Site icon TUNGATARANGA

ಅನಿರೀಕ್ಷಿತ ಬಾಲಕಾರ್ಮಿಕ ತಪಾಸಣೆ ಕಾರ್ಯಾಚರಣೆ ,ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವ ಮಾಲೀಕರಿಗೆ ಗ್ರಹಚಾರ ಭಾರೀ ದಂಡದೊಂದಿಗೆ 6 ತಿಂಗಳಿನಿಂದ 2 ವರ್ಷದವರೆಗೆ ಜೈಲು ಶಿಕ್ಷೆ

ಶಿವಮೊಗ್ಗ ಆಗಸ್ಟ್ ೦೯ : ಆ.೦೬ ರಂದು ಶಿವಮೊಗ್ಗ ನಗರದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಅನಿರೀಕ್ಷಿತ ಬಾಲಕಾರ್ಮಿಕ ಹಾಗೂ

ಕಿಶೋರಾಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, ೧೯೮೬ ಹಾಗೂ ತಿದ್ದುಪಡಿ ಕಾಯ್ದೆ ೨೦೧೬ರನ್ವಯ ಶಿವಮೊಗ್ಗ ನಗರದ ಬೈಪಾಸ್ ರಸ್ತೆ, ನ್ಯೂಮಂಡ್ಲಿ ಹಾಗೂ ಎನ್.ಟಿ ರಸ್ತೆಗಳಲ್ಲಿನ ಗ್ಯಾರೇಜ್, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಒಬ್ಬ ಕಿಶೋರಾ ಕಾರ್ಮಿಕನನ್ನು ರಕ್ಷಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.

ಈ ತಪಾಸಣೆಯಲ್ಲಿ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಥವಾ ಕೆಲಸ ಮಾಡಲು ಅವಕಾಶ ಮಾಡಿಕೊಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಹಾಗೂ ನೇಮಿಸಿಕೊಂಡ 

ಮಾಲೀಕರ ವಿರುದ್ಧ ರೂ.೨೦,೦೦೦/- ರಿಂದ ರೂ.೫೦,೦೦೦/-ಗಳವರೆಗೆ ದಂಡವನ್ನು ಅಥವಾ ೬ ತಿಂಗಳಿನಿಂದ ೨ ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಅರಿವು ಮೂಡಿಸಲಾಯಿತು. 

ಕಾರ್ಯಚರಣೆಯಲ್ಲಿ ಎಂ.ಕೃಷ್ಣ ಕಾರ್ಮಿಕ ನಿರೀಕ್ಷಕರು-೦೧ನೇ ವೃತ್ತ, ಕಾರ್ಮಿಕ ಇಲಾಖೆ ಶಿವಮೊಗ್ಗ, ರಘುನಾಥ ಎ.ಎಸ್ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ವರ್ಗದವರು ಹಾಜರಿದ್ದರು.

Exit mobile version