Site icon TUNGATARANGA

ನಂಬಿಕೆ ದ್ರೋಹಿಗಳ ಮನಸುಗಳೇ “ಹೊಲಸು”, ಗಜೇಂದ್ರಸ್ವಾಮಿ ಅವರ ನೆಗಿಟೀವ್ ಥಿಂಕಿಂಗ್ ಅಂಕಣ ಓದಿ

ವಾರದ ಅಂಕಣ-8
ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ

ಕಳ್ಳನೊಂಥರಾ ಹುಳ್ಳುಳ್ಳುಗೆ ಮನಸ್ಸು ಹೊಂದಿರುತ್ತಾನೆ ಎಂಬುದು ವಾಸ್ತವದ ಮಾಹಿತಿ. ಆದರೆ, ನಂಬಿಕೆಗೆ ದ್ರೋಹ ಬಗೆಯುವ ಮನಸ್ಸುಗಳಿಗೆ ನಮ್ಮ ನಡುವೆ ಯಾವ ಭಾಷೆಯಿಂದ ಯಾವ ಪದದಿಂದ ಹೋಲಿಕೆ ಮಾಡಬೇಕು.
ಜಗತ್ತಿನ ಮೂಲೆ ಮೂಲೆಗಳಲ್ಲಿ ಸುಳ್ಳು ಮನಸ್ಸು ಹೊಂದಿರುವ ನಂಬಿಕೆ ದ್ರೋಹದ ಮನಗಳನ್ನು ನಾವು ನಮ್ಮ ದೇಹದ ವಿಸರ್ಜಿತ ಮಲಕ್ಕೆ ಹೋಲಿಸುವುದು ಸರಿಯಲ್ಲವೇ?. ಇದು ಅತ್ಯಂತ ಹೊಲಸು ಎಂಬುದನ್ನು ಒಪ್ಪಿಕೊಳ್ಳಬೇಕಲ್ಲವೇ?
ನೆಗೆಟಿವ್ ಥಿಂಕಿಂಗ್ ಯೋಚನಾಲರಿಗೆ ಒಂದು ಬಗೆಯಲ್ಲಿ ವಿಚಿತ್ರ ಎನಿಸಿರುವುದು ಕೆಲವರ ನುಡಿಮುತ್ತುಗಳಲ್ಲಿ ಹೊರಬಿದ್ದಿರುವುದು ನಿಜಕ್ಕೂ ನಗುತರಿಸಿತು.


ಈ ನೆಗೆಟಿವ್ ಇಂದಿನ ಅನಿವಾರ್ಯತೆ ಏಕೆ ಮತ್ತು ಹೇಗೆ ಗೊತ್ತಾ?. ಒಟ್ಟಾರೆ ಇಂಡಿನ ದಿನಮಾನಗಳಲ್ಲಿ ಕೇವಲ ಮಳ್ಳಾಟದ ನಯವಂಚಕ ಮಾತುಗಳ ಮೂಲಕ ಮಿಗ್ದ ಜನರನ್ನು ಯಾಮಾರಿಸಿ ತಮ್ಮ ಬದುಕು ಕಟ್ಟಿಕೊಳ್ಳುವ ಕೆಲವೇ ಕೆಲವರ ವಂಚಕ ಮನಸ್ಸು ಹಾಗೂ ವಂಚಕ ವೃತ್ತಿಯ ಬಗ್ಗೆ ನಾವು ಎಷ್ಟೇ ಜಾಗೃತರಾಗಿದ್ದರೂ ಅದು ಕಡಿಮೆಯಾಗುತ್ತದೆ.
ಯಾರನ್ನು ನಂಬುವುದು ಯಾರನ್ನು ಬಿಡುವುದು ಯಾರು ನಂಬಿಕೆಗೆ ಅರ್ಹರು ಯಾರು ಅನರ್ಹರು ಎಂಬುದನ್ನು ಹುಡುಕುವುದು ಇಂದಿನ ದಿನಮಾನಗಳಲ್ಲಿ ಕಷ್ಟ ಸಾಧ್ಯವಾಗುತ್ತಿದೆ. ಹಾಗಾಗಿ ಕೊಡುವ ಮನಸಿದ್ದರೂ, ಪಡೆಯುವ ಮನಸ್ಸುಗಳ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳಲಾಗದೆ ಕೊಟ್ಟದ್ದು ಕಳೆದೋಯ್ತು ಮುಂದೆ ಮತ್ತೆ ಕಳೆದುಕೊಳ್ಳುವುದು ಬೇಡ ಎಂದು ತಲೆ ಅಲ್ಲಾಡಿಸುವಂತೆ ಕೊಡುವ ಮನಸ್ಸುವನ್ನು ವಿಚಿತ್ರವಾಗಿ ಬದಲಿಸುವ ವಂಚಕ ಮನಸುಗಳಿಗೆ ಧಿಕ್ಕಾರ ಹೇಳಲೇಬೇಕಿದೆ.


