Site icon TUNGATARANGA

ಹೊಸನಗರ:ಅರಣ್ಯ ಪ್ರದೇಶದಲ್ಲಿ ಸಾಗುವಳಿ: ತೆರವುಗೊಳಿಸಿದ ಅರಣ್ಯ ಇಲಾಖೆ

ಹೊಸನಗರ; ಅರಣ್ಯಒತ್ತುವರಿಕುರಿತುರಾಜ್ಯ ಸರಕಾರ ತಳೆದಿರುವ ಬಿಗಿ ನಿಲುವಿನ ಪರಿಣಾಮಅರಣ್ಯಇಲಾಖೆಯನ್ನು ಚುರುಕುಗೊಳಿಸಿದೆ. ತಾಲೂಕಿನ ಕಸಬಾ ಹೋಬಳಿಯಲ್ಲಿ ಆಗಿದ್ದಅರಣ್ಯ ಭೂಮಿಒತ್ತುವರಿಯ

ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರ್ಯಚರಣೆ ನಡೆಸಿದ ಅಧಿಕಾರಿಗಳು ಅನಧಿಕೃತಒತ್ತುವರಿ ತೆರವುಗೊಳಿಸಿದ್ದಾರೆ.
ಹರಿದ್ರಾವತಿಗ್ರಾಮ ಪಂಚಾಯಿತಿ ವ್ಯಾಪ್ತಿಯದೊಂಬೆಕೊಪ್ಪಗ್ರಾಮದ

ಸರ್ವೆ ನಂ.೩೯ ಹಾಗೂ ಶುಂಠಿಕೊಪ್ಪಗ್ರಾಮದ ಸರ್ವೆ ನಂಬರ್ ೩೩ರಲ್ಲಿ ಆಲಗೇರಿಮಂಡ್ರಿ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು ೨ ಎಕರೆ ಹಾಗೂ ಹಿರೇಮೈತಿಗ್ರಾಮದ ಸರ್ವೆ ನಂಬರ್ ೧ ರಲ್ಲಿಅಂದಾಜು ೨

ಎಕರೆಅರಣ್ಯ ಭೂ ಪ್ರದೇಶವನ್ನುಒತ್ತುವರಿ ಮಾಡಿ ಸಾಗುವಳಿ ಮಾಡಲು ಮುಂದಾಗಿದ್ದರು.

ತೆರವುಗೊಳಿಸಿದ ಪ್ರದೇಶವನ್ನು ವಶಕ್ಕೆ ಪಡೆದಅರಣ್ಯ ಇಲಾಖೆ ಅಧಿಕಾರಿಗಳು ಕಾಡುಜಾತಿಯ ಗಿಡಗಳನ್ನು ನೆಟ್ಟಿದ್ದಾರೆ. ವಲಯಅರಣ್ಯಾಧಿಕಾರಿರಾಘವೇಂದ್ರಅವರ ಸಮ್ಮುಖದಲ್ಲಿಕಾರ‍್ಯಾಚರಣೆ ನಡೆಯಿತು.

Exit mobile version