಗೆ ಓದುಗರಿಂದ ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.


ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ, ಹಣ ಮಾಯೆನಾ? ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ”, “ಒಳ್ಳೆಯವರಾದ್ರೆ ನಾಕಾಣೆ ಸಾಲ ಸಿಗೊಲ್ಲ” ಓದಿದ್ದೀರಿ. ಇಂದು ಇಂದಿನ ವಿಶೇಷ ನೋಡಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ
   – ಸಂ

Exit mobile version