ಒಂದಂತೂ ಸತ್ಯ ನಮ್ಮ ನಡುವಿನ ನಾವು ಎಂಬ ಮನಸ್ಥಿತಿ ಈಗ ನಾನು ಎಂಬುದಕ್ಕೆ ಬದಲಾಗುತ್ತಿರುವುದು ಈ ನಂಬಿಕೆ ದ್ರೋಹದ ಕೆಲವರ ವರ್ತನೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಕೆಲವರೆಷ್ಟು ವಿಚಿತ್ರವಾಗಿ ಇರುತ್ತಾರೆ ಎಂಬುದನ್ನು ಒಂದೆಡೆ ಸೂಕ್ಷ್ಮವಾಗಿ ಗಮನಿಸಿದಾಗ ಸಾಲ ಪಡೆಯುವಾಗ ಹಿಂದೆ ಮುಂದೆ ಸುತ್ತಾಡಿ ಕೈ ಕಾಲು ಹಿಡಿದು ಪಡೆಯುವಾಗ ಪಡೆಯುವಾತ ಅದನ್ನು ವಾಪಸ್ ಕೊಡುವಾಗ ದಿನದೂಡುವ, ಜೊತೆಗೆ ಸುಮ್ಮನೆ ನೆಪಮಾತ್ರದ ಜಗಳ ಎನ್ನುವಂತೆ ನಾಟಕ ಮಾಡುತ್ತಾನೆ. ಮತ್ತೆ ಇನ್ನೇನಾದರೂ ದಕ್ಕಬಹುದೇ ಎಂದು ನಮ್ಮ ನಡುವೆ ಸುತ್ತುತ್ತಿರುತ್ತಾನೆ ಎಂಬುದನ್ನು ಬಹು ಸೂಕ್ಷ್ಮವಾಗಿ ಗಮನಿಸುವುದು ಅತ್ಯಂತ ಅಗತ್ಯ


ಇಂತಹ ಮನಸ್ಸುಗಳು ನಮ್ಮ ನಡುವೆ ಬೆರಳೆಣಿಕೆಯಷ್ಟಿದ್ದರೂ ಸಹ ಎಲ್ಲಾ ಮನಸುಗಳನ್ನು ನಾವು ಅನುಮಾನಿಸುವ ಅಗತ್ಯ ಬಂದಿರುವುದು ನಿಜಕ್ಕೂ ಇಂದಿನ ದುರಂತಗಳಲ್ಲಿ ದೊಡ್ಡದು ಎನ್ನಬಹುದು. ಕೇವಲ ನಾನು ಬದುಕಬೇಕು. ನಾನು ನನ್ನಷ್ಟಕ್ಕೆ ನಾನು ಎಂದು ಸ್ವಂತಿಕೆಯ ನಿಜ ದುಡಿಮೆಯಲ್ಲಿ ಬದುಕಿದರೆ ಅದನ್ನು ವಾಸ್ತವವಾಗಿ ಶ್ಲಾಘಿಸಬಹುದು. ಆದರೆ ಪಕ್ಕದವರ ಜೇಬಿಗೆ ಕೈ ಹಾಕಿ, ಮೋಸ ಮಾಡಿ ವಂಚಿಸಿ ಪಡೆಯುವ ಆ ಮೂಲಕ ತುತ್ತು ತಿನ್ನುವ ಮನುಜ ಮನದ ಕೆಲವರ ವರ್ತನೆ ಇಡೀ ಸಮಾಜವನ್ನು ಮತ್ತೊಂದು ವಿಚಿತ್ರ ಲೋಕಕ್ಕೆ ತೆಗೆದುಕೊಂಡು ಹೋಗುತ್ತಿರುವುದು ದುರಂತವಲ್ಲವೇ?
ನಿಮ್ಮಷ್ಟಕ್ಕೆ ನೀವು ಯೋಚಿಸಿ. ನೀವು ಸಾಲ ಪಡೆದಿರಬಹುದು ಅಥವಾ ಕೊಟ್ಟಿರಬಹುದು ಅದರಲ್ಲಿ ನ್ಯಾಯಸಮ್ಮತವಾದ ಎಷ್ಟೋ ವಿಷಯಗಳು ವಾಸ್ತವದ ಅಂಶಗಳು ನಡೆದಿರುತ್ತವೆ. ಆದರೆ ಅದರೊಳಗಿನ ಕೆಲವೇ ಕೆಲವರ ವರ್ತನೆ ನಿಮ್ಮನ್ನು ಇಡೀ ಸಮಾಜವನ್ನೇ ಪ್ರಶ್ನಿಸುವಂತೆ ನೋಡುವ ಮನೋಸ್ಥಿತಿಯನ್ನು ಮನದೊಳಗೆ ತುಂಬುವುದು ಇಂದಿನ ದಿನಮಾನಗಳಲ್ಲಿ ಹೆಚ್ಚುತ್ತಿರುವುದು ದುರಂತವಲ್ಲವೇ?.


ಕೇವಲ ಸ್ವಾರ್ಥ ಬುದ್ಧಿಯಿಂದ ತಮ್ಮ ಅಗತ್ಯಕ್ಕೆ ತಕ್ಕಂತೆ ತಮ್ಮನ್ನು ಉಳಿಸಿಕೊಳ್ಳಲು ಬದುಕಲು ಇನ್ನೊಬ್ಬರ ತಲೆಯ ಮೇಲೆ ಕೈ ಇಡುವುದು ಇನ್ನೊಬ್ಬರದನ್ನು ದೋಚುವುದು ಎಷ್ಟರಮಟ್ಟಿಗೆ ಸರಿ?
ಈ ಸಮಯದಲ್ಲಿ ನಿವೃತ್ತ ನ್ಯಾಯಮೂರ್ತಿ, ಹಿಂದಿನ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆ ಅವರ ಮಾತು ನೆನಪಾಗುತ್ತದೆ. ಅವರು ಇತ್ತೀಚೆಗೆ ಒಮ್ಮೆ ಭಾಷಣ ಮಾಡುವ ಸಂದರ್ಭದಲ್ಲಿ ಕೇಳಿದ್ದ ಆ ಸಾಲುಗಳನ್ನು ನಿಮ್ಮ ಮುಂದಿಡುವ ಒಂದು ಪ್ರಯತ್ನ ನಮ್ಮದು.


“ಜೈಲಿಗೋಗಿ ಜಾಮೀನು ತಗೊಂಡು ಬಂದಂತಹ ವ್ಯಕ್ತಿಗಳಿಗೆ ಸಲಾಂ ಮಾಡುವಂತಹ ಸಮಾಜದಲ್ಲಿ ನಾವಿದ್ದೇವೆ. ಜಾಸ್ತಿ ಓದಬೇಕು ದೊಡ್ಡ ಹುದ್ದೆಗೆ ಹೋಗಬೇಕು, ಶ್ರೀಮಂತರಾಬೇಕು, ಕೋಟ್ಯಾಂತರ ರೂ ಆದಾಯ ಮಾಡಿ ಏನೂ ತಪ್ಪಿಲ್ಲ. ಆದರೆ, ಅದು ಕಾನೂನಿನ ಚೌಕಟ್ಟಿನಲ್ಲಿರಲಿ. ಅದು ನಿಮ್ಮದೇ ದುಡಿಮೆಯಾಗಿರಬೇಕು. ಆದರೆ, ಇನ್ನೊಬ್ಬರ ಹಣ ದೋಚಬೇಡಿ, ಇನ್ನೊಬ್ಬರ ಹೊಟ್ಟೆ ಮೇಲೆ ಹೊಡೆಯಬೇಡಿ.
“ಸಂತೋಷ್ ಹೆಗ್ಡೆ ಅವರು ಇಲ್ಲಿ ಹೇಳಿದ ವಿಷಯ ವಾಸ್ತವವಾಗಿ ಪ್ರಸ್ತುತವಾಗಿದೆ. ಇಲ್ಲಿ ಅವರ ಹೇಳಿಕೆಯಂತೆ ಎಷ್ಟೇ ದುಡಿಯಲಿ. ಆದರೆ ಅದು ನಿಯತ್ತಾದ ದುಡಿಮೆ ಆಗಿರಲಿ ಎಂದಿರುವುದು ಇಷ್ಟೊಂದು ಸತ್ಯವಾಗಿ ಕಾಣುತ್ತದೆ. ಅದೇ ಇನ್ನೊಬ್ಬರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದಿರುವುದು ಅದೆಷ್ಟು ವಿಕೃತ ಮನಸ್ಸುಗಳನ್ನು ಬಡಿದೆಬ್ಬಿಸುತ್ತದೆ.


ತಮ್ಮ ತಮ್ಮ ಹಿತಾಸಕ್ತಿಗೋಸ್ಕರ ತಮ್ಮ ತಮ್ಮ ಬೇಳೆ ಕಾಳು ಬೇಯುವುದಕ್ಕೋಸ್ಕರ ಮಾಡುವ ಅನ್ಯಾಯ ವಂಚನೆ ನಿಜಕ್ಕೂ ಬೇಸರವನ್ನು ಮೂಡಿಸುತ್ತದೆ. ಅದರ ನಡುವೆ ಒಳ್ಳೆಯ ಮನಸುಗಳು ನಮ್ಮ ನಡುವೆ ಕಳೆದುಹೋಗುತ್ತಿರುವುದು ನಂತರದ ದಿನಮಾನಗಳಲ್ಲಿ ಆಗುವ, ಆಗಬಹುದಾದ ಬದಲಾವಣೆಗಳನ್ನು ನೆನೆದರೆ ಭಯ ಹುಟ್ಟುತ್ತದೆ.

Exit mobile